Thursday, September 19, 2024

RTC Missing in crop insurance-ಬೆಳೆ ವಿಮೆಯಲ್ಲಿ ನಿಮ್ಮ ಸರ್ವೇ ನಂಬರಗಳು ಕಾಣಿಸುತ್ತಿಲ್ಲವೇ ಅದಕ್ಕೆ ಇಲ್ಲಿದೆ ಕಾರಣ ಮತ್ತು ಪರಿಹಾರದ ಮಾಹಿತಿ.

ರೈತ ಭಾಂದವರೇ,2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಆರಂಭವಾಗಿದ್ದು, ಇನ್ನೇನು ಕೆಲವವೇ ದಿನಗಳಲ್ಲಿ ಅವಧಿ ಮುಕ್ತಾಯವಾಗಲಿದೆ. ಇನ್ನೂ ನಿಮ್ಮ ಜಮೀನಿನ ಬೆಳೆ ಮೇಲೆ ಬೆಳೆ ವಿಮೆ ಮಾಡಲು ಆಗುತ್ತಿಲ್ಲವೇ ಅದಕ್ಕೆ ಇಲ್ಲಿದೆ ಕಾರಣ ಮತ್ತುಮಾಹಿತಿ.

ರೈತರೇ ಈ ಬಾರಿಯ ಬೆಳೆ ವಿಮೆ ಕಟ್ಟುವ ಪದ್ಧತಿಯನ್ನು ಬದಲಾವಣೆ ಮಾಡಿದ್ದು, ನೀವು ಹಿಂದಿ ವರ್ಷ ಬೆಳೆ ಸಮೀಕ್ಷೆ ಮಾಡಿದಲ್ಲಿ ಮಾತ್ರ ನಿಮಗೆ ಬೆಳೆ ವಿಮೆ ಕಟ್ಟಲು ಅವಕಾಶ ನೀಡಲಾಗುತ್ತದೆ. ಆದರೆ ಇದು ಹೊಸ RTC ಗಳಿಗೆ ಅನ್ವಯಿಸುವುದಿಲ್ಲ.

ಎಷ್ಟೋ ಜನ ರೈತರಿಗೆ ಈ ಬಾರಿ ತಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬೆಳೆ ವಿಮೆ ಕಟ್ಟಲು ಹೋದಾಗ ತಮ್ಮ ಜಮೀನಿನ ಸರ್ವೇ ನಂಬರ್‌ ಕಾಣಿಸುತ್ತಿಲ್ಲ ಎಂದು ಹೇಳಿರುತ್ತಾರೆ. ಅದಕ್ಕೆ ಹಲವಾರು ಕಾರಣಗಳಿಂದ ನಿಮ್ಮ ಜಮೀನಿನ ಸರ್ವೇ ನಂಬರ್‌ ಈ ಬಅರಿಯ ಬೆಳೆ ವಿಮಗೆ ಬಂದಿರುವುದಿಲ್ಲ ಆ ಕಾರಣಗಳು ಯಾವವು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 2024 ರ ಬೆಳೆ ವಿಮೆ ಕಟ್ಟಿದ್ದರೆ, ನಂತರ ಈ ಕೆಲಸ ಮಾಡಿ ಇಲ್ಲವಾದಲ್ಲಿ ಕಟ್ಟಿದ ಹಣ ವ್ಯರ್ಥವಾಗುತ್ತದೆ.

ನಿಮ್ಮ ಸರ್ವೇ ನಂಬರ್‌ಗಳು ಬೆಳೆ ವಿಮೆಗೆ ಬಂದಿಲ್ಲವೇ ಇಲ್ಲಿದೆ ಕಾರಣಗಳು:

1)2023 ರಲ್ಲಿ ಬೆಳೆ ಸಮೀಕ್ಷೆ ಮಾಡದೆ ಇರುವುದು.

2)2023 ರ ಬೆಳೆ ಸಮೀಕ್ಷೆ ಮಾಡಿದ್ದು ತಪ್ಪಾಗಿ ಬೆಳೆ ನಮೂದಿಸಿರಬಹುದು.

3)ಸರ್ವೇ ನಂಬರ್‌  ಬದಲಾವಣೆಯಾಗಿರಬಹುದು.

4)ಜಾಗವನ್ನು ವಿಭಾಗ ಮಾಡಿರಬಹುದು.(ಅಣ್ಣ,ತಮ್ಮಜಾಗವನ್ನು ಪಾಲು)

5)2023 ರ ಕೊನೆಯಲ್ಲಿ ಜಾಗವನ್ನು ವಿಭಾಗ ಮಾಡಿ ಕೊಂಡಿರಬಹುದು.

6)ಈ ವರ್ಷದ ಬೆಳೆ ವಿಮೆಯನ್ನು ಕಡ್ಡಾಯವಾಗಿ ಹಿಂದಿನ ವರ್ಷದ ಬೆಳೆ ಸಮೀಕ್ಷೆ ಆಧಾರದ ಮೇಲೆ ನಿಗದಿ ಮಾಡಿರುವುದರಿಂದ.

7)ರೈತರ ನೋಂದಣಿ(FID) ಮಾಡದೆ ಇರುವುದು.

8)ಕೃಷಿಯೇತರ ಎಂದು ನಮೂದಾಗಿರಬಹುದು.

9)ರೈತರ ನೋಂದಣಿಗೆ ಸರ್ವೇ ನಂಬರಗಳನ್ನು ಇತ್ತೀಚಿಗೆ ಸೇರಿಸಿರುವುದು.

ಇತ್ತೀಚಿನ ಹೊಸ  ಸರ್ವೇ ನಂಬರಗೆ ಬೆಳೆ ವಿಮೆ ಮಾಡಿಸಲು ಹೀಗೆ ಮಾಡಿ.

ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ತಮ್ಮ ಇತ್ತೀಚಿನ ಸರ್ವೇ ನಂಬರಗಳ ಪಟ್ಟಿಯನ್ನು ಅಧಿಕಾರಿಗಳಿಗೆ ನೀಡಬೇಕು. ಅವರು ಬೆಳೆ ವಿಮೆಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಾರೆ. ನಂತರದಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರಗೆ ಬೆಳೆ ವಿಮೆ ಕಟ್ಟಬಹುದು. ಇದಕ್ಕೆ ಕೆಲವು ದಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಅಧಿಕಾರಿಗಳ ಸಂಪರ್ಕದಲ್ಲಿ ಇರಬೇಕಾಗುತ್ತದೆ.

ಇದನ್ನೂ ಓದಿ: ಕೃಷಿ ಪಂಪಸೆಟ್ ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ? ಎಲ್ಲಿ ಮಾಡಿಸಬೇಕು ಮತ್ತು ಇದರ ಉದ್ದೇಶಗಳು ಇಲ್ಲಿದೆ ಮಾಹಿತಿ.

ಈ ಸಮಸ್ಯೆ ಮುಂದಿನ ವರ್ಷ  ಬಾರದ ಹಾಗೆ ಮಾಡಲು 2024ರ ಬೆಳೆ ಸಮೀಕ್ಷೆ ಮಾಡಿ. ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಮಾಹಿತಿ ಈ ಕೆಳಗೆ ನೀಡಲಾಗಿದೆ. 

2024 ರ ಬೆಳೆ ಸಮೀಕ್ಷೆ ವಿಡಿಯೋ ಎಂದು youtube ನಲ್ಲಿ ಹುಡಕಿದರೆ ಸಿಗುತ್ತದೆ. ಆ ವಿಡಿಯೋ ವನ್ನು ಎರಡರಿಂದ ಮೂರು ಬಾರಿ ಸರಿಯಾಗಿ ಗಮನವಿಟ್ಟು ನೋಡಿ ನಂತರ ಇಲ್ಲಿ ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ 2024ರ ರೈತರ ಬೆಳೆ ಸಮೀಕ್ಷೆ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಳ್ಳಿ.

2024 ರ ರೈತರ ಬೆಳೆ ಸಮೀಕ್ಷೆ ಲಿಂಕ್ ಇಲ್ಲಿದೆ Click here…..

ಇತ್ತೀಚಿನ ಸುದ್ದಿಗಳು

Related Articles