ಸಾರ್ವಜನಿಕರು ಸೂರ್ಯಘರ್ ಯೋಜನೆಯಡಿ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸಬ್ಸಿಡಿಯಲ್ಲಿ(Solar subsidy) ಸೌರ್ ವಿದ್ಯುತ್ ಘಟಕವನ್ನು ಸ್ಥಾಪಿಸಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆಯಡಿ (Solar subsidy) ಮನೆಯ ಬಳಕೆಯ ವಿದ್ಯುತ್ ನ್ನು ಉಳಿತಾಯ ಮಾಡಲು ಸಾರ್ವಜನಿಕರಿಗೆ ನೆರವು ನೀಡಲು ಸಹಾಯಧನವನ್ನು ಒದಗಿಸಲಾಗಿದ್ದು ರಾಜ್ಯದ ಎಲ್ಲಾ ಎಸ್ಕಾಂ ಗಳ ಮೂಲಕ ಈ ಯೋಜನೆಯಡಿ ಮನೆಯ ಮೇಲೆ ಸೋಲಾರ್ ಅಳವಡಿಕೆ ಮಾಡಿಕೊಳ್ಳಲು ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.
ಸೂರ್ಯ ಘರ್ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಓದಿ:ನಿಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆಯೇ ಹಾಗಿದ್ದರೇ ಇಲ್ಲಿದೆ ಅದಕ್ಕೆ ಪರಿಹಾರ! ಕೃಷಿ ಭಾಗ್ಯ ಯೋಜನೆ.
Pm-surya muft bijli yojan-ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆ:
1)2024ರ ಜನವರಿ 22 ರಂದು ಕೇಂದ್ರ ಸರಕಾರ ಘೋಷಿಸಿದ ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ದೇಶದ ಜನರ ಮನೆಗಳ ಮಾಳಿಗೆ/ಮೇಲ್ಛಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಸಾಧಿಸುವ ಗುರಿ ಹೊಂದಲಾಗಿದೆ.
2)ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಮನೆಯ ಮೇಲೆ ಸ್ಥಾಪನೆ ಮಾಡಲು ಸೋಲಾರ್ ಘಟಕಕ್ಕೆ ಆಕರ್ಷಕ ಸಬ್ಸಿಡಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
Solar benefits- ಸೋಲಾರ್ ಅಳವಡಿಕೆ ಪ್ರಯೋಜನಗಳು:
1)ವಿದ್ಯುತ್ ಬಿಲ್ ನಲ್ಲಿ ಉಳಿತಾಯ
2)ಹೆಚ್ಚುವರಿ ವಿದ್ಯುತ್ ಅನ್ನು ಎಸ್ಕಾಂಗೆ ಮರಾಟ ಮಾಡುವ ಮೂಲಕ ಆದಾಯಗಳಿಸಬಹುದು
3)ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆ
ಇದನ್ನೂ ಓದಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರಲು ಈ ಕೆಲಸ ಕಡ್ಡಾಯ!
applya documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1)ಮನೆಯ ವಿದ್ಯುತ್ ಬಿಲ್
2)ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
3)ಬ್ಯಾಂಕ್ ಪಾಸ್ ಬುಕ್ ಪ್ರತಿ
4)ಮೊಬೈಲ್ ನಂಬರ್
applya method-ಅರ್ಜಿಯನ್ನು ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಈ ಯೋಜನೆಯ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ ಹತ್ತಿರದ ಗ್ರಾಮ ಒನ್ ಮತ್ತು ನಾಗರಿಕ ಸೇವಾ ಸಿಂಧು ನಲ್ಲಿ ಅರ್ಜಿ ಸಲ್ಲಿಸಬಹುದು.