Friday, January 24, 2025

Free kolimari- ಮಹಿಳೆಯರಿಗೆ ಉಚಿತವಾಗಿ ನಾಟಿ ಕೋಳಿ ಮರಿ ವಿತರಣೆ! ಬೇಕಿದ್ದವರು ಅರ್ಜಿ ಸಲ್ಲಿಸಿ.

ನಮಸ್ಕಾರ ರೈತರೇ, ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು 2024-25ನೇ ಸಾಲಿನ ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ ಇದರ ವತಿಯಿಂದ 5 ವಾರದ ತಲಾ 20 ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಉಚಿತವಾಗಿ ವಿತರಣೆ ಮಾಡಲಿದೆ.

ನಮ್ಮ ದೇಶದಲ್ಲಿ ಕೃಷಿಯ ಜೊತೆಗೆ ಅದರ ಉಪಕಸುಬುಗಳಾದ ಪಶು/ಹಸು ಸಾಕಾಣಿಕೆ, ಹಂದಿ ಸಾಕಾಣಿಕೆ, ಆಡು/ಕುರಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಎಂದು ಹೇಳಲಾಗುತ್ತದೆ. ಆದ್ದರಿಂದ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತವಾಗಿ ನಾಟಿ ಕೋಳಿ ಮರಿಗಳ ವಿತರಣೆ ಮಾಡಲಾಗುತ್ತಿದೆ.

ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೋಳಿ ಮರಿಗಳನ್ನು ಎಲ್ಲಾ ವರ್ಗದ ಮಹಿಳೆಯರು ಪಡೆಯಬೇಕೆಂದು ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಸಾಮಾನ್ಯ ವರ್ಗದ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಸೌಲಭ್ಯವು ಕರ್ನಾಟಕ ರಾಜ್ಯದ  ಎಲ್ಲಾ ಜಿಲ್ಲೆಗಳಲ್ಲಿ ಚಾಲನೆಯಲ್ಲಿದ್ದು ಸದ್ಯ ದಕ್ಷಿಣ ಕನ್ನಡ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಚಾಲನೆ ದೊರೆತಿದ್ದು ಗ್ರಾಮೀಣ ಭಾಗದ ರೈತ ಮಹಿಳೆಯರಿಂದ 5 ವಾರದ ನಾಟಿ ಕೋಳಿ ಮರಿಗಳ ವಿತರಣೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಇನ್ನೂ ಉಳಿದ ಜಿಲ್ಲೆಯಲ್ಲಿ ಈ ಯೋಜನೆ ಇದೆಯೇ ಇಲ್ಲವೇ ಎಂದು ತಿಳಿಯಲು ನಿಮ್ಮ ಹತ್ತಿರದ ತಾಲೂಕು  ಪಶು ಆಸ್ಪತ್ರೆ ಅಥವಾ ಗ್ರಾಮದ ಪಶು ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಬಹುದು.   

ಆಯ್ಕೆಯ ವಿಧಾನ: ಗ್ರಾಮೀಣ ಭಾಗದ ಮಹಿಳೆಯಾಗಿದ್ದು ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ದವರು ಜಾತಿ ಪ್ರಮಾಣ ಪತ್ರ (ಆರ್ ಡಿ ನಂಬರ್) ಹೊಂದಿರಬೇಕು. ಅಂಗವಿಕಲರಾಗಿದ್ದಲ್ಲಿ ವಿಕಲ ಪ್ರಮಾಣ ಪತ್ರ ಹೊಂದಿರಬೇಕು. ಸ-ಸ್ವಹಾಯ ಗುಂಪು, ರೈತ ಉತ್ಪಾದಕರ ಗುಂಪು ಮತ್ತು ಮಹಿಳಾ ಸಹಕಾರ ಸಂಘದ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಈ ಯೋಜನೆಯು ಗ್ರಾಮೀಣ ಭಾಗದ ರೈತ ಮಹಿಳೆಯರನ್ನು ತಮ್ಮ ಕುಟುಂಬ ನಿರ್ವಹಣೆಗೆ ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡಲು ಉಚಿತವಾಗಿ 5 ವಾರದ ಕೋಳಿ ಮರಿಗಳ ವಿತರಣೆ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗೆ ಆಯಾ ಜಿಲ್ಲೆಗಳಲ್ಲಿರುವ ತಾಲೂಕು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳ ಕಛೇರಿ ಹಾಗೂ ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಬಹುದು ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

ಇತ್ತೀಚಿನ ಸುದ್ದಿಗಳು

Related Articles