ಸಾಮಾನ್ಯ ತಿಳಿವಳಿಕೆಯಿಂದ ಜೀವಾಮೃತವೆಂಬುದು ಪೋಷಕಾಂಶ ನೀಡುವ ದ್ರವ ರೂಪದ ಗೊಬ್ಬರವಲ್ಲ.ಹೀಗಾಗಿ ಅದನ್ನು ರಸಗೊಬ್ಬರಕ್ಕೋ, ಕೊಟ್ಟಿಗೆ ಗೊಬ್ಬರಕ್ಕೋ ಹೊಲಿಸುವುದುದು ಸಮಂಜಸವಲ್ಲ. ವಾಸ್ತವವಾಗಿ ಜೀವಾಮೃತ ಎಂಬುದು ಬ್ಯಾಕ್ಟಿರಿಯಾ ಸಂಪದ್ಬರಿತ ದ್ರವ ರೂಪದ ಸಾರ. ಇದನ್ನು ಪದೇ ಪದೇ ಜಮೀನಿಗೆ ಕೊಟ್ಟಾಗ ಜೈವಿಕ ಕ್ರಿಯೆ ಹೆಚ್ಚಾಗಿ ಸಾವಯುವ ಪದಾರ್ಥಗಳು ಬೇಗ ಕೊಳೆತು, ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳು ಬೆಳೆಗಳಿಗೆ ಸುಲಭವಾಗಿ ಲಭ್ಯವಾಗುವುದರಿಂದ ಆ ಹಂಗಾಮಿನಲ್ಲಿ ಬೆಳೆದ ಬೆಳೆಗಳು ಹೆಚ್ಚಿನ ಇಳುವರಿಯನ್ನು ಕೊಡಬಲ್ಲವು.
ಒಂದು ಹಂಗಾಮಿನ ಬೆಳೆ ಇಳುವರಿ ಹೆಚ್ಚಳಕ್ಕಿಂತ ನಿರಂತರವಾಗಿ ಉತ್ಪಾದನೆಗೆ ಸಹಾಯವಾಗುವಂತೆ ಭೂಮಿಯ ಫಲವತ್ತತೆ ಹೆಚ್ಚಿಸುವುದೇ ಜೀವಾಮೃತದ ಉದ್ದೇಶ.
ಇದನ್ನೂ ಓದಿ: ನರೇಗಾ ಯೋಜನೆಯಡಿ ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳು ಮತ್ತು ಆರ್ಥಿಕ ನೆರವು
ಜೀವಾಮೃತ ವೈಶಿಷ್ಟ್ಯಗಳು:
ಇದನ್ನು ರೈತರೇ ಅವರ ಅಗತ್ಯೆಗೆ ತಕ್ಕಂತೆ ತಯಾರು ಮಾಡಿಕೊಳ್ಳಬಹುದು.
5-7 ದಿನಕ್ಕಿಂತ ಹೆಚ್ಚು ಶೇಖರಿಸಿದರೆ ಬ್ಯಾಕ್ಟೀರಿಯಾ ಹಾಗೂ ಪೋಷಕಾಂಶಗಳೆರಡೂ ಕಡಿಮೆಯಾಗುವವು.
ಜಾನುವಾರಗಳಿರುವ ಎಲ್ಲ ರೈತರ ಮನೆಯಲ್ಲಿ ಸುಲಭವಾಗಿ ಸಿಗುವ ಸಗಣಿ,ಗಂಜಲ ಪಡಿಯಾದ ಬೆಲ್ಲ ಹಾಗೂ ದ್ವಿದಳ ಧಾನ್ಯದ ಹಿಟ್ಟು ಇವೇ ಜೀವಾಮೃತ ತಯಾರಿಸಲು ಬೇಕಾಗುವ ವಸ್ತುಗಳು.
ಕೃಷಿ ಮತ್ತು ತೋಟಗಾರಿಕೆ ಎಲ್ಲಾ ಬೆಳೆಗಳಲ್ಲಿ ಉಪಯೋಗಿಸಬಹುದು.
ಜೀವಾಮೃತ ತಯಾರಿಸುವ ವೈಜ್ಞಾನಿಕ ವಿಧಾನ:
200 ಲೀ ನೀರಿನಲ್ಲಿ ( ಪ್ಲಾಸ್ಡಿಕ್ ಡ್ರಂ ಅಥವಾ ಸಿಮೆಂಟ್ ತೊಟ್ಟಿಗಳು) 10 ಕೆ.ಜಿ ಹಸಿ ಸಗಣಿ,15 ಲೀ.ಗಂಜಲ, 2 ಕೆ.ಜಿ ಪುಡಿಯಾದ ಬೆಲ್ಲ ಹಾಗೂ 2 ಕೆ.ಜಿ ದ್ವಿದಳಧಾನ್ಯದ ಹಿಟ್ಟನ್ನು ಹಾಕಿ ಕಲಸಿ, ಪ್ರತಿದಿನ 3 ಬಾರಿ ತಿರುವಿ ಮುಚ್ಚಿಟ್ಟು 5-7 ದಿನಗಳ ಒಳಗೆ ಉಪಯೊಗಿಸುವುದು ಉತ್ತಮವಾಗಿ ಪರಿಣಾಮಕಾರಿಯಾಗಿರುತ್ತದೆ.
ನೆರಳಿನಲ್ಲಿ ತಯಾರಿಸುವುದು ಸರಿಯಾದ ಕ್ರಮ. ವರ್ಷದ ಎಲ್ಲಾ ಕಾಲದಲ್ಲೂ ಮನೆಯಲ್ಲಿ, ಹಿತ್ತಲಲ್ಲಿ, ಮರದ ಅಡಿಯಲ್ಲಿ ತಯಾರಿಸಬಹುದು.
ಕಡಿಮೆ ಗುಣಮಟ್ಟದ, ಪುಡಿಯಾದ, ತ್ಯಾಜ್ಯ ಬೆಲ್ಲ/ದ್ವಿದಳ ಧಾನ್ಯಗಳನ್ನು ಕೂಡ ಉಪಯೋಗಿಸಬಹುದು.(ದ್ವಿದಳ ಧಾನ್ಯವು ಹಿಟ್ಟಾಗಿರಬೇಕು)
ಪರಿಕರಗಳ ಬೆಲೆಗನುಗುಣವಾಗಿ ಪ್ರತಿ ಲೀ. ಗೆ 50-65 ಪೈಸೆ ವೆಚ್ಚ ಆಗಬಹುದು.
ಇದನ್ನೂ ಓದಿ: ಆಧಾರ್ ಕಾರ್ಡನಲ್ಲಿ ಪೋಟೋ ಬದಲಾವಣೆ ಮಾಡಬೇಕೇ ? ಹಾಗಿದ್ದರೆ ಮಾಡುವುದು ಹೇಗೇ ?
ಜೀವಾಮೃತವನ್ನು ಉಪಯೋಗಿಸುವ ವಿಧಾನ :
ನೇರವಾಗಿ ಭೂಮಿಗೆ ಹಾಕಬಹುದು(ಮರಗಳ ಬುಡದ ಸುತ್ತ/ಇಡೀ ಭೂಮಿಯ ಮೇಲೆ ಎರಚುವುದು) ಮತ್ತು ಯಾವ ಬೆಳೆಗಾದರೂ ಜೀವಾಮೃತವನ್ನು ಉಪಯೋಗಿಸಬಹುದು.
ಹರಿಯುವ ನೀರಿನ ಮೂಲಕ (ಕಾಲುವೆ ಮುಖಾಂತರ/ಡ್ರಿಪ್ ಮುಖಾಂತರ )
ಸೋಸಿದ ನಂತರ ಎಲೆಗಳಿಗೆ ಸಿಂಪರಣೆ ಮಾಡುವುದು (ನೀರು ಬೆರೆಸುವುದು ಅವಶ್ಯವಿಲ್ಲ)
ಜೀವಾಮೃತ ಬಳಕೆಯ ಉಪಯೋಗಗಳು:
ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಸಂಶೋಧನಾ ತಾಕುಗಳಲ್ಲಿ ಹಾಗೂ ರೈತರ ತಾಕುಗಳಲ್ಲಿ ನಡೆಸಿದ ಪ್ರಯೋಗಗಳಿಂದ ತಿಳಿದು ಬಂದ ವಿಷಯವೆಂದರೆ, ಜೀವಾಮೃತವನ್ನು ಎಕರೆಗೆ 200 ಲೀ ನಂತೆ ಪ್ರತಿ ಹಂಗಾಮಿನಲ್ಲಿ 8 ಸಲ ಹಾಕಿದಾಗ ಎರಡು ವರ್ಷದಲ್ಲಿ ಒಟ್ಟು ಬ್ಯಾಕ್ಟಿರೀಯಾ ಸಂಖ್ಯೆ 2-3 ಪಟ್ಟು ಹೆಚ್ಚಾಗುವುದು.ಅದೇ ರೀತಿ ಸಾರಜನಕ ಸ್ಥೀರಿಕರಿಸುವ ಬ್ಯಾಕ್ಟೀರಿಯಾ 2-3 ಪಟ್ಟು ಹೆಚ್ಚಾಗಿದ್ದು ಕಂಡು ಬಂದಿತು. ಈ ರೀತಿಯ ಜೀವಾಭಿವೃದ್ದಿ. ಭೂಮಿಯ ಫಲವತ್ತತೆಗೆ ಕಾರಣವಾಗುವುದು ಎಂಬುದು ಕೂಡ ಮನಗಂಡಿದೆ.
ಕಡಿಮೆ ಸಾವಯುವ ಇಂಗಾಲ ಹೊಂದಿದೆ (ಶೇ.0.48) ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಾಕಿನಲ್ಲಿ ಜೀವಾಮೃತ ಉಪಯೋಗದಿಂದ ಹೆಕ್ಟೇರಿಗೆ 20-25 ಕೆ.ಜಿ ಹೆಚ್ಚಾಗಿದೆ. ಪೋಟ್ಯಾಶಿಯಂ ನಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರಲಿಲ್ಲ. ಆದರೆ ಹೆಚ್ಚಿಗೆ ಸಾವಯುವ ಇಂಗಾಲ (ಶೇ.0.72-0.98) ಹೊಂದಿದ ರೈತರ ಜಮೀನಿನಲ್ಲಿ ವೃದ್ದಿಸಿದ ಬ್ಯಾಕ್ಟೀರಿಯಾಗಳಿಂದ ಎರಡು ವರ್ಷದಲ್ಲಿ ಸಾರಜನಕವು ಹೆಕ್ಟೇರಿಗೆ 25 ಕೆ.ಜಿ ರಂಜಕ 8-10 ಕೆ.ಜಿ ಹಾಗೂ ಪೊಟ್ಯಾಶಿಯಂ 33-35 ಕೆ.ಜಿ ಹೆಚ್ಚಾಗಿದ್ದು ಕಂಡುಬಂದಿದೆ.
ಮಾಹಿತಿ ಕೃಪೆ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ.