ಇತ್ತೀಚಿನ ದಿನಗಳಲ್ಲಿ ಜಾನುವಾರು ಆಹಾರ ಪದ್ದತಿಯಲ್ಲಿ ಹೊಸ ಹೊಸ ಸಂಶೋಧನೆಗಳಾಗಿತ್ತಿವೆ. ಜಾನುವಾರುಗಳಿಂದ ಹಾಲು, ಮಾಂಸ ಮತ್ತು ಉಣ್ಣೆ ಉತ್ಪಾದನೆಯನ್ನು, ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವುದು ಕಂಡುಬರುತ್ತದೆ.ಈ ಶತಮಾನದಲ್ಲಿ ಜಾನುವಾರುಗಳ ಆಹಾರ ನಿರ್ವಹಣೆ ಪದ್ದತಿಯು ಪಶು ಆಹಾರ ಮಿಶ್ರಣದ ಕುರಿತೇ ಹೆಚ್ಚು ಕೇಂದ್ರೀಕೃತವಾಗಿರುವುದನ್ನು ಕಾಣುತ್ತೇವೆ.
ಸುಲಭ ಪದ್ದತಿಯನ್ನು ಜಾನುವಾರು ಆಹಾರ ನಿರ್ವಹಣೆಯಲ್ಲಿ ಅಳವಡಿಸಿ ಸಾಕಣೆಕೆದಾರರಿಗೆ ಅನುಕೂಲವಾಗಲೆಂದು ಕೆಲವೊಂದು ತಂತ್ರಜ್ಯಾನವನ್ನು ಪರಿಚಯಿಸಬೇಕಾದ ಅವಶ್ಯಕತೆ ಇದೆ.
ಜಲಮೇವು ಉತ್ಪಾದನೆ :
ಜಾನುವಾರಗಳಿಗೆ ಹಸಿರು ಮೇವು ಉತ್ಪಾದಿಸುವುದು ಸುಲಭದ ಕೆಲಸವೇನಲ್ಲ ಅದರಲ್ಲೂ ವಿಶೇಷವಾಗಿ ಬರಗಾಲದಲ್ಲಿ.ಆದರೆ ಪಶುವೈದ್ಯೆಕೀಯ ವಿಜ್ಞಾನದಲ್ಲಿ ಈಗಿತ್ತಲಾಗಿ ಸಂಶೋಧಿಸಲಾದ ಜಲಮೇವು ಉತ್ಪಾದನೆಯು ಹಸಿರು ಮೇವು ಬೆಳೆಸುವುದನ್ನು ಪರಿಸರ ಪೂರಕವಾಗಿ ಸುಲಭವಾಗಿಸಿದೆ. ಈ ಪದ್ದತಿಯಲ್ಲಿ ಕಡಿಮೆ ನೀರನ್ನು ಬಳಸಿ ಕಡಿಮೆ ಅವಧಿಯಲ್ಲಿ ಅತ್ಯಲ್ಪ ಸ್ಥಳದಲ್ಲಿ ಮತ್ತು ಮಣ್ಣಿನ ಅವಶ್ಯಕತೆ ಇಲ್ಲದೆ ಹಸಿರು ಮೇವನ್ನು ಸುಲಭವಾಗಿ ಬೆಳೆಸಬಹುದು.
ಜಲಮೇವು ಬೆಳೆಸುವ ವಿಧಾನ :
ಮೊದಲು ಬೀಜವನ್ನು ಶೀಲಿಂದ್ರ ನಾಶಕದಿಂದ ಉಪಚರಿಸಬೇಕು. ನಂತರ ಒಂದು ದಿನ
ನೀರಿನಲ್ಲಿ ಮುಳುಗಿಸಿ ಇಡಬೇಕು. ನಂತರ ಒದ್ದೆ ಗೋಣಿಚೀಲದಲ್ಲಿ ಮುಚ್ಚಿ ಇಡಬೇಕು. ಹೀಗೆ ನಾಲ್ಕು ದಿನಗಳವರೆಗೆ ಮೊಳಕೆ ಬರುವವರೆಗೆ ಗೋಣಿಚೀಲದಲ್ಲಿ ಇಡಬೇಕು ಐದನೇ ದಿನಕ್ಕೆ ಮೊಳಕೆಯೊಡೆದ ಬೀಜಗಳನ್ನು ಜಲಮೇವಿನ ತಟ್ಟೆಗೆ ವರ್ಗಾಯಿಸಬೇಕು ಮತ್ತು ಸಮನಾಗಿ ಹರಡಬೇಕು ಜಲಮೇವಿನ ಘಟಕದಲ್ಲಿ ಕಬ್ಬಿಣದ ಪಟ್ಟಿಯ ಮೇಲೆ ತಟ್ಟೆಯನ್ನು ಒಂದು ಬಲದಿಂದ ದೂಡಿದರೆ ಮತ್ತೊಂದು ತುದಿಯಿಂದ ಕೊನೆಯ ತಟ್ಟೆಯು ಹೊರಬರುತ್ತದೆ.
ಪ್ರತಿವೊಂದು ತಟ್ಟೆಯಲ್ಲಿ” ಜಲಮೇವಿನ” ಅವಶ್ಯಕತೆಗನುಗುಣವಾಗಿ ಲೆಕ್ಕಹಾಕಿ ಮೊಳಕೆಯೊಡೆದ ಬೀಜಗಳನ್ನು
ಸಮನಾಗಿ ಹರಡಬೇಕಾಗಿರುತ್ತದೆ.ಇದೇ ಜಲಮೇವಿನ ಘಟಕದಲ್ಲಿ ಗೋಧಿ, ಸಿರಿಧಾನ್ಯಗಳು, ಓಟ್ಸ, ಸೆಣಬು ಮತ್ತಿತರ ಧಾನ್ಯಗಳನ್ನು ಸಹ ಇದೇ ಮಾದರಿಯಲ್ಲಿ ಬೆಳೆಸಬಹುದಾಗಿದೆ.ಆದರೆ ಜಲಮೇವಿಗೆ ಮೇವಿನ ಜೋಳ (ಮೆಕ್ಕೆ ಜೋಳ)ಸೂಕ್ತವಾಗಿರುತ್ತದೆ.
ಪ್ರತಿಯೊಂದು ತಟ್ಟಗೂ ತಲಾ 2.2ಕ ಕೆ.ಜಿ ಬೀಜವನ್ನು (100)ಕೆಜಿ ಯಂತ್ರಕ್ಕೆ 1.2 ಕೆ.ಜಿ ಬೀಜವನ್ನು( 50 ಕೆಜಿ ಯಂತ್ರಕ್ಕೆ )ವರ್ಗಾಯಿಸಬೇಕು.ಜಲಮೇವಿನ ವಿಧಾನದಿಂದ ಪ್ರತಿಯೊಂದು ಕೆ.ಜಿ ಮೇವಿನ ಜೋಳದಿಂದ ೧೦ ದಿನಗಳಲ್ಲಿ 6 ಕೆ.ಜಿ ಹಸಿರು ಮೇವನ್ನು ಪಡೆಯಬಹುದು.
ಜಲಕೃಷಿಯಲ್ಲಿ ಬೆಳೆಯುವ ಹುಲ್ಲಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಅಂಶ ಜಾಸ್ತಿ ಇರುತ್ತದೆ.ಈ ಹುಲ್ಲನ್ನು ನಾವು ಕಾಳುಸಮೇತ ರಾಸುಗಳಿಗೆ ,ಕುರಿಗಳಿಗೆ,ಮೇಕೆಗಳಿಗೆ ಕೊಡಬಹುದು. ಈ ಹುಲ್ಲಿನಲ್ಲಿ ಶೇ.13 ರಷ್ಟು ಪ್ರೋಟಿನ್.ಶೇ 3 ಕೊಬ್ಬಿನಾಂಶ ಶೇ.14 ರಷ್ಟು ಕಚ್ಚಾ ನಾರಿನಾಂಶ ಇರುತ್ತದೆ.
ಜಲಕೃಷಿ ಹುಲ್ಲಿನ ಅತ್ಯುತ್ತಮ ಅಂಶದ ಗಣವೆಂದರೆ ಮಣ್ಣಿನಾಂಶ ಆದಷ್ಟು ಕಡಿಮೆ ಇರುತ್ತದೆ,ಆದರಿಂದ ಜಲಕೃಷಿ ಮೇವು ಚೆನ್ನಾಗಿ ಜೀರ್ಣವಾಗಿ ರಾಸುಗಳ ಹಾಲು ಉತ್ಪಾದನೆ, ಹಾಲಿನ ಗುಣಮಟ್ಟ, ರಾಸುಗಳ ಸಂತಾನ್ಪೋತ್ಪತ್ತಿ ಕ್ರಿಯೆಗಳಲ್ಲಿ ಸುಧಾರಣೆಯಾಗುವುದರಿಂದ ರಾಸುಗಳಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.
ಮೇವು ಬೆಳೆಯಲು ಜಮೀನಿನ ಕೊರತೆ, ನೀರಿನ ಅಭಾವ ಹಾಗೂ ಬಂಜರು ಭೂಮಿಯಿಂದ ಮೇವನ್ನು ಬೆಳೆಯಲಾರದ ಪರಿಸ್ಥಿತಿಯಲ್ಲಿ “ಜಲಮೇವು” ನಮ್ಮ ಹೈನುಗಾರರಿಗೆ, ವಿಶೇಷವಾಗಿ ಬರಗಾಲ ಪರಿಸ್ಥಿಯಲ್ಲಿ ಪೂರಕವಾಗಿ ಕಾಣಬರುತ್ತದೆ. ಬರಗಾಲ ಪರಿಸ್ಥಿತಿಯಲ್ಲಿ ಜಲಮೇವು ಘಟಕವು ರೈತರಿಗೆ ವರದಾನವಾಗಿದೆ.
ಜಲಮೇವು ಉತ್ಪಾದನೆ ಘಟಕದ ಅಳತೆ:
ಸುಮಾರು 15 ಅಡಿ ಉದ್ದ9 ಅಡಿ ಅಗಲದಷ್ಟು ಜಾಗದಲ್ಲಿ100ಕೆಜಿ ಜಲಮೇವು ಉತ್ಪಾದನಾ ಘಟಕವನ್ನು ಅಳವಡಿಸಬಹುದಾಗಿರತ್ತದೆ.