ನಮಸ್ಕಾರ ರೈತರೇ, ಯಾರೆಲ್ಲ ಕೇಂದ್ರ ಸರಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ ಅವರೆಲ್ಲರೂ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ ನಿಮ್ಮದು ಇಕೆವೈಸಿ ಆಗಿದೆಯೇ ಇಲ್ಲವೇ ಎಂದು ಹೇಗೆ ನೋಡಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಹೌದು ರೈತರೇ, ಕೇಂದ್ರ ಸರಕಾರದ ಪಿಎಂ ಕಿಸಾನ ಫಲಾನುಭವಿಗಳು ನಿಮಗೆ ಪ್ರತಿ ಕಂತು ಜಮೆ ಆಗಬೇಕಿದ್ದರೆ ವರ್ಷದಲ್ಲಿ ಒಂದು ಬಾರಿಯಾದರೂ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಮಾಡದೆ ಇದ್ದಲ್ಲಿ ಹಣ ಜಮೆ ಆಗುವುದಿಲ್ಲ.
ಕೇಂದ್ರ ಸರಕಾರದ ಹಲವು ಜನಪರ ಯೋಜನೆಗಳಲ್ಲಿ ಕೃಷಿ ಇಲಾಖೆಯ ಮೂಲಕ ನೀಡುತ್ತಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು 2019 ರಿಂದ ಚಾಲನೆಯಲ್ಲಿದ್ದು, ಈ ಹಣವು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ರೂ.2000 ರಂತೆ ನೇರ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.
ಈ ಪಿಎಂ ಕಿಸಾನ್ ಹಣವು ಖಾತೆಗೆ ಜಮೆ ಆಗುತ್ತಿರುವವರು ಮತ್ತು ಹೊಸ ಅರ್ಜಿಗಳನ್ನು ಸಲ್ಲಿಸಿರುವವರು ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪಿಎಂ ಕಿಸಾನ್ ಫಲಾನುಭವಿಗಳು ಹತ್ತಿರದ ಕೃಷಿ ಇಲಾಖೆ ಅಥವಾ ಗ್ರಾಮ ಒನ್ ಮತ್ತು ನಾಗರಿಕ ಸೇವಾ ಸಿಂಧು ಭೇಟಿ ಮಾಡಿ ಇಕೆವೈಸಿ ಮಾಡಿಕೊಳ್ಳಿ.
PM-Kisan pending reasons-ಕಿಸಾನ್ ಸಮ್ಮಾನ್ ನಿಧಿ ಹಣ ಬಾರದಿರಲು ಕಾರಣಗಳು:
1)E-kyc ಮಾಡಿಸದೆ ಬಾಕಿ ಇರುವ ರೈತರು.
2)ಒಂದೇ ಕುಟುಂಬ ಪರಿಶೀಲನೆಗೆ ಬಾಕಿ ಇರುವವರು.
3)ಕೃಷಿ ಜಮೀನು ವರ್ಗಾವಣೆ ಮತ್ತು ಮಾರಾಟ ಮಾಡಿರುವುದು.
4)RTC ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ಬದಲಾವಣೆ ಇರುವವರು.
5)ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್(aadhar seeding) ಮಾಡದೆ ಇರುವವರು.
6)village VNO login physical verification ಬಾಕಿ ಇರುವವರು.
7)income tax file ಮಾಡಿರುವವರು.
ಈ ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದ ಹಾಗೂ ಇದರಲ್ಲಿ ಯಾವುದಾದರು ಒಂದು ಕಾರಣಗಳಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಬರದೆ ಬಾಕಿ ಇರುವ ಸಾದ್ಯತೆಗಳಿವೆ. ಇದನ್ನು ಪರಿಶೀಲನೆ ಮಾಡಲು ನಿಮ್ಮ ಹತ್ತಿರದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಮಾಡಿ ಮಾಹಿತಿ ತಿಳಿದು ಕೊಳ್ಳಿ.
ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಕಡ್ಡಾಯ Ekyc ಮಾಡಿಸಬೇಕು, ಇಲ್ಲವಾದಲ್ಲಿ ನಿಮಗೆ ಈ ಯೋಜನೆಯ ಹಣ ಬರುವುದಿಲ್ಲ. Ekyc ಮಾಡಿಸಲು ಹತ್ತಿರದ ಕೃಷಿ ಇಲಾಖೆ, ಗ್ರಾಮ ಒನ್ ಮತ್ತು ಸೇವಾ ಸಿಂಧು ಸೈಬರ್ ಗಳಿಗೆ ಭೇಟಿ ಮಾಡಿ Ekyc ಮಾಡಿಸಿಕೊಳ್ಳಿ.
E-kyc ಆಗಿದೆಯೇ ಇಲ್ಲವೇ ಎಂದು ತಿಳಿಯುವ ವಿಧಾನ:
ಮೊದಲಿಗೆ ಇಲ್ಲಿ ನೀಡಲಾದ PM kisan.gov.in ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರೆದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು E-kyc ಅಂಕಣ ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ E-kyc ಅಂಕಣ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ ನಂಬರ್ ಹಾಕಿ E-kyc ಆಗಿದಯೇ ಇಲ್ಲವೋ ಎಂದು ತಿಳಿದು ಕೊಳ್ಳಬಹುದು.