Sunday, October 6, 2024

Nutrient deficiency symptoms-ಸಸ್ಯ/ಬೆಳೆಗಳಲ್ಲಿ ಸಾರಜನಕ, ರಂಜಕ, ಪೋಟ್ಯಾಷ ಪೋಷಕಾಂಶಗಳ ಕೊರತೆಯ ಲಕ್ಷಣ ಗುರುತಿಸುವುದು ಹೇಗೆ!

ಸಸ್ಯಗಳು/ ಬೆಳೆಗಳು ಚೆನ್ನಾಗಿ ಬೆಳವಣಿಗೆ ಆಗ ಬೇಕಾದರೆ 16 ಪೋಷಕಾಂಶಗಳು ಬೇಕಾಗುತ್ತದೆ. ಅದರಲ್ಲಿ 9 ಪೋಷಕಾಂಶಗಳನ್ನು ರೈತರು ಬೆಳೆಗಳಿಗೆ ಕೊಡಬೇಕಾಗುತ್ತದೆ. ಈ ಪೋಷಕಾಂಶಗಳ ಕೊರತೆ ಉಂಟಾದರೆ ಬೆಳೆಗಳ ಬೇರು ಬೆಳವಣಿಗೆ, ಹೂ ಬಿಡುವಿಕೆ, ಕಾಯಿ ಕಟ್ಟುವಿಕೆ ಹೀಗೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪೋಷಕಾಂಶಗಳ ವಿಧಗಳು
ಪ್ರಥಮ ಪೋಷಕಾಂಶಗಳು

1)ಸಾರಜನಕ 2)ರಂಜಕ 3)ಪೋಟ್ಯಾಷಿಯಂ

ಮಧ್ಯಮ ಪೋಷಕಾಂಶಗಳು
1)ಕ್ಯಾಲ್ಸಿಯಂ 2)ಮ್ಯಾಗ್ನಿಷಿಯಂ 3)ಗಂಧಕ

ತೃತೀಯ/ಅತೀ ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶಗಳು
1)ತಾಮ್ರ 2)ಮ್ಯಾಂಗನೀಸ್‌ 3)ಸತು 4)ಕಬ್ಬಿಣ 5)ಮಾಲಿಬ್ಡಿನಂ 6)ಬೋರಾನ್ 7)ಕ್ಲೋರಿನ್‌ 8)ನಿಕ್ಕಲ್‌
ಸಾರಜನಕ ಗೊಬ್ಬರದ ಮಹತ್ವ
ಸಾರಜನಕ ಇದು ಸಸ್ಯಗಳಿಗೆ ಆಧಾರ ಪೋಷಕವಾಗಿದ್ದು, ಸಸ್ಯಗಳಲ್ಲಿ ಎಲೆ, ಕಾಂಡಗಳ ಬೆಳವಣಿಗೆಯನ್ನುಂಟು ಮಾಡುತ್ತದೆ.

ಕೊರತೆಯ ಗುಣಲಕ್ಷಣಗಳು
1)ಸಸ್ಯದ ಕೆಳಭಾಗದ ಎಲೆಗಳು ಹಳದಿಯಾಗಿ ಮೇಲಿನ ಎಲೆಗಳು ಹಸಿರಾಗುವುದು.
2)ಬೆಳವಣಿಗೆ ಕುಂಠಿತಗೊಂಡು ಇಳುವರಿ ಮತ್ತು ಪ್ರೋಟಿನ್‌ ಅಂಶ ಕಡಿಮೆಯಾಗುತ್ತದೆ.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ರಂಜಕ ಗೊಬ್ಬರದ ಮಹತ್ವ
ರಂಜಕವು ಸಸ್ಯ ಶರೀರ ವ್ಯಾಪಕಕ್ಕೆ ಇದು ಅವಶ್ಯ.ಶರ್ಕರ ಪಿಷ್ಟಾದಿಗಳು ಮಾರ್ಪಾಡಾಗಿ ಶಕ್ತಿ ಒದಗಿಸುವ ಕ್ರಿಯೆಯಲ್ಲಿ ರಂಜಕದ ಪಾತ್ರ ಮುಖ್ಯವಾಗಿರುತ್ತದೆ. ಹಾಗೂ ಬೇರು ವೃದ್ಧಿಗೆ, ಹೂವು ಮತ್ತು ಕಾಳು ಕಟ್ಟುವ ಕ್ರಿಯೆಗೆ ಅವಶ್ಯಕ.

ಕೊರತೆಯ ಗುಣಲಕ್ಷಣಗಳು
1)ಮಾಗಿದ ಎಲೆಗಳು ನೀಲಿ ಮಿಶ್ರಿತ ಹಸಿರು ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗುವುದು.
2)ಬೇರಿನ ಬೆಳವಣಿಗೆ ಕುಂಠಿತವಾಗುವುದು ಹಾಗೂ ಪೈರು/ಬೆಳೆ ಮಾಗುವುದು.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ಪೋಟ್ಯಾಷ್‌ ಗೊಬ್ಬರದ ಮಹತ್ವ
ಕಾಂಡ,ಚಿಗುರು ಸಮರ್ಪಕವಾಗಿ ಹಾಗೂ ಆರೋಗ್ಯವಾಗಿ ಇರಲು ಸಹಾಯಕವಾಗಿದೆ. ಶರ್ಕರ ಪಿಷ್ಟಾದಿಗಳ ತಯಾರಿಕೆಗೆ ಪೊಟ್ಯಾಶಿಯಂ ಅವಶ್ಯವಾಗಿದೆ.

ಕೊರತೆಯ ಗುಣಲಕ್ಷಣಗಳು
1)ಎಲೆಯ ಅಂಚಿನ ಹರಿತ್ತು ನಾಶವಾಗಿ ಬಿಳುಪಾಗುತ್ತದೆ.
2)ಹಳೆಯ ಎಲೆಗಳ ತುದಿ ಸುಟ್ಟಂತೆ ಆಗಿ ಕಂದು ಬಣ್ಣಕ್ಕೆ ತಿರುಗುವುದು.
3)ಬೆಳೆಯ ಕಾಂಡ ಶಕ್ತಿ ಹೀನವಾಗಿ ಬೆಳೆ ನೆಲಕ್ಕೆ ಬೀಳುವುದು.

ಇನ್ನೂ ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಹಾಗೂ ಹತ್ತಿರದ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles