Sunday, November 24, 2024

ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊದಲೆಲ್ಲಾ ಖುಷ್ಕಿ ಜಮೀನುಗಳಲ್ಲಿ ಕೃಷಿ ಬೆಳೆಗಳಾದ ಅರ್ಧವಾರ್ಷಿಕ ಬೆಳೆಗಳು, ಏಕವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಬೆಳೆ ಎಂದೇ ಪ್ರಸಿದ್ದವಾಗಿದ್ದ ಅಡಿಕೆಗೆ ಸಿಗುತ್ತಿರುವ ಚಿನ್ನದ ಬೆಲೆಯು ಬಯಲು ಸೀಮೆಯ ರೈತರನ್ನು ಬೆರಗುಗೊಳಿಸಿದೆ. ಬಯಲು ಸೀಮೆಯ ರೈತರು ಕೂಡಾ ನೀರಾವರಿ ವ್ಯವಸ್ಥೆ ಮಾಡಿಕೊಂಡು ಇತ್ತಿಚೀನ ದಿನಮಾನಗಳಲ್ಲಿ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅಡಿಕೆ ಬೆಳೆಯನ್ನು ಬೆಳೆಯಲಾಗುತಿದೆ. ಅಂತರಾಷ್ಟೀಯ ಮಾರುಕಟ್ಟೆ ಹಾಗೂ ಭಾರತದಲ್ಲೂ ಇದರ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಅಡಿಕೆ ಉತ್ಪಾದನೆಯಲ್ಲಿ ರೈತರಿಗೆ ಉತ್ತಮ ಲಾಭ ಬರಲು ಕೂಡ ಇದೆ ಕಾರಣ.

ಇದನ್ನೂ ಓದಿ: ಗುಡ್ ನ್ಯೂಸ್: ಆಧಾರ್‍ ಕಾರ್ಡಗೆ ಈ ಗುರುತಿನ ಚೀಟಿ ಜೋಡಣೆ ಮಾಡುವ ಅವಧಿ ವಿಸ್ತರಣೆ !

.ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ: ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆಗೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ಹೊಳಲ್ಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಸ್ವತಃ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕು ಎಂದು ರೈತರ ಒತ್ತಾಯ ಇದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಡಿಕೆಗೆ 90 ಶೇಕಡಾ ರಷ್ಟು ಸಹಾಯಧನ ನೀಡಲಾಗುತ್ತಿದೆ.
ತೋಟಗಾರಿಕೆಯಲ್ಲಿ ಅಡಿಕೆ ಸೇರಿದ್ದು, ಸಾಮಾನ್ಯ ವರ್ಗದವರಿಗೆ 50% ನಿಂದ 75% ರಷ್ಟು ಹೆಚ್ಚಿಸಲು ತಿರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಡಿಕೆ ಪ್ರದೇಶ ವಿಸ್ತರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈ ಕಾರಣಗಳಿಂದ ನಿಮ್ಮ ರೇಶನ್ ಕಾರ್ಡ ರದ್ದಾಗಬಹುದು ಎಚ್ಚರ ರೇಶನ್ ಕಾರ್ಡ ಹೊಂದಿರುವವರು ಗಮನಿಸಬೇಕಾದ ಮುಖ್ಯ ಮಾಹಿತಿ.

ನೆಲ ಕಚ್ಚುತ್ತಿದೆ ಅಡಿಕೆ ಮಿಳ್ಳೆ, ಅಧಿಕ ಉಷ್ಣಾಂಶದ ಕಾರಣದಿಂದ ಬೆಳೆಗೆ ಹಾನಿ:

ಬೇಸಿಗೆ ಆರಂಭದ ಹಂತದಲ್ಲಿದ್ದು, ಶೆಕೆಯ ಬೇಗುದಿಗೆ ಮಲೆನಾಡು ಪ್ರದೇಶವೂ ಕಂಗೆಟ್ಟು ಹೋಗಿದ್ದು ಅಡಿಕೆ ತೋಟಗಳು ಒಣಗುತ್ತಿವೆ. ಹೆಚ್ಚಿನ ಉಷ್ಣಾಂಶದ ಪರಿಣಾಮ ಅಡಿಕೆ ಮಿಳ್ಳೆಗಳು ಉದುರತೊಡಗಿರುವುದು ರೈತರನ್ನು ಚಿಂತೆಗೆಡುವಂತೆ ಮಾಡಿದೆ.
ಸಾಮಾನ್ಯವಾಗಿ ಉಷ್ಣಾಂಶವು 36 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದ ಬಳಿಕ ಅಡಿಕೆ ಮಿಳ್ಳೆಗಳು ಉದುರಲು ಆರಂಭಿಸುತ್ತವೆ. ಬಿಸಿಲು, ಮೋಡ ಕವಿದ ವಾತಾವರಣ, ಆಗಾಗ ಮಳೆ ಬೀಳುವುದರಿಂದಲೂ ಹವಾಮಾನ ವೈಪರಿತ್ಯಗೊಂಡು ಇಂತಹ ಸಮಸ್ಯೆ ಉದ್ಭವಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಮಿಳ್ಳೆ ಉದುರುವ ಸಮಸ್ಯೆಯನ್ನು ತಪ್ಪಿಸಲು ಔಷಧ ಸಿಂಪಡಿಸುವುದು ಸಾಮಾನ್ಯ, ಆದರೆ ಇದು ಜೇನುಹುಳುಗಳ ಸಾವಿಗೆ ಕಾರಣವಾಗುತ್ತದೆ. ಇದರಿಂದ ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿ ಉಂಟಾಗಿ ಮುಂದಿನ ವರ್ಷದ ಇಳುವರಿ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಔಷಧ ಸಿಂಪಡಣೆ ಮಾಡುವ ಬದಲು ತೋಟವನ್ನು ನೀರಿನಿಂದ ತಂಪಾಗಿಟ್ಟುಕೊಳ್ಳುವ ಬಗ್ಗೆ ರೈತರು ಆದ್ಯತೆ ನೀಡಬೇಕು, ಹೆಚ್ಚು ನೀರಾವರಿ ಸೌಲಭ್ಯ ಕಲ್ಪಿಸುವುದು ಸೂಕ್ತ.

ಮೇ ಮೊದಲ ಅಥವಾ ಎರಡನೆ ವಾರದಲ್ಲಿ ರೈತರು ಬೋರ್ಡೊ ದ್ರಾವಣದ ಸಿಂಪಡಣೆಯನ್ನು ಆರಂಭಿಸಬಹುದು. ಈ ಮೂಲಕ ಅಡಿಕೆ ಮಿಳ್ಳೆಗಳನ್ನು ಉಳಿಸಿಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯವಾಗಿರುತ್ತದೆ.

ಇದನ್ನೂ ಓದಿ : ಯಾವ ಪ್ರದೇಶಕ್ಕೆ ಯಾವ ಅಡಿಕೆ ತಳಿ ಸೂಕ್ತ ? ಯಾವ ಪ್ರದೇಶದಲ್ಲಿ ಏಷ್ಟು ಹೇಕ್ಟರ್‍ ಅಡಿಕೆ ವಿಸ್ತರಿಸಿದೆ??

ತೋಟಗಾರಿಗೆ ಇಲಾಖೆಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಯೋಜನೆಯಡಿ ಬೆಟ್ಟನಾಡು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಸಣ್ಣ ರೈತರಿಗೆ ಅಡಿಕೆ ತೋಟಗಳನ್ನು ಸ್ಥಾಪಿಸಲು ಪ್ರತಿ ಹೆಕ್ಟೇರ್‌ಗೆ 80,000 ವರೆಗೆ ಸಹಾಯಧನ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles