Thursday, September 19, 2024

FARM POND- ತೋಟಗಾರಿಕೆ ಇಲಾಖೆಯಲ್ಲಿ ಶೀಟ್‌ ಬಳಸಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ಮಾಡಿಕೊಳ್ಳುವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯವು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ ಬದಲಾವಣೆಯಿಂದ ಗಂಭೀರ ಪ್ರಭಾವಕ್ಕೊಳಗಾಗುವ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ರಾಜ್ಯದಲ್ಲಿ ಸುಮಾರು ಶೇ.64 ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತ ಪ್ರದೇಶವಾಗಿರುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಬರದೆ ರೈತರಿಗೆ ಅನಾನೂಕುಲಗಳು ಜಾಸ್ತಿಯಾಗಿದ್ದು ಬೆಳೆಯಲ್ಲಿ ಸರಿಯಾಗಿ ಆದಾಯ ಬರದೆ ನಷ್ಟ ಉಂಟಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ ತುಂಬಾ ಆಗುತ್ತಿದ್ದು, ಕೃಷಿಕರಿಗೆ ಕೃಷಿ ಮಾಡಲು ನೀರಿನ ಕೊರತೆ ಆಗಿ ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಬೆಳೆಗೆ ಸರಿಯಾಗಿ ನೀರು ಸಿಗದೆ ರೈತರಿಗೆ ಕೃಷಿಯಲ್ಲಿ ನಷ್ಟ ಉಂಟಾಗುತ್ತಿದೆ. ಇದರಿಂದ ಯುವಕರು ಕೃಷಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರ ಅನುಕೂಲಕ್ಕೆ ಕೃಷಿ ಹೊಂಡ ಹಾಗೂ ಕೆರೆಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ.

ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ ಸಂಗ್ರಹಕ್ಕಾಗಿ ಮಳೆ ಕೊಯ್ಲು ಜನಪ್ರಿಯವಾಗುತ್ತಿರುವ ನಡುವೆಯೇ, ಪ್ಲಾಸ್ಟಿಕ್‌ ಶೀಟ್‌ ಗಳ ಕೆರೆಯನ್ನು ನಿರ್ಮಿಸಿ ಮಳೆ ನೀರನ್ನು ಶೇಖರಿಸುವ ಹೊಸ ಟ್ರೆಂಡ್‌ ರಾಜ್ಯದ ತುಂಬಾ ಆರಂಭವಾಗಿದೆ.

ಇದನ್ನೂ ಓದಿ: ಪಶು ಸಂಗೋಪನೆಯಲ್ಲಿ ಲಾಭ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ ಸಾಕು!

ರಾಜ್ಯದ ಕೆಲವು ಜಿಲ್ಲೆಯ ಹಲವು ಭಾಗಗಳಲ್ಲಿ ಕೋಟಿ ಗಟ್ಟಲೆ ಲೀಟರ್‌ ನೀರು ತುಂಬುವ ದೊಡ್ಡ ಕೆರೆಗಳನ್ನು ನಿರ್ಮಿಸಲಾಗುತ್ತಿದ್ದು, ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಬೇಸಗೆಯಲ್ಲಿ ತೋಟಗಳಿಗೆ ಬಿಡಲಾಗುತ್ತದೆ. ಸಾಮಾನ್ಯವಾಗಿ ಈ ಕೆರೆಗಳನ್ನು ಬೆಟ್ಟಗಳ ತುದಿಯಲ್ಲಿ ಮತ್ತು ನೀರಿನ ಇಳಿಜಾರು ಪ್ರದೇಶದಲ್ಲಿ ನಿರ್ಮಿಸುವುದರಿಂದ ತೋಟಗಳಿಗೆ ಸುಲಭವಾಗಿ ನೀರು ಕೊಡಬಹುದು.

ಏನಿದು ಪ್ಲಾಸ್ಟಿಕ್‌ ಶೀಟ್‌ ಕೆರೆ?

ಬೆಟ್ಟ ಅಥವಾ ಎತ್ತರದ ಭಾಗಗಳಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಎಚ್‌ಡಿಪಿಇ ಪ್ಲಾಸ್ಟಿಕ್‌ ಶೀಟಗಳನ್ನು ಜನರಿಂದ ಜೋಡಿಸಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಲಾಗುತ್ತದೆ. ಈ ಕೆರೆಗಳಲ್ಲಿ ಸಂಗ್ರಹವಾಗುವ ನೀರು ಇಂಗುವುದಿಲ್ಲ. ಬಿಸಿಲಿಗೆ ಆವಿಯಾಗುವ ಪ್ರಮಾಣ ಕೇವಲ ಶೇಕಡಾ ಐದರಷ್ಟು. ಹೀಗೆ ಸಂಗ್ರಹಿಸಿದ ನೀರನ್ನು ಹತ್ತಾರು ಎಕರೆ ತೋಟಕ್ಕೆ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೂ ಬಳಸುವಷ್ಟು ನೀರು ದೊರೆಯುತ್ತದೆ.‌

ತೋಟಗಾರಿಕೆ ಇಲಾಖೆಯ ಸಬ್ಸಿಡಿ ಹೀಗಿದೆ:

1)ಕನಿಷ್ಠ 300 ಘನ ಮೀಟರ ಘಟಕಕ್ಕೆ 18750ರೂ, ಗರಿಷ್ಠ 1200ಘನ ಮೀ.ಗೆ 75 ಸಾವಿರ ರೂ.ಗಳ ಸಬ್ಸಿಡಿ ಸಿಗಲಿದೆ.

2)ದೊಡ್ಡ ಘಟಕಗಳಿಗೆ 4500 ಘನ ಮೀ.(39ಮೀ.ಉದ್ದ, 39ಮೀ.ಅಗಲ,3ಮೀ.ಆಳ)ಗೆ 2.18ಲಕ್ಷ ರೂ.

3)6500ಘ.ಮೀ(47ಮೀ.ಉದ್ದ,47ಮೀ.ಅಗಲ,3ಮೀ.ಆಳ)ಗೆ 4ಲಕ್ಷ ರೂ.

4)9000ಘ.ಮೀ(55ಮೀ.ಉದ್ದ,55ಮೀ.ಅಗಲ,3ಮೀ.ಆಳ)ಗೆ 5ಲಕ್ಷ ರೂ.

ಇದನ್ನೂ ಓದಿ: ಪ್ರಾಕೃತಿಕ ವಿಕೋಪದ ಮಳೆ, ಗಾಳಿಯಿಂದ ಮನೆ ಮತ್ತು ಕೃಷಿಗೆ ಹಾನಿಯಾದರೆ ಅದರ ಪರಿಹಾರಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು ನಿಮಗೆ ಗೊತ್ತೆ?

 ಶೀಟ್‌ ಕೆರೆಗಳ ನಿರ್ಮಾಣಕ್ಕೆ ಎಲ್ಲಿ ಅರ್ಜಿಸಲ್ಲಿಸಬೇಕು:

ಆಸಕ್ತ ರೈತರು ನಿಮ್ಮ ತಾಲೂಕು ಕೇಂದ್ರಗಳಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

FARM POND(ಕೃಷಿ ಕೆರೆ) ಹೊಂಡಕ್ಕೆ ಸಲ್ಲಿಸಲು ಅಗತ್ಯ ದಾಖಲೆಗಳು:

1)ಅರ್ಜಿ ನಮೂನೆ

2)ಅರ್ಜಿದಾರರ ಆಧಾರ್‌ ಕಾರ್ಡ ಜೆರಾಕ್ಸ್‌

3) ಅರ್ಜಿದಾರರ ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌

4)ಪಹಣಿ/RTC ಪ್ರತಿ

5)ಜಾತಿ ಪ್ರಮಾಣ ಪತ್ರ(SC/ST) ಅವರು ಮಾತ್ರ

6) ಅರ್ಜಿದಾರರ ಫೋಟೋ

7)ರೇಷನ್‌ ಕಾರ್ಡ ಜೆರಾಕ್ಸ್

ಇತ್ತೀಚಿನ ಸುದ್ದಿಗಳು

Related Articles