Friday, January 24, 2025

Crop loss amount-ವಾರದೊಳಗೆ ಈ ಪಟ್ಟಿಯಲ್ಲಿರುವ ರೈತರಿಗೆ ಮುಂಗಾರು ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಲಿದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ? ಚೆಕ್ ಮಾಡಿಕೊಳ್ಳಿ.

ನಮಸ್ಕಾರ ರೈತರೇ, 2024ರ ಮುಂಗಾರು ಹಲವಾರು ಕಡೆ ಬೆಳೆ ಹಾನಿ ಮಾಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರಕಾರವು ರೈತರಿಗೆ ಬೆಳೆ ಹಾನಿ ಪರಿಹಾರದ ಹಣವನ್ನು ವಾರದೊಳಗೆ ಈ ಪಟ್ಟಿಯಲ್ಲಿರುವ ರೈತರಿಗೆ ಮುಂಗಾರು ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಲಿದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ? ಚೆಕ್ ಮಾಡಿಕೊಳ್ಳಲು ಈ ಕೆಳಗೆ ತಿಳಿಸಲಾಗಿದೆ.

2024ರ ಮುಂಗಾರು ಮಳೆಯ ಕಾರಣಕ್ಕೆ ರಾಜ್ಯಾದ್ಯಂತ 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ(Crop loss) ಆಗಿದ್ದು, ಅದರಲ್ಲಿ ಕೃಷಿ ಬೆಳೆ 78679 ಹೆಕ್ಟರ್ ಹಾನಿಯಾಗಿದ್ದರೆ, ತೋಟಗಾರಿಕೆ ಬೆಳೆಗಳು 2294 ಹೇಕ್ಟರ್ ಪ್ರದೇಶ ಹಾನಿಯಾಗಿರತ್ತದೆ.

ಇದನ್ನೂ ಓದಿ:ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿ ಎಂ ಕಿಸಾನ್ ಯೋಜನೆಯ 18ನೇ ಕಂತು ಸಿಗಲಿದೆ! ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ ಚೆಕ್ ಮಾಡಿಕೊಳ್ಳಿ.

ರಾಜ್ಯ ಸರಕಾರದ ಕಂದಾಯ ಸಚಿವರಾದ ಕೃಷ್ಣ ಬೈರೆ ಗೌಡ ಇವರು ವಾರದೊಳಗೆ ಯಾವ ಯಾವ ಬೆಳೆಗಳು ಹಾನಿಯಾಗಿದೆ ಮತ್ತು ಎಷ್ಟು ಹಾನಿ ಪರಿಹಾರ ಸಿಗಲಿದೆ ಮಾಹಿತಿ ನೀಡಲಿದ್ದಾರೆ. ತದನಂತರ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಬೆಳೆ ಹಾನಿಗೆ ಯಾರು ಎಲ್ಲ ಈಗಾಗಲೇ ಕಂದಾಯ ಇಲಾಖೆ ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ಇನ್ನೂ ವಾರದೊಳಗೆ ಬೆಳೆ ಹಾನಿ ಪರಿಹಾರದ ಹಣ ಜಮೆ ಮಾಡಲಿದ್ದಾರೆ.

ಇದನ್ನೂ ಓದಿ:ಪಶು ಪಾಲನಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು! ಪಶು ವೈದ್ಯಾಧಿಕಾರಿಗಳ ಸಂಪರ್ಕ ನಂಬರ್.

Crop loss amount-ಬೆಳೆ ಹಾನಿ ಪರಿಹಾರ ಚೆಕ್ ಮಾಡಿಕೊಳ್ಳುವ ವಿಧಾನ!

ಬೆಳೆ ಹಾನಿ ಪರಿಹಾರ ಚೆಕ್ ಮಾಡಲು ಮೊದಲು ಈ ಲಿಂಕ್ ಮೇಲೆ ಕ್ಲಿಕ್(Crop loss amount) ಮಾಡಿ.

ನಂತರ ನಿಮಗೆ ಇಲ್ಲಿ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ವರ್ಷ(year), ಋತು(season), ವಿಪತ್ತಿನ ವಿಧಿ(calamity type), ಜಿಲ್ಲೆ(district), ತಾಲೂಕು(taluku), ಹೋಬಳಿ(hobali), (village)ಗ್ರಾಮಗಳನ್ನು ಆಯ್ಕೆ ಮಾಡಬೇಕು. ನಂತರ (GET report)ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಬೆಳೆ ಹಾನಿ ಪರಿಹಾರ ಸಿಗಲಿದೆ ಎಂಬ ಪಟ್ಟಿ ದೊರೆಯಲಿದೆ.

ಇತ್ತೀಚಿನ ಸುದ್ದಿಗಳು

Related Articles