Sunday, October 6, 2024

Aadhar and pahani link list : ಆಧಾರ್‍ ಮತ್ತು ಪಹಣಿ ಜೋಡಣೆ ಯಾಕೆ? ಆಧಾರ್‍ ಮತ್ತು RTC ಜೋಡಣೆ ಮಾಡಿಸಿರುವ ರೈತರ ಪಟ್ಟಿ!!

ಆತ್ಮೀಯ ರೈತ ಬಾಂದವರೇ ಕರ್ನಾಟಕ ಸರ್ಕಾರವು ಆಧಾ‌ರ್ ಮತ್ತು ಆರ್‌ಟಿಸಿ ಅಥವಾ ಪಹಣಿಯನ್ನು ಜೋಡಿಸುವುದಕ್ಕೆ ಈಗಾಗಲೇ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಗೆ ಸೂಚಿಸಿದೆ. ಆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಅವರಿಗೆ ಪರಿಹಾರ ಕ್ರಮಗಳನ್ನು ಒದಗಿಸುವುದಕ್ಕೆ “ಶಾಶ್ವತ ವ್ಯವಸ್ಥೆ” ರೂಪಿಸಲು ಸರ್ಕಾರ ಆಲೋಚನೆ ನಡೆದಿದೆ. ಹಾಗಿದ್ದರೇ ಸರ್ಕಾರ ಈ ಆಧಾರ ಮತ್ತು ಪಹಣಿ ಜೋದಣೆ ಮಾಡಲು ಮುಖ್ಯ ಕಾರಣವೇನು? ಸಂಪೂರ್ಣ ವಿವರ ಈ ಲೇಖನದಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಸಣ್ಣ ಮತ್ತು ಅತಿ ಸಣ್ಗ ರೈತರ ಮಾಹಿತಿ:
ಕರ್ನಾಟಕದಲ್ಲಿರುವುದು ಶೇ. 44 ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು (ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು), ಆದರೆ ವಾಸ್ತವದಲ್ಲಿ, ರಾಜ್ಯದ 70 ಪ್ರತಿಶತದಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ರಾಜ್ಯದ ಕಂದಾಯ ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ:ಈ ಜಿಲ್ಲೆಯ ರೈತರಿಗೆ 50.298 ಕೋಟಿ ರೂ ಮಧ್ಯಂತರ ಬೆಳೆ ವಿಮೆ

Aadhar and pahani Linking Benefit: ಆಧಾರ್ ಮತ್ತು RTC ಪಹಣಿ/ ಆರ್‌ಟಿಸಿ ಜೋಡಣೆಯಿಂದ ಏನು ಪ್ರಯೋಜನ?

ಈ ರೀತಿ ಆಧಾ‌ರ್ ಮತ್ತು ಆರ್‌ಟಿಸಿ ಅಥವಾ ಪಹಣಿಯ ಜೋಡಣೆಯ ಮಾಡುವದರಿಂದ ಭೂ-ಸಂಬಂಧಿತ ವಂಚನೆಗಳನ್ನು ನಿಗ್ರಹಿಸುವುದು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಜಮೀನು ಮಾಲೀಕತ್ವದ ವಿಚಾರದಲ್ಲಿ ಮಾಲೀಕತ್ವವನ್ನು ಖಾತ್ರಿಪಡಿಸುವುದು ಸಾಧ್ಯವಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಾವು ಒದಗಿಸಿದ ಆಧಾ‌ರ್ ಆಧಾರಿತ ದತ್ತಾಂಶಗಳನ್ನು ಪರಿಶೀಲಿಸಿ, ಬರಪರಿಹಾರವನ್ನ ಒದಗಿಸಲು ಈ ಮಾಹಿತಿ ಬಹಳ ಮುಖ್ಯವಾಗಿದೆ.


ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಬೆಳೆಹಾನಿ, ಬರ ಪರಿಹಾರ,ಅತೀವೃಷ್ಟಿ, ಪ್ರವಾಹ , ಪರಿಹಾರವನ್ನು ತಲುಪಿಸುವುದಕ್ಕಾಗಿ ಮತ್ತು ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಸಹಾಯಧನದಲ್ಲಿ ಸಿಗುವ ಪರಿಕರಗಳನ್ನು ಮತ್ತು ಬಿತ್ತನೆ ಬೀಜ, ರಸಗೊಬ್ಬರಗಳನ್ನು ಪಡೆಯಲು ಶಾಶ್ವತ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ,
ಇದಕ್ಕಾಗಿ ನಾವು ಎಲ್ಲಾ ಆರ್‌ಟಿಸಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮತ್ತು ಆಧಾ‌ರ್ ದೃಢೀಕರಣವನ್ನು ಬಳಸಲು ಸರ್ಕಾರ ಚಿಂತಿಸಿದೆ.

What is RTC? RTC ಎಂದರೇನು? ಇದರಲ್ಲಿ ಇರುವ ಮಾಹಿತಿ ಏನು?
RTC,ಆರ್‌ಟಿಸಿ ಎಂದರೆ ರೆಕಾರ್ಟ್ಸ್ ಆಫ್ ರೈಟ್ಸ್, ಟೆನನ್ಸಿ ಆಂಡ್ ಕ್ರಾಪ್ಸ್. ಇದನ್ನೇ ಪಹಣಿ ಎಂದೂ ಕರೆಯುತ್ತಾರೆ. ಇದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಹೊರೆ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಗಳಿರುತ್ತವೆ.

ಇದನ್ನೂ ಓದಿ:2023-24ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ.

ರೈತರಿಗೆ ಪರಿಹಾರ ವಿತರಣೆಗೆ ಸುಧಾರಿತ ವ್ಯವಸ್ಥೆ
ರೈತರಿಗೆ ಪರಿಹಾರ ವಿತರಣೆ ವ್ಯವಸ್ಥೆಯನ್ನು ಎಂಡ್ ಟು ಎಂಡ್ ಆಟೋಮೇಷನ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ತಿಳಿಸಿದರು.
ಸರ್ಕಾರ ಪ್ರತಿ ಬಾರಿಯು ಪ್ರಕೃತಿ ಅಂತ ವಿಕೋಪಗಳಾದರೆ ಉದಾ: ಬೆಳೆಹಾನಿ, ಅಂತಹ ಪರಿಹಾರದ ಹಣವನ್ನು ಧನಸಹಾಯವನ್ನು ಸರ್ಕಾರ ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ನಷ್ಟವಾದ ಫಲಾನುಭವಿಗಳಿಗೆ ರಾಜ್ಯದ SDRF and ಕೇಂದ್ರದ NDRF ಮಾರ್ಗಸೂಚಿಯಂತೆ ಹಣವನ್ನು DBT ಮೂಲಕ ಜಮಾವಣೆ ಮಾಡುತ್ತಿತ್ತು. ಈ ತಂತ್ರಾಂಶದಲ್ಲಿ ಬಹಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗದೇ ಇರುವ ಕಾರಣಕ್ಕೆ ಈ ವರ್ಷ ಸರ್ಕಾರ ಬೆಳೆ ನಷ್ಟದ ನೋಂದಣಿಯನ್ನು ಕೃಷಿ ಇಲಾಖೆಯ ಪ್ರೂಟ್ಸ Fruits ತಂತ್ರಾಂಶದಲ್ಲಿ ನೋಂದಾಯಿಸಲು ತಿರ್ಮಾನಿಸಿದೆ.

FID list:(Farmer Identification document): ಬರ ಪರಿಹಾರದ ರೈತರ ಪಟ್ಟಿ:
2023-24 ನೇ ಸಾಲಿನಲ್ಲಿ ಬರ ಪರಿಹಾರ ಪಡೆಯಲು ಸರ್ಕಾರದಿಂದ ಬರಗಾಲ ಪ್ರದೇಶ ಎಂದು ಘೋಷಣೆಯಾದ ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

Aadhar and pahani link list: ಮೊದಲು ಈ ಕಾಣಿಸಿರುವ ಲಿಂಕ್ ಮೇಲೆ ಓತ್ತಿ bara parihara Farmer list ನಂತರ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಸರ್ಚ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ರೈತರ ನೋಂದಣಿ ಸಂಖ್ಯೆ” FID10070000xxxxx” ದೊರೆಯುವುದು. ಈ ರೀತಿ FID ಐಡಿ ತೋರಿಸಿದರೇ ಆಧಾ‌ರ್ ಮತ್ತು ಆರ್‌ಟಿಸಿ ಅಥವಾ ಪಹಣಿಯನ್ನು ಜೋಡಣೆ ಯಾಗಿದೆ ಅಂತ ಅರ್ಥ.

ಹಾಗೂ ಈ ರೀತಿ FID ಜೋಡಣೆಯಾಗಿರುವ ರೈತರ ಹೆಸರಿಗೆ ಇರುವ ಎಲ್ಲಾ ಸರ್ವೆ ನಂಬರ್‍ ನೋಂದಣಿಯಾಗಿವೆ ಅಂತ ಒಮ್ಮೇ ಹತ್ತಿರ ಕೃಷಿ ಇಲಾಖೆ, ಗ್ರಾಮ ಓನ್, ಅಥವಾ ಕರ್ನಾಟಕ ಓನ್, ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ,
ಒಂದು ವೇಳೆ ಎಲ್ಲಾ ಸರ್ವೇ ನಂಬರ್‍ ನೋಂದಣಿಯಾಗಿದ್ದರೆ ನಿಮಗೆ ಬರಪರಿಹಾರ ಹಣ ಸದ್ಯದಲೇ ಜಮಾ ಆಗುವುದು ಖಚಿತ.

ಇದನ್ನೂ ಓದಿ: ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ವಿಜೇತರಿಗೆ ಆಕರ್ಷಕ ನಗದು ಬಹುಮಾನ

ಬರ ಪರಿಹಾರವನ್ನು ಪಡೆಯೋದಕ್ಕೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ ಪ್ರೊಟ್ ಐಡಿಯಲ್ಲಿ ರೈತರು ಸೂಕ್ತ ಮಾಹಿತಿ ದಾಖಲಿಸಬೇಕಿದೆ. ಈ ಮಾಹಿತಿಯಂತೆ, ನಿಮಗೆ ನೀಡಿರುವಂತ ಫೂಟ್ ಐಡಿಯ ಆಧಾರದಲ್ಲಿ, ಮತ್ತು ಬೆಳೆ ಸಮೀಕ್ಷೆ ಅದರಲ್ಲಿ ನಮೂದಿತವಾಗಿರುವ ಬೆಳೆಯ ಆಧಾರ ಮೇಲೆ ಮತ್ತು ಸರ್ವೆ ನಂಬರ್ ಗಳು ಆಧಾರ್ ಲಿಂಕ್ ಗೆ ಆಗಿರುವ ಆಧಾರದ ಮೇಲೆ ಬರ ಪರಿಹಾರವನ್ನು ರೈತರ ಖಾತೆಗೆ ನೇರ ನಗದು ಮೂಲಕ ಜಮಾ ಮಾಡಲಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles