Friday, November 22, 2024

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ 1:3 ಅರ್ಹರಾದ ಅಭ್ಯರ್ಥಿಗಳ ಪಟ್ಟಿ

ಆತ್ಮೀಯ ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ),ಹಿರಿಯ ಸಹಾಯಕರು, ಕಿರಿಯ ಸಹಾಯಕರು,ಮತ್ತು ಬೀಜ ಸಹಾಯಕರು, ಹುದ್ದೆಗಳಿಗೆ ಜನವರಿಯ 30-01-2023 ರಿಂದ 12-02-2023 ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದ್ದು.ಅಭ್ಯರ್ಥಿಗಳ ಮಾಹಿತಿಗಾಗಿ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.

ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ವರದಿಯನ್ನು ಆಧಾರಿಸಿ ಅಂತಿಮ ಕೀ ಉತ್ತರಗಳನ್ನು ಮತ್ತು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೇಯಲ್ಲಿ ಗಳಿಸಿರುವ ಅಂಕಗಳನ್ನು ದಿನಾಂಕ 12-04-2023 ರಂದು ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಿಂದ ಒದಗಿಸಲಾದ ಖಾಲಿ ಉಳಿದ ಹುದ್ದೆಗಳ ವರ್ಗಿಕರಣದಂತೆ ಹಾಗೂ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಮೀಸಲಾತಿಗಳ ಆಧಾರದ ಮೇಲೆ 1:3 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯ ಕೆಳಗೆ ನೀಡಲಾಗಿರುತ್ತದೆ.

ಇಲ್ಲಿ ಓತ್ತಿ ನಿಮಗೆ 1:3 ಲಿಂಕ್ ಒದಗುತ್ತದೆ.

ಇದನ್ನೂ ಓದಿ: ಜೀವಾಮೃತ ತಯಾರಿಸುವ ವೈಜ್ಞಾನಿಕ ವಿಧಾನ:

ದಾಖಲೆ ಪರಿಶೀಲನೆಗಾಗಿ ಬರುವ ವಿದ್ಯಾರ್ಥಿಗಳ ಗಮನಕ್ಕೆ:

ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಯಾವುದೇ ಅಭ್ಯಥಿಗಳಿಗೆ TA ಮತ್ತು DA ನೀಡಲಾಗುವುದಿಲ್ಲ.
ದಾಖಲೆಗಳ ಪರಿಶೀಲನೆ ಮತ್ತು ನಂತರದ ನೇಮಕಾತಿ ಪ್ರಕ್ರಿಯೆಯು ಕಾಲಕಾಲಕ್ಕೆ ನೇಮಕಾತಿಯ ನಿಬಂಧನೆಗಳು ಸಂಭಂದಿತ ಸರ್ಕಾರಿ ನಿಯಮಗಳು/ಆದೇಶಗಳು/ಅಧಿಸೂಚನೆಗಳು/ಮಾನ್ಯ ನ್ಯಾಯಾಲಯಗಳ ಆದೇಶದ ಷರತ್ತಿಗೆ ಒಳಪಟ್ಟಿರುತ್ತದೆ.


ಪ್ರಾಧಿಕಾರವು ನಿಗಧಿ ಪಡಿಸಿದ ಹುದ್ದೆವಾರು ವೇಳಾ ಪಟ್ಟಿಯಂತೆ,ಅಭ್ಯರ್ಥಿಗಳು ನಿಗಧಿತ ಸಮಯದಲ್ಲಿ ಅರ್ಜಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆ ಹಾಗೂ ಮೀಸಲತಿಗಳ ಅನಿಸಾರ ಕಡ್ಡಾಯವಾಗಿ ಮೂಲ ದಾಖಲೆಗಳನ್ನು ಪ್ರಾಧಿಕಾರದಲ್ಲಿ ಸಲ್ಲಿಸಿ ಪರಿಶೀಲಿಸಿಕೊಳ್ಳತಕ್ಕದ್ದು.
ಮೆರಿಟ್ ಪಟ್ಟಿಯಲ್ಲಿ ಹೆಸರಿಸಿದ ಮಾತ್ರಕ್ಕೆ ಅಭ್ಯರ್ಥಿಯು ನೇಮಕಾತಿಗೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ.ಮತ್ತು ಅಭ್ಯರ್ಥಿತ್ವವು ಮೂಲ ದಾಖಲೆಗಳ ಪರಿಶೀಲನೆ,ಅರ್ಹತಾ ಷರತ್ತುಗಳು ಮತ್ತು ಸರ್ಕಾರ/ಸಕಷ್ಮ ಪ್ರಾಧಿಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ನಿಯಮಗಳ ಷರತ್ತಿಗೆ ಒಳಪಟ್ಟಿರುತ್ತದೆ.


ಪ್ರಾಧಿಕಾರದಿಂದ ನಡೆಸಲಾಗುವ ಮೂಲ ದಾಖಲೆಗಳ ಪರಿಶೀಲನೆ ಗೈರು ಹಾಜರಾದಲ್ಲಿ ಮತ್ತೋಮ್ಮೆ ಮೂಲ ದಾಖಲೆಗಳ ಪರಿಶೀಲನೆ ಕಾಲಾವಕಾಶ ನೀಡಲಾಗುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles