Friday, September 20, 2024

HSRP Number Plate: 2019 ರ ಹಿಂದಿನ ವಾಹನಗಳಿಗೆ ಈ ನಿಯಮ ಕಡ್ಡಾಯ!!!ನಿಯಮ ಪಾಲಿಸದೇ ಇದ್ದರೆ ದಂಡ ಕಡ್ಡಾಯ? ಈ ನಿಯಮ ನೋದಣಿಗೆ ಕೊನೆಯ ದಿನಾಂಕ ಯಾವಾಗ? ನೋಂದಣಿ ಪ್ರಕ್ರಿಯೆ ಹೇಗೇ? ಸಂಪೂರ್ಣ ಮಾಹಿತಿ ತಿಳಿಯಿರಿ.

HSRP Number Plate: ಆತ್ಮೀಯ ಸ್ನೇಹಿತರೇ ನಿಮ್ಮ ಬಳಿ/ಹತ್ತಿರ ಕಾರು, ಬೈಕ್, ಮತ್ತು ಇತರೆ ನಾಲ್ಕು ಚಕ್ರದ ವಾಹನಗಳು 2019ರ ಏಪ್ರಿಲ್ 1ಕ್ಕಿಂತಾ ಹಿಂದಿನದು ಇದ್ದರೆ,ವಾಹನದ ನೋಂದಣಿ ಸಂಖ್ಯೆ ಸ್ಟಿಕ್ಕರ್ ರೀತಿ ಇದೆಯಾ? ಹಾಗಾದರೆ ಕೂಡಲೇ ನಿಮ್ಮ ಹಳೇ ವಾಹನದ ನಂಬರ್ ಪ್ಲೇಟ್ ಬೇಗ ಬದಲಿಸಿ! ಸ್ಟಿಕ್ಕರ್ ನಂಬರ್ ಪ್ಲೇಟ್ ಬದಲಿಗೆ HSRP Number Plate ಹಾಕಿಸಿಕೊಳ್ಳಬೇಕು!. ಇಲ್ಲವಾದ್ರೆ ದಂಡ ಕಟ್ಟಬೇಕಾದೀತು!

HSRP ನಂಬರ್‌ ಪ್ಲೇಟ್‌ನಿಂದ ಉಪಯೋಗಗಳು ಏನು? ಮತ್ತು ಯಾವ ಯಾವ ವಾಹನಗಳಿಗೆ ಈ ಎಚ್‌ಎಸ್‌ಆರ್‌ಪಿ ನಿಯಮ ಕಡ್ಡಾಯ ಮಾಡಲಾಗಿದೆ.? HSRP Number Plate ಅಂದ್ರೆ ಏನು? ಈ ಪ್ರಕ್ರಿಯೇ ಮಾಡುವುದು ಎಲ್ಲಿ? ಯಾವ ವರ್ಷದ ಹಿಂದಿನ ವಾಹನಗಳಿಗೆ ಈ ನಿಯಮ ಅಳವಡಿಕೆ?ಕೋನೆಯ ದಿನಾಂಕ ಯಾವಾಗ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿರುತ್ತದೆ.

HSRP Number Plate: (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್). ಅಂದ್ರೆ ಇದು ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ ಪ್ಲೇಟ್. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಜಾರಿಯಲ್ಲಿದೆ. ಆದರೆ ಹಳೆಯ ವಾಹನಗಳಿಗೆ HSRP(ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ಪ್ಲೇಟ್‌ಗಳಲ್ಲಿ ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತೆ.

ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್‌ ಪಿನ್‌ಗಳನ್ನ ಒಳಗೊಂಡಿರುತ್ತದೆ. ಪೇಪರ್‌ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿ ಈ ಪ್ಲೇಟ್‌ ಅನ್ನು ವಾಹನಕ್ಕೆ ಅಂಟಿಸಿರುತ್ತಾರೆ. ಜೊತೆಯಲ್ಲೇ ಈ ಪ್ಲೇಟ್‌ನ ಮೇಲ್ಭಾಗದ ಎಡ ಭಾಗದಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಚಿಹ್ನೆ ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಚಿಹ್ನೆ ಕ್ರೋಮಿಯಂ ಲೋಹ ಬಳಸಿ ಮಾರ್ಪಡಿಸಲಾಗಿರುತ್ತದೆ. ಹಾಗೂ ನೋಡುವರ ಕಣ್ಣಿಗೆ ಈ ಪ್ಲೇಟ್ ಮೋಹಕವಾಗಿರುತ್ತದೆ.

ಯಾವ ವರ್ಷದ ವಾಹನಗಳಿಗೆ ಮತ್ತು ಯಾವ ಯಾವ ವಾಹನಗಳಿಗೆ ಈ ನಿಯಮ:

2019 ಏಪ್ರಿಲ್ ಕ್ಕಿಂತ ಪೂರ್ವದಲ್ಲಿ ನೋಂದಣಿಯ (Registration) ವಾಹನಗಳಿಗೆ ನಿಯಮ ಅನ್ವಯವಾಗಲಿದೆ.
ನವೆಂಬರ್ 17ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವಾಗಿರುತ್ತದೆ.
ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು,
ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ HSRP Number Plate ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ.

ಇದನ್ನೂ ಓದಿ: ಟ್ರಾಕ್ಟರ್ ಜಂಕ್ಷನ್ (Tractor Juction) ನಲ್ಲಿ ಯಾವೆಲ್ಲ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು ಲಭ್ಯ?
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:
ಇದನ್ನೂ ಓದಿ: “ಸ್ವಾವಲಂಬಿ ಸಾರಥಿ” ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನ ಅರ್ಜಿ ಆಹ್ವಾನ
ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:

HSRP Number Plate : (ಎಚ್‌ಎಸ್‌ಆರ್‌ಪಿ ) ಅಳವಡಿಕೆಯ ಪ್ರಕ್ರಿಯೇ ಹೇಗೇ?


HSRP Number Plate ಅಳವಡಿಸಿಕೋಳ್ಳಲು ಆನ್ ಲೈನ್ ನಲ್ಲಿ ಈ ಲಿಂಕ್ ಮೂಲಕ ಅಳವಡಿಸಿಕೊಳ್ಳಬಹುದು.

ಹಂತ: 1: ಮೊದಲನೆಯದಾಗಿ https://transpot.karnataka.gov.in www.siam.in ಭೇಟಿ ನೀಡಿ, ಬುಕ್ ಎಚ್‌ಎಸ್‌ಆರ್‌ಪಿ ಕ್ಲಿಕ್ ಮಾಡಬೇಕಾಗಿರುತ್ತದೆ.

ಹಂತ:2: Next ಮಾಲೀಕರ ಹೆಸರು, ನೋಂದಣಿ ಸಂಖ್ಯೆ, ಮೇಲ್ ಐಡಿ,ರಾಜ್ಯ,ಜಿಲ್ಲೆ ಆಯ್ಕೆ ನೀಡಬೇಕಾಗುತ್ತದೆ.

ಹಂತ: 3 : Next ವಾಹನದ ಮೂಲ ದಾಖಲೆಗಳ ವಿವರವನ್ನು ಭರ್ತಿ ಮಾಡಬೇಕಾಗುತ್ತದೆ.

ಹಂತ: 4 : ನಂತರ ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್ ನ ಸ್ಥಳ ಆಯ್ಕೆ,ಮಾಡಬೇಕು

ಹಂತ:5: ನಂತರ ಹಣ (ಶುಲ್ಕವನ್ನು) ಆನ್‌ಲೈನ್‌ನಲ್ಲಿ ಪಾವತಿಸಬೇಕಾಗಿರುತ್ತದೆ.
ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ

ಹಂತ: 6: ನಂತರ ನಿಮ್ಮ ಅನುಕೂಲಕ್ಕಾಗಿ HSRP Number Plate ಅಳವಡಿಕೆಯ ದಿನಾಂಕ, ಸಮಯ,ಸ್ಥಳ ಆಯ್ಕೆ ಮಾಡಬೇಕಾಗಿರುತ್ತದೆ, ಪೇಟ್ ಅಳವಡಿಕೆ ಸ್ಥಳ
ವಾಹನ ಮಾಲೀಕರ ಕಚೇರಿ ಆವರಣ, ಮನೆಯ ಸಮೀಪದ ಸ್ಥಳವನ್ನು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬದಾಗಿರುತ್ತದೆ.

ಇಲ್ಲಿ ಕ್ಲಿಕ್ ಮಾಡಿ
ಈ ಪ್ರಕ್ರಿಯೆ ಮಾಡಲು ಗೊಂದಲ ಉಂಟಾದರೆ ನೀವು ಹತ್ತಿರದ ಗ್ರಾಮ ಓನ್, ಅಥವಾ ನಾಗರೀಕ ಸೇವಾ ಕೇಂದ್ರಗಳಿಗೆ ಹಾಗೂ ವಾಹನ ಖರೀದಿ ಮಾಡಿರುವ ಕೇಂದ್ರಕ್ಕೆ ತೆರಳಿ ಈ ಪ್ರಕ್ರಿಯೆ ಮಾಡಿಕೊಳ್ಳಬಹುದು.

HSRP Number Plate ಉಪಯೋಗವೇನು?

HSRP Number Plate (ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌) ನಲ್ಲಿ ವ್ಯಕ್ತಿಯ/ಮಾಲೀಕರ ಕಾರಿನ ಅಥವಾ ದ್ವಿಚಕ್ರ ವಾಹನದ ಸಂಪೂರ್ಣ ಮಾಹಿತಿಒಳಗೊಂಡಿರುತ್ತದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ವಾಹನದ ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್‌ನಲ್ಲಿ ಸಂಗ್ರಹಗೊಂಡಿರುತ್ತದೆ. ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದ್ರೆ ಈ ಮಾಹಿತಿಯನ್ನ ಬಳಸಿಕೊಂಡು ಬೇಗ ಪತ್ತೆಹಚ್ಚಬಹುದು.ಮಾಲೀಕರ ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನ್ನು ಅನಧಿಕೃತವಾಗಿ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಇನ್ನು ಕಳ್ಳರ ಕೈಗೆ ಸಿಕ್ಕರೆ ಕೂಡಲೇ ತೆಗೆಯೋದಕ್ಕೂ ಸಾಧ್ಯವಿಲ್ಲ. ಇನ್ನು ಪ್ಲೇಟ್‌ನಲ್ಲಿ ಇರುವ ಮಾಹಿತಿಯನ್ನ ಬದಲಾವಣೆ ಮಾಡಲು ಅಷ್ಟು ಸುಲಭವಿರುವುದಿಲ್ಲ.. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡೋದಕ್ಕೂ ಸಾಧ್ಯವಿಲ್ಲ.

ನಿಮ್ಮ ವಾಹನವನ್ನ ಕಳ್ಳತನ ಮಾಡಿ ಅದರ ನಂಬರ್ ಪ್ಲೇಟ್ ತೆಗೆದು ಹಾಕಿ ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳೋದನ್ನೂ ಎಚ್‌ಎಸ್‌ಆರ್‌ಪಿ ಪ್ಲೇಟ್ ಮೂಲಕ ತಡೆಗಟ್ಟಬಹುದು. ವಾಹನಗಳ ಸುರಕ್ಷತೆ ಜೊತೆಯಲ್ಲೇ ರಾಷ್ಟ್ರೀಯ ಭದ್ರತೆಗೂ ಈ ಪ್ಲೇಟ್ ಉಪಯೋಗವಾಗುತ್ತದೆ.

ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದ್ರೆ ನೀವು ಏನು ಮಾಡ್ತೀರಿ? ಕೂಡಲೇ ಪೊಲೀಸರಿಗೆ ದೂರು ಕೊಡ್ತೀರಿ.. ಆಗ ಪೊಲೀಸರು ಆರ್‌ಟಿಒ ನೆರವಿನಿಂದ ಮಾಹಿತಿ ಸಂಗ್ರಹ ಮಾಡ್ತಾರೆ. ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇದ್ದರೆ, ಅದರ ಮಾಹಿತಿ ವಾಹನ್ ತಂತ್ರಾಂಶದಲ್ಲಿ ಇರುತ್ತೆ. ಈ ವೇಳೆ ಅಧಿಕೃತ ಅಲ್ಲದ ವಾಹನ ರಸ್ತೆಯಲ್ಲಿ ಓಡಾಡ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು. ಇನ್ನು ನೀವು ನಿಮ್ಮ ಹಳೆಯ ವಾಹನಕ್ಕೂ ಆದಷ್ಟು ಬೇಗ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕಿದೆ.

ವಿಶೇಷ ಮಾಹಿತಿ: HSRP Number Plate ಅಳವಡಿಸದೆ ಇದ್ದರೆ ವಾಹನವನ್ನ ಮಾರಾಟ ಮಾಡಿದ ಸಂದರ್ಭದಲ್ಲಿ ಮಾಲೀಕತ್ವದ ಬದಲಾವಣೆ ಸಾಧ್ಯವಾಗೋದಿಲ್ಲ.!!!ವಿಳಾಸ ಬದಲಿಸೋಕೆ ಆಗೋದಿಲ್ಲ. ನಕಲಿ ಆರ್‌ಸಿ ಕೂಡಾ ಸಿಗೋದಿಲ್ಲ. ವಿಮೆ ಅಪ್ಡೇಟ್ ಮಾಡೋದಕ್ಕೆ ಆಗಲ್ಲ. ವಾಹನ ಸಾಮರ್ಥ್ಯ ಅನುಮೋದನೆ ಕೂಡಾ ಸಿಗಲ್ಲ.

ಇತ್ತೀಚಿನ ಸುದ್ದಿಗಳು

Related Articles