Friday, November 22, 2024

IFS scheme agriculture-ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆಯಲ್ಲಿ 1 ಲಕ್ಷದವರೆಗು ಸಹಾಯಧನ ನೀಡಲಾಗುತ್ತಿದೆ!

ನಮಸ್ಕಾರ ರೈತ ಭಾಂಧವರೇ, ಕೃಷಿ ಇಲಾಖೆಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ 1ಲಕ್ಷದವರೆಗು ಸಹಾಯಧನ ನೀಡುವ ಯೋಜನೆಯಿದ್ದು, ಅದಕ್ಕೆ ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಸಮಗ್ರ ಕೃಷಿ ಪದ್ಧತಿಗಳು ಯಾವುವು ಎಂಬ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಇತ್ತೀಚಿನ ದಿನಗಳಲ್ಲಿ ರೈತರು ಒಂದೇ ಬೆಳೆಯನ್ನು ಮಾಡಿ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರೈತರಿಗೆ ಆದಾಯ ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ.

ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ಜಮೀನು ಹೊಂದಿದ ರೈತರೇ ಹೆಚ್ಚಾಗಿರುವುದರಿಂದ ಅವರ ಆದಾಯವು ಕಡಿಮೆ ಇರುವುದರಿಂದ ಅಂತಹ ರೈತರಿಗೆ ವಾರದ ಅಥವಾ ಪ್ರತಿ ತಿಂಗಳು ಆದಾಯ ಬರುವ ಹಾಗೆ ಮಾಡಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡಲ್ಲಿ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಕಂಡುಬರುವುದಿಲ್ಲ.

ಕೃಷಿಯ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಆಡು/ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ,ಮೀನು ಸಾಕಾಣಿಕೆ ಇಂತಹ ಉಪಕಸುಬುಗಳನ್ನು ಮಾಡುವುದರಿಂದ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಸಂಭವಿಸುವುದಿಲ್ಲ.

ಇದನ್ನೂ ಓದಿ:ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿಯನ್ನು ನೋಡಿಕೊಳ್ಳುವ ವಿಧಾನ! ನಿಮ್ಮದು ಆಗಿದಿಯೇ ಚೆಕ್ ಮಾಡಿ.

IFS scheme-ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿಯ ಯೋಜನೆಯ ಘಟಕಗಳು:

1)ಕೃಷಿ ಹೊಂಡ ಮಾಡಿಕೊಳ್ಳಬೇಕು.

2)ಆಹಾರ ಬೆಳೆ ಬೆಳೆಯ ಬೇಕು.(ಭತ್ತ,ರಾಗಿ,ಜೋಳ,ಇತ್ಯಾದಿ)

3)ಹೈನುಗಾರಿಕೆ ಮಾಡಬೇಕು.

4)ಕೋಳಿ ಸಾಕಾಣಿಕೆ ಮಾಡಬೇಕು.

5)ಎರೆಹುಳು ಗೊಬ್ಬರದ ತೊಟ್ಟಿ ರಚನೆ.

6)ಅಜೋಲ್ಲ ತೊಟ್ಟಿ ರಚನೆ.

7)ಜೇನು ಸಾಕಾಣಿಕೆ ಪೆಟ್ಟಿಗೆ ಬೇಕು.

8)ಅರಣ್ಯ ಸಸಿಗಳನ್ನು ಬೆಳೆಯಬೇಕು.

9)ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ(ಅಗತ್ಯವಿದ್ದರೆ)

ಈ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳುವ ರೈತರಿಗೆ 1 ಲಕ್ಷದವರೆಗೂ ಸಹಾಯಧನ ಸಿಗುತ್ತದೆ.

ಇದನ್ನೂ ಓದಿ:ಪಿಎಮ್ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿಸಲ್ಲಿಸಲು ಅವಕಾಶ!

Where apply IFS scheme-ಸಮಗ್ರ ಕೃಷಿ ಪದ್ಧತಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಮಗ್ರ ಕೃಷಿ ಪದ್ಧತಿ ಮಾಡಲು ಆಸಕ್ತ ಇರುವ ರೈತರು ತಮ್ಮ ತಮ್ಮ ಹತ್ತಿರದ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.(ಸೂಚನೆ. ಈ ವರ್ಷದ ಅರ್ಜಿ ಸಲ್ಲಿಕೆ ಮುಕ್ತಾಯ ವಾಗಿದ್ದರೆ ಬರುವ ವರ್ಷಕ್ಕೆ ಈಗಲೇ ಹೆಸರು ನೊಂದಣಿ ಮಾಡಲು ಹೇಳಿ ಅಥವಾ ಅಧಿಕಾರಿಗಳ ಸಂಪರ್ಕದಲ್ಲಿದ್ದು ಮುಂದಿನ ವರ್ಷದ ಮಾಹಿತಿ ತಿಳಿದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles