Friday, September 20, 2024

ಸಮಗ್ರ ಕೃಷಿ ಪದ್ದತಿ ಅಳವಡಿಕೆಗೆ ಈ ಯೋಜನೆಯಡಿ ಪಡೆಯಬಹುದು 1,25,000/- ಸಹಾಯಧನ

ಕೃಷಿ ಇಲಾಖೆಯ ವತಿಯಿಂದ RKVY ಯೋಜನೆಯಡಿ ಸಮಗ್ರ ಕೃಷಿ ಪದ್ದತಿಯಲ್ಲಿ( IFS ) ರೈತರಿಗೆ ಯಾವ ಯಾವ ಘಟಕಗಳಿಗೆ ಸಹಾಯ ಧನ ತಿಳಿಯೋಣ ??


ಸಮಗ್ರ ಕೃಷಿ ಪದ್ದತಿಯೆಂದರೆ ಎರಡು ಅಥವಾ ಹೆಚ್ಚಿನ ಕೃಷಿ ಸಂಬಂದಿತ ಚಟುವಟಿಕೆಗಳನ್ನು ಪರಸ್ಪರ ಅವಲಂಬನೆಯೊಂದಿಗೆ ಅಳವಡಿಸಿಕೊಳ್ಳುವುದು ಅಥವಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು
ಅನೇಕ ರೈತರು ರಾಜ್ಯದ ಅನುಕೂಲಗಳಿಗಾಗಿ ಉದ್ಯೋಗಾವಕಾಶಗಳಂತಹ ಹೆಚ್ಚುವರಿ ಮತ್ತು ಆದಾಯ ವರ್ಷಪೂರ್ತಿ ಶತಮಾನಗಳಿಂದ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸುತ್ತಿದ್ದಾರೆ.


ಇದರ ಮೂಲಕ ಕೃಷಿ ಬೆಳೆಗಳ ಸಾಗುವಳಿ ಜೊತೆಗೆ ಕೇ಼ತ್ರ ಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳಾದ ಜಾನುವಾರು, ಕೋಳಿ,ಮೀನುಗಾರಿಕೆ, ರೇಷ್ಮೆಗಳನ್ನು ಒಗ್ಗೂಡಿಸಿ ಅಧಿಕ ಆದಾಯ ಪಡೆಯಬಹುದಾಗಿರುತ್ತದೆ.


ಸಮಗ್ರ ಕೃಷಿ ಪದ್ದತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿವಿಧ ಘಟಕಗಳು ಉತ್ತಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು, ನೀರಿನ ಒಳಹರಿವಿನ ಗರಿಷ್ಠ ಬಳಕೆಗೆ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತವೆ. ಶ್ರಮದಾಯಕವಾಗಿದ್ದರೂ ಸಮಗ್ರ ಕೃಷಿ ಪದ್ದತಿ ,ರೈತರ ಕುಟುಂಬಗಳು ವರ್ಷದುದ್ದಕ್ಕೂ ಆದಾಯ ಪಡೆಯುವಂತೆ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ.

ಈ ಯೋಜನೆಗೆ ಆರ್ಥಿಕ ವೆಚ್ಚ :


ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯ ಸರ್ಕಾರ ಒಟ್ಟಾರೆಯಾಗಿ 72.736 ಕೋಟಿ ರೂಗಳ ಅನುದಾನ ನೀಡಿರುತ್ತದೆ.

ವಿಶೇಷ ಸೂಚನೆ:

2021-22ನೇ ಸಾಲಿನಲ್ಲಿ ಮತ್ತು -2022-23 ಸಾಲಿನ ಅವಧಿಯಲ್ಲೂ ಅಳವಡಿಸುವಂತೆ ಕಾರ್ಯಕ್ರಮ ರೂಪಿಸಲಾಗಿರುತ್ತದೆ.

ಕಾರ್ಯಕ್ರಮದ ಕಾರ್ಯಕ್ಷೇತ್ರ :
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಬಹುದಾಗಿರುತ್ತದೆ.

ಅನುಷ್ಟಾನ ಕಾರ್ಯಕ್ರಮದ ಘಟಕಗಳು ಕೆಳಗಿನಂತಿವೆ:

  1. ಮಣ್ಣು ಮತ್ತು ನೀರು ಸಂರಕ್ಷಣೆ ಶೇ. 50 ರ ಸಹಾಯಧನ ಪ್ರತಿ ಹೊಂಡಕ್ಕೆ ಅಳತೆಗಳಿಗೆ ಅನುಗುಣವಾಗಿ ಇಲಾಖೆ ವೆಚ್ಚ ಭರಿಸುತ್ತದೆ. 25,000/- ಮೀರದಂತೆ ಭರಿಸುವುದು
  2. ಸಾರಜನಕ ಸ್ಥೀರಿಕರಣ ಪೂರಕವಾದ ಸಸ್ಯಬೇಲಿ/ಇತರೆ ಬೇಲಿ/ಸಂರಕ್ಷಣೆ ತಡೆಗಳು/ಬದುಗಳು/ಟೆಂಚಗಳು. ಶೇ. 50 ರ ಸಹಾಯಧನ 2,500/-ಗರಿಷ್ಟ ಮೀರದಂತೆ ಭರಿಸುವುದು.
  3. ಜಾನುವಾರು ಘಟಕ ಆಧಾರಿತ ಸಮಗ್ರ ಕೃಷಿ ಪದ್ದತಿ :ಮೇವಿನ ಬೆಳೆ, ಕೋಳಿ ಸಾಕಾಣಿಕೆ, ಕುರಿ/ಮೇಕೆ ಸಾಕಾಣಿಕೆ, ಹಸು ಸಾಕಾಣಿಕೆ ಶೇ. 50 ರ ಸಹಾಯಧನ
  4. ಬೆಳೆ ಪದ್ದತಿ ಆಧಾರಿತ ಪ್ರಾತ್ಯಕ್ಷಿತೆಗಳು
  5. ಸ್ಥಳೀಯ ಬೇಡಿಕೆಗನುಗುಣವಾಗಿ ಎರೆಹುಳು ಗೊಬ್ಬರ, ಅಜೋಲ ಘಟಕ, ಜೇನು ಸಾಕಾಣಿಕೆ ,ಮರ ಆಧಾರಿತ ಕೃಷಿ, ಕೈ ತೋಟ : ರೂ 15,000/- ಅಥವಾ ಶೇ. 50 ರ ಸಹಾಯಧನ
    I ಈ ಎಲ್ಲಾ ಘಟಕಗಳನ್ನು ರೈತರು ತಮ್ಮ ಜಮೀನನಲ್ಲಿ ಅಳವಡಿಸಿಕೊಂಡಾಗ ಒಬ್ಬ ರೈತನಿಗೆ ಸಹಾಯಧನ ರೂಪದಲ್ಲಿ 1,25,000/- ರೂಗಳು ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ : ರೈತ ಬಾಂದವರು ,ನಿಮ್ಮ ತಾಲೂಕಿನ ಕೃಷಿ ಇಲಾಖೆ, ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ

ಇತ್ತೀಚಿನ ಸುದ್ದಿಗಳು

Related Articles