Friday, September 20, 2024

Revenue Department Schemes-ಕಂದಾಯ ಇಲಾಖೆಯಿಂದ ಪ್ರತಿ ತಿಂಗಳು ಪಿಂಚಣಿ(ಹಣ) ಬರುವ ಯೋಜನೆಗಳು!

ಕರ್ನಾಟಕ ಸರಕಾರದ ಇಲಾಖೆಗಳಲ್ಲಿ ಪ್ರಧಾನವಾದ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಪ್ರತಿ ತಿಂಗಳು ಪಿಂಚಣಿ ಬರುವ ಯೋಜನೆಗಳಿವೆ. ಈ ಯೋಜನೆಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾರು ಅರ್ಜಿಸಲ್ಲಿಸಲು ಅರ್ಹರು ಮತ್ತು ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಎಲ್ಲಾ ಇಲಾಖೆಗಳಿಗೆ ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ. ಈ ಮಾತೃ ಇಲಾಖೆಯಲ್ಲಿ ಸಾರ್ವಜನಿಕರಿಗೆ BPL ಮತ್ತು APL ಕುಟುಂಬ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ತಿಂಗಳು ಪಿಂಚಣಿ ಬರುವ ಸೌಲಭ್ಯಗಳಿವೆ. ಅದಲ್ಲದೆ ಮಳೆಯಿಂದ ಸಾರ್ವಜನಿಕರ ಮನೆಗಳು ಬಿದ್ದು ಹೋದಲ್ಲಿ ಪರಿಹಾರವನ್ನು ಕಂದಾಯ ಇಲಾಖೆಯಿಂದ ನೀಡಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಕಂದಾಯ ಇಲಾಖೆಯಿಂದ ಪ್ರತಿ ತಿಂಗಳು ಪಿಂಚಣಿ ಬರುವ ಸೌಲಭ್ಯಗಳು ಲಭ್ಯವಿದ್ದು ಅವುಗಳಿಗೆ ಅರ್ಜಿಸಲ್ಲಿಸಲು ಇರುವ ಮಾನದಂಡಗಳು ಮತ್ತು ಪ್ರತಿ ತಿಂಗಳು ಎಷ್ಟು ಪಿಂಚಣಿ ಬರುತ್ತದೆ ಎಂಬ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: ಬರ ಪರಿಹಾರದ ಹಣ ಜಮೆಯಾಗದೆ ಇರಲು ಕಾರಣ ಗಳನ್ನು ತಿಳಿಸಿದ ಕಂದಾಯ ಇಲಾಖೆ, ಸರಿಪಡಿಸಿಕೊಂಡ ರೈತರಿಗೆ ಸಿಗಲಿದೆ ಪರಿಹಾರದ ಹಣ!

ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು:

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ:

ಈ ಯೋಜನೆಯಡಿ BPL ಕುಟುಂಬ ಪಡಿತರ ಚೀಟಿ(ರೇಷನ್‌ ಕಾರ್ಡ) ಹೊಂದಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಅರ್ಜಿದಾರರಿಗೆ 65 ವರ್ಷ ಮೇಲ್ಪಟ್ಟು ವಯಸ್ಸು ಆಗಿರಬೇಕು. ಈ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 800 ರಿಂದ 1200 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.

2)ಸಂಧ್ಯಾ ಸುರಕ್ಷಾ ಯೋಜನೆ:

ಈ ಯೋಜನೆಯಡಿ BPL ಕುಟುಂಬ ಪಡಿತರ ಚೀಟಿ(ರೇಷನ್‌ ಕಾರ್ಡ) ಹೊಂದಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಅರ್ಜಿದಾರರಿಗೆ 60 ವರ್ಷ ಮೇಲ್ಪಟ್ಟು ವಯಸ್ಸು ಆಗಿರಬೇಕು. ಈ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 1000 ರಿಂದ 1200 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.

3)ವಿಧವಾ ಪಿಂಚಣಿ ಯೋಜನೆ:

ಈ ಯೋಜನೆಯಡಿ ಗಂಡ ಮರಣ ಹೊಂದಿದ್ದು ಮಹಿಳೆಯ ಮಕ್ಕಳು ಅಪ್ರಪ್ತಾ ವಯಸ್ಸಿನವರಾಗಿರಬೇಕು. ಮಹಿಳೆಯ ಹೆಸರಿನಲ್ಲಿ ಕುಟುಂಬ ಪಡಿತರ ಚೀಟಿ( ರೇಷನ್‌ ಕಾರ್ಡ) ಹೊಂದಿರಬೇಕು. ಮಹಿಳೆ ಯಾವುದೆ ಸರಕಾರಿ ಉದ್ಯೋಗದಲ್ಲಿ ಇರಬಾರದು. ಈ ಯೋಜನೆಯಡಿ ವಿಧವೆ ಮಹಿಳೆಗೆ ಪ್ರತಿ ತಿಂಗಳು 800 ರೂಪಾಯಿ ಪಿಂಚಣಿ ಬರುತ್ತದೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ!

4)ಅಂಗವಿಕಲರ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಿಂಚಣಿ ಯೋಜನೆ;

ಈ ಯೋಜನೆಯಡಿ ಶೇ.75 ಕ್ಕಿಂತ ಜಾಸ್ತಿ ಅಂಗವಿಕಲತೆಯವರಿಗೆ ಪ್ರತಿ ತಿಂಗಳು 1400 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ. ಮತ್ತೆ ಶೇ.70 ಕ್ಕಿಂತ ಕಡಿಮೆ ಅಂಗವಿಕಲತೆಯವರಿಗೆ ಪ್ರತಿ ತಿಂಗಳು 800 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ. ಬುದ್ದಿಮಾಂದ್ಯ ಮಕ್ಕಳಿಗೆ ತಿಂಗಳಿಗೆ 1100 ರೂಪಾಯಿ ಪಿಂಚಣಿ ಬರುತ್ತದೆ. ಸರಕಾರಿ ಆಸ್ಪತ್ರೆ ಡಾಕ್ಟರ್ ಗಳಿಂದ ಪ್ರಮಾಣಿಕೃತ ಅಂಗವಿಕಲರ ಪ್ರಮಾನ ಪತ್ರವನ್ನು ಪಡೆದುಕೊಂಡಿರಬೇಕು.

5)ಮನಸ್ವಿನಿ ಯೋಜನೆ:

ಈ ಯೋಜನೆಯಡಿ ಮದುವೆಯಾಗದೆ ಉಳಿದ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸಿಗುವ ಯೋಜನೆಯಾಗಿದೆ. ಈ ಯೋಜನೆಯಡಿ ಮದುವೆಯಾಗದೆ ಉಳಿದ ಮಹಿಳೆಯರಿಗೆ ಪ್ರತಿ ತಿಂಗಳು 800 ರೂಪಾಯಿ ಗಳವರೆಗೆ ಪಿಂಚಣಿ ಬರುತ್ತದೆ.

6)ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ:

ಈ ಯೋಜನೆಯಡಿ BPL ಕುಟುಂಬ ಪಡಿತರ ಚೀಟಿ(ರೇಷನ್‌ ಕಾರ್ಡ) ಹೊಂದಿದ ಕುಟುಂಬದಲ್ಲಿ ಸಾಲ ಬಾಧೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಪತ್ನಿಗೆ ತಿಂಗಳಿಗೆ 800 ರೂಪಾಯಿ ಪಿಂಚಣಿ ಬರುತ್ತದೆ.

7)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ:

ಈ ಯೋಜನೆಯಡಿ ದಾಳಿಗೆ ಒಳಗಾದ ಮಹಿಳೆಗೆ ತಿಂಗಳಿಗೆ 10000 ರೂಪಾಯಿಗಳವರೆಗೆ ಪಿಂಚಣಿ ಬರುತ್ತದೆ.

8)ಎಂಡೋಸಲ್ಪಾನ್‌ ಸಂತ್ರಸ್ತರಿಗೆ ಮಾಸಿಕ ಪಿಂಚಣಿ ಯೋಜನೆ:

ಎಂಡೋಸಲ್ಪಾನ್‌ ಗೆ ಒಳಗಾಗಿರುವ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತಿಂಗಳಿಗೆ 2000 ರಿಂದ 4000 ರೂಪಾಯಿಗಳ ವರೆಗೆ ಪಿಂಚಣಿ ಬರುತ್ತದೆ.

ವಿಶೇಷ ಸೂಚನೆ: ಈ ಯೋಜನೆಗಳ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ನಿಮ್ಮ ಗ್ರಾಮದಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ/ ತಲಾಟಿ/ಗ್ರಾಮ ಆಡಳಿತ ಅಧಿಕಾರಿ ಗಳ ಕಛೇರಿಯನ್ನು ಭೇಟಿ ಮಾಡಿ.

ಇತ್ತೀಚಿನ ಸುದ್ದಿಗಳು

Related Articles