Thursday, November 21, 2024

Drip and Sprinkler irrigation Application:ತೋಟಗಾರಿಕೆ ಇಲಾಖೆಯಿಂದ 90% ಮತ್ತು 75% ಸಹಾಯಧನದಲ್ಲಿ ನೀರಾವರಿ ಘಟಕ ಅರ್ಜಿ:

ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:

Drip and Sprinkler irrigation Application:ತೋಟಗಾರಿಕೆ ಇಲಾಖೆಯಿಂದ 90% ಮತ್ತು 75% ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿಆಹ್ವಾನ:
ಅರ್ಜಿ ಸಲ್ಲಿಸಲು ದಾಖಲೆಗಳೇನು? ಅರ್ಜಿ ಸಲ್ಲಿಕೆಯಲ್ಲಿ? ಸಂಪೂರ್ಣ ಯೋಜನೆ ವಿವರ ಈ ಅಂಕಣದಲ್ಲಿ.

ಮೈಸೂರು: ಆತ್ಮೀಯ ರೈತ ಬಾಂದವರೇ 2023- 24ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿ೦ಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಆಸಕ್ತ ರೈತರು ತಮಗೆ ಸಂಬಂದಿಸಿದ ತಾಲೂಕಿನ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಯೋಜನೆ ವಿವರ:


ಕೃಷಿ ಸಿ೦ಚಾಯಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರ ಜಮೀನಿನ ವಿಸ್ತೀರ್ಣ ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಇದ್ದರೆ ಆ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತದೆ.
ಹಾಗೂ ಇತರೆ ಸಮುದಾಯದ ರೈತರಿಗೆ ಗರಿಷ್ಠ ಎರಡು ಎಕರೆ ಪ್ರದೇಶದ ವರೆಗೆ ಶೇ. 75 ರಷ್ಟು ಸಹಾಯಧನ ನೀಡುಲಾಗುವುದು. ಮತ್ತು ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗ ಸೂಚಿ ಅನ್ವಯ ಎರಡು ಎಕರೆ ಮೇಲ್ಪಟ್ಟು ಗರಿಷ್ಠ ಐದು ಎಕರೆ ಪ್ರದೇಶದವರೆಗೆ ಶೇ. 45 ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿರುತ್ತಾರೆ.

ಕೃಷಿ ಮತ್ತು ತೋಟಗಾರಿಕೆ ಸಂಬಂಧಿಸಿದ ಯೋಜನೆಗಳು:


ಇದನ್ನೂ ಓದಿ: ಎಲೆ ಚುಕ್ಕೆ : ಕಡೆಗಣಿಸಿದರೆ ಇಳಿದೀತು ಅಡಿಕೆ ಇಳುವರಿ, ಯಾವ ರೋಗಾಣು ಕಾರಣ, ರೋಗದ ಲಕ್ಷಣಗಳೇನು? ನಿರ್ವಹಣೆ ಹೇಗೆ??
ಇದನ್ನೂ ಓದಿ: ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ
ಇದನ್ನೂ ಓದಿ: MGNRGA ಯೋಜನೆಯಡಿ 57000/- ರೂ ಧನಸಹಾಯ
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಘಟಕಗಳಿಗೆ ಶೇ. 50 ರಷ್ಷು ಸಹಾಯಧನ

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿ ನಮೂನೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ)
ಆಧಾರ್‍ ಕಾರ್ಡ ಪ್ರತಿ
ಉತಾರ,(ಜಮೀನಿನ ರೆಕಾರ್ಡ)
ನೀರಾವರಿ ಪ್ರಮಾಣ ಪತ್ರ
ಜಮೀನಿನ ನಕಾಶೆ
ಒಪ್ಪಿಗೆ ಪತ್ರ (ಜಂಟಿ ಇದ್ದರೆ ಮಾತ್ರ)
ಬಾಂಡ್ -20 rs
ಅರ್ಜಿದಾರರ ಛಾಯಚಿತ್ರ
ಕೃಷಿ ಇಲಾಖೆಯ NOC

ಹೆಚ್ಚಿನ ಮಾಹಿತಿಗಾಗಿ ಹಾಗೂ ವಿವರಗಳಿಗಾಗಿ ಅರ್ಜಿ ಮತ್ತು ದಾಖಲಾತಿಗಳ ಮೈಸೂರು ಜಿಪಂ, ಮೈಸೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ. 0821-2430 450, ಎಚ್.ಡಿ. ಕೋಟೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ. 08228-255261, ಹುಣಸೂರು ತಾಲೂಕು ಹಿರಿಯ ಸಹಾಯಕ ತೋಟಗಾ ರಿಕೆ ನಿರ್ದೇಶಕರ ದೂ. 08222-252447, ಕೆ.ಆರ್‌ನಗ ರ ತಾಲೂಕು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರ ದೂ. 08223-262791, ನಂಜನಗೂಡು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ. 08221-226201, ಪಿರಿಯಾಪಟ್ಟಣ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ. 08223-273535, ಟಿ. ನರಸೀಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ. 08227-260086 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್‌ನ ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿರುತ್ತಾರೆ.

ಗಮನಿಸಿ: ಈ ಅಂಕಣದಲ್ಲಿ ನೀಡಿರುವ ಮಾಹಿತಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಆಗಿರುತ್ತದೆ. ಬೇರೆ ಜಿಲ್ಲೆಗೆ ಸಂಬಂಧಿಸಿದ ಪ್ರಧಾನಮಂತ್ರಿ ಕೃಷಿ ಸಿ೦ಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಮಾಹಿತಿಯನ್ನು ನಿಮ್ಮ ಜಿಲ್ಲೆಯ ಅಥವಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಅಥವಾ ಇಲಾಖೆಯನ್ನು ಭೇಟಿ ನೀಡಿ ಮಾಹಿತಿ ತಿಳಿಯಿರಿ.

ಇತ್ತೀಚಿನ ಸುದ್ದಿಗಳು

Related Articles