Saturday, October 5, 2024

RAJIV GANDHI HOUSE SCHEME-2024:ರಾಜೀವ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರಕಾರದಿಂದ 6.50 ಲಕ್ಷದವರೆಗೆ ಸಹಾಯಧನ, ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್.

ಭಾರತ ದೇಶವು ಬಡದೇಶದ ಇಲ್ಲಿನ ಜನರಿಗೆ ಸರಿಯಾಗಿ ಮೂಲ ಭೂತ ಸೌಕರ್ಯಗಳಾದ ವಸತಿ, ಆಹಾರ, ನೀರು ಸಿಗುತ್ತಿಲ್ಲ. ಇನ್ನೂ ಬಡಜನರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಸರಕಾರ ರಾಜೀವ ಗಾಂಧಿ ವಸತಿ ಯೋಜನೆಯಡಿ (RAJIV GANDHI HOUSING SCHEME)ಮನೆ ನಿರ್ಮಾಣಕ್ಕೆ ಸಹಾಯಧನ ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಅದಕ್ಕೆ ಬೇಕಾಗುವ ದಾಖಲೆಗಳ ಬಗ್ಗೆ ಹಾಗೂ ಇತರೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ  ವಿವರಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ರಾಜೀವ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಅರ್ಹ ಫಲಾನುಭವಿಗಳಿಗೆ ಒಟ್ಟು 6.5 ಲಕ್ಷ ರೂಪಾಯಿ ಸಹಾಯಧನ ನೀಡುತ್ತವೆ. ಒಂದು ಸಾದಾರಣ ಮನೆ ನಿರ್ಮಾಣದ ವೆಚ್ಚವು 7.5 ಲಕ್ಷ ರೂಪಾಯಿಗಳ ಮೊತ್ತದ್ದಾಗಿರುತ್ತದೆ. ಅದರಲ್ಲಿ ಕೇಂದ್ರ ಸರಕಾರ 3.5 ಲಕ್ಷ ರೂಪಾಯಿ ಮತ್ತು ರಾಜ್ಯ ಸರಕಾರದಿಂದ 3 ಲಕ್ಷ ರೂಪಾಯಿ ಸಹಾಯಧನ ನೀಡಲಿವೆ. ಉಳಿದ 1 ಲಕ್ಷದ ಮೊತ್ತವನ್ನು ಫಲಾನುಭವಿಗಳೇ ಪಾವತಿಸಿದರೆ ಮನೆ ನಿರ್ಮಾಣವಾಗಲಿದೆ.

ರಾಜೀವ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರಕಾರದಿಂದ 6.50 ಲಕ್ಷದವರೆಗೆ ಸಹಾಯಧನ, ಅರ್ಜಿ ಸಲ್ಲಿಸಲು ರಾಜ್ಯ ಸರಕಾರದಿಂದ ಆನ್‌ ಲೈನ್‌ ಮೂಲಕ ಅರ್ಜಿಗಳನ್ನು ಕರೆದಿದ್ದಾರೆ, ಅದರ ಅರ್ಹತೆಗಳು ಮತ್ತು ಅದಕ್ಕೆ ಬೇಕಾಗುವ ದಾಖಲೆಗಳ ಮಾಹಿತಿಯನ್ನು ಕೆಳಗಿನ ವಿವರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರಾಕೃತಿಕ ವಿಕೋಪದ ಮಳೆ, ಗಾಳಿಯಿಂದ ಮನೆ ಮತ್ತು ಕೃಷಿಗೆ ಹಾನಿಯಾದರೆ ಅದರ ಪರಿಹಾರಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು ನಿಮಗೆ ಗೊತ್ತೆ?

ಅರ್ಜಿ ಸಲ್ಲಿಸಲು ಅರ್ಹತೆಗಳು:

1)ರಾಜೀವ ಗಾಂಧಿ ವಸತಿ ಯೋಜನೆಗೆ ಅರ್ಜಿಸಲ್ಲಿಸುವ ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಹಾಗೂ ಒಂದು ವೇಳೆ ಅರ್ಜಿದಾರರು ವಿಶೇಷ ವಿಕಲಚೇತನರು, ಮಾಜಿ ಯೋಧರು ಅಥವಾ ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷ ಸಹ ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

2)ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು 32000 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು. ಮತ್ತು ಕುಟುಂಬವು ವಸತಿ ರಹಿತವಾಗಿದ್ದು ಯಾವುದೇ ಸದಸ್ಯರ ಹೆಸರಿನಲ್ಲಿ ಸ್ವಂತ ಮನೆ ಇರಬಾರದು.

3)ಅರ್ಜಿದಾರರ ಹೆಸರಿನಲ್ಲಿ ಸ್ವಂತ ಖಾಲಿ ಜಾಗವಿದ್ದು ಖಾತೆ ಹೊಂದಿರಬೇಕು.

4)ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಬೇರೆ ಯಾವುದೇ ರೀತಿಯ ಯೋಜನೆಯ ಅಥವಅ ಇಲಾಖೆಯಿಂದ ವಸತಿ ಯೋಜನೆಯ ಸೌಲಭ್ಯ ಪಡೆದಿರಬಾರದು.

5)ಪ್ರಧಾನ ಮಂತ್ರಿ ಆವಅಸ್‌ ಯೋಜನೆಯ ಸೌಲಭ್ಯ ಪಡೆಯಲು ಕೇಂದ್ರ ಸರಕಾರದ 2011ರ ಸಾಮಾಜಿಕ ಆರ್ಥಿಕ ಮತ್ತು ಜನಗಣತಿಯ ಪಟ್ಟಿಯಲ್ಲಿ ಹೆಸರು ಇರಬೇಕು.

ಇದನ್ನೂ ಓದಿ: ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಕಟ್ಟಿದರೇ ಎಷ್ಟು ಪರಿಹಾರ ಬರುತ್ತೆ, ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.

ಆನ್‌ ಲೈನ್‌ ಅರ್ಜಿಸಲ್ಲಿಸುವ ವಿಧಾನ:

ಈ ಯೋಜನೆಯಡಿ ಅರ್ಜಿಸಲ್ಲಿಸಲು ಇಲ್ಲಿ ನೀಡಲಾದ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ನಂತರ ಅಲ್ಲಿ ಕೆಳಲಾದ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿ. ನಂತರ ನಿಮಗೆ ಸಂಬಂಧಿಸಿದ ವಲಯ, ವಾರ್ಡ ಸಂಖ್ಯೆ ಹಾಗೂ ಪ್ರಸ್ತುತ ವಿಳಾಸದ ಮಾಹಿತಿ ಜೊತೆಗೆ ಪಿನ್‌ ಕೋಡ್‌ ನಮೂದಿಸಿ ಮುಂದುವರೆಯಿರಿ.

ನಂತರ ಅಲ್ಲಿ ನಿಮಗೆ ಆಧಾರ್‌ ಸಂಖ್ಯೆ, ಆಧಾರ್‌ನಲ್ಲಿರುವಂತೆ ಹೆಸರು ನಮೂದಿಸಲು ಕೇಳುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.

ಬಳಿಕ ರೇಷನ್‌ ಕಾರ್ಡ ನಂಬರ್‌ ಕೇಳುತ್ತದೆ ಅದನ್ನು ನಮೂದಿಸಿ ನಂತರ ಅದರಲ್ಲಿ ಇರುವ ಎಲ್ಲಾ ಸದಸ್ಯರ ಹೆಸರು ಬರುತ್ತದೆ, ಯಾರ ಹೆಸರಿನಲ್ಲಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅವರ ಹೆಸರನ್ನು ಆಯ್ಕೆ ಮಾಡಬೇಕು. ಅರ್ಜಿದಾರನ ಸ್ವವಿವರಗಳನ್ನು ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ಬಳಿಕ ಅರ್ಜಿದಾರನ ಜಾತಿ ಮತ್ತು ಆದಾಯ ದೃಡೀಕರಣ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಬೇಕು. ಹೀಗೆ ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿಮಾಡಬೇಕು.

ಅರ್ಜಿ ಸಲ್ಲಿಸಲು ಬೇಕಅಗುವ ದಾಖಲೆಗಳು:

1)ಆಧಾರ್‌ ಕಾರ್ಡ

2)ಜಾತಿ ಮತ್ತು ಆದಾಯ ಪ್ರಮಾಣ ಪತ್ರ

3)ಬ್ಯಾಂಕ್‌ ಖಾತೆ ಪುಸ್ತಕ

4)ಆಧಾರ್‌ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆ

ಅರ್ಜಿಸಲ್ಲಿಸುವ ಡೈರೆಕ್ಟ ಲಿಂಕ್‌  Click here

ಇತ್ತೀಚಿನ ಸುದ್ದಿಗಳು

Related Articles