Friday, September 20, 2024

ಸಸ್ಯ ಪೋಷಕಾಂಶಗಳ ಕೊರತೆಯ ಲಕ್ಷಣಗಳು

ಬೋರಾನ್ :

ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.


ಕ್ಯಾಲ್ಸಿಯಂ:

ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ ಚಿಗುರೆಲೆಗಳು ಬಿಳಿಚಿಗೊಳ್ಳುತ್ತದೆ ಎಲೆಗಳ ತುದಿಯಲ್ಲಿ ಕೊಂಡಿ ಆಕಾರದ್ದಾಗಿ ತುದಿ ಮತ್ತು ಅಂಚಿ ನಲ್ಲಿ ಒಣಗಿ ತುದಿಯಲ್ಲಿಯ ಮೊಗ್ಗುಗಳು ಒಣಗುತ್ತವೆ.


ರಂಜಕ :

ಇದರ ಅಭಾವದಿಂದ ಹಸಿರು ಇದ್ದ ಎಲೆಗಳ ಬಣ್ಣವು ತಿಳಿ ಹಸಿರಾಗಿ ಅದರ ನರಗಳು ಹೆಚ್ಚು ನಿಸ್ತೇಜವಾಗಿ ಕಾಣುತ್ತವೆ. ಈ ಎಲೆಗಳಲ್ಲಿ ಚುಕ್ಕುಗಳು ಕಾಣುವುದಿಲ್ಲ.


ಕಬ್ಬಿಣ :

ಇದರ ಕೊರತೆಯಿಂದ ಎಲೆಗಳು ಬಿಳಿಚಿ ಕೊಳ್ಳುತ್ತವೆ ಅದರ ಎಲೆಗಳ ಮೇಲೆ ಚುಕ್ಕೆಗಳು ಬೀಳುವುದಿಲ್ಲ ಮತ್ತು ಮುಖ್ಯ ನರಗಳಿಗೆ ಒಂದು ತರದ ವಿಶಿಷ್ಟ ಹಸಿರು ಬಣ್ಣ ಬರುತ್ತದೆ.


ಮ್ಯಾಂಗನಿಸ್ :

ಇದರ ಅಭಾವದಿಂದ ಎಲೆಗಳು ಬಿಳಿಚಿಕೊಳ್ಳುತ್ತದೆ. ಎಲೆಗಳ ಮುಖ್ಯ ಮತ್ತು ಉಳಿದ ನರಗಳು ದಟ್ಟ ಹಸಿರು ಬಣ್ಣದಾಗಿರುವದರಿಂದ ಅವು ಎದ್ದು ಕಾಣುತ್ತವೆ.


ತಾಮ್ರ :

ಇದರ ಅಭಾವದಿಂದ ಎಲೆಗಳಲ್ಲಿಯ ನರಗಳ ಮಧ್ಯದಲ್ಲಿನ ಭಾಗಗಳು ಬಿಳಿಚಿಕೊಳ್ಳುತ್ತವೆ ಗಂಟು ಕಟ್ಟುತ್ತವೆ ನಂತರ ಎಲೆಗಳು ಹಳದಿಯಾಗಿ ಉದುರಿ ಬೀಳುತ್ತವೆ.


ಸತುವು:

ಇದರ ಅಭಾವದಿಂದ ಎಲೆಗಳು ಸಣ್ಣದಾಗಿದ್ದು ಬಣ್ಣವು ಬಿಳಿಚುಗೊಳ್ಳುತ್ತದೆ. ನರಗಳು ಹಸಿರಾಗಿದ್ದು ಚುಕ್ಕೆಗಳು ಪಸರಿಸಿ ಎಲೆಗಳ ನರ ತುದಿ ಹಾಗೂ ಅಂಚುಗಳನ್ನು ಆವರಿಸುತ್ತವೆ.


ಮೆಗ್ನೇಷಿಯಂ :

ಇದರ ಅಭಾವದಿಂದ ಎಲೆ ತುದಿ ಅಂಚಿನಲ್ಲಿ ಬಿಳಿಚಿಗೊಳ್ಳಲು ಆರಂಬಿಸುವುದು ಇದರ ಎಲೆಗಳಲ್ಲಿ ಚುಕ್ಕೆಗಳು ಇರುವುದಿಲ್ಲ ನರಗಳು ಹಸಿರಾಗಿದ್ದು ತುದಿ ಹಾಗೂ ಅಂಚಿನಲ್ಲಿ ಮುದುಡಿಕೊಳ್ಳುವುದು ಎಲೆಯ ದಂಟಿನ ಭಾಗದಲ್ಲಿ ಒಣಗಿ ಎಲೆಯು ಸುಲಭವಾಗಿ ಉದುರುತ್ತದೆ.


ಪೊಟ್ಯಾಷಿಯಂ :

ಇದರ ಕೊರತೆಯಿಂದ ಎಲೆಗಳು ಬಿಳಿಚಿಕೊಳ್ಳುತ್ತವೆ. ಎಲೆಗಳ ತುದಿ ಮತ್ತು ಅಂಚಿನಲ್ಲಿ ಸಣ್ಣ ಚುಕ್ಕೆಗಳು ಇದ್ದು ತುಕ್ಕು ಬಣ್ಣದ್ದಾಗುತ್ತದೆ ನಂತರ ಎಲೆಗಳು ತುದಿ ಮತ್ತು ಅಂಚಿನಲ್ಲಿ ಒಣಗಿ ಗರಿಗರಿಯಾಗಿ ಮುದುರಿಬೀಳುತ್ತವೆ.


ರಂಜಕ :

ಇದರ ಅಭ್ಹಾವದಿಂದ ಆಗಿ ಸಸ್ಯಗಳ ಬೆಳವಣಿಗೆ ಕಂದುವುದು ಎಲೆಗಳು ನಿಜವಾಗಿ ಹಾಗೂ ಸಣ್ಣದಾಗಿ ಇರುತ್ತವೆ. ರಂಜಕದ ಅಭಾವ ಹೆಚ್ಚಾದಲ್ಲಿ ಎಲೆಯ ತುದಿ ಹಾಗೂ ಅಂಚು ಕೆಂಪು ಚಾಯೆಯನ್ನು ಹೊಂದುತ್ತದೆ.ನಂತರ ಒಣಗುತ್ತದೆ.


ಸಾರಜನಕ :

ಇದರ ಅಭಾವದಿಂದ ಸಸ್ಯ ಹಾಗೂ ಎಲೆಗಳ ಬೆಳವಣಿಗೆ ಕಂದುವುದು ಬಣ್ಣವು ತಿಳಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಕೊರತೆ ಹೆಚ್ಚಾದಲ್ಲಿ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.

Latest Post

ಇತ್ತೀಚಿನ ಸುದ್ದಿಗಳು

Related Articles