ಈಗಾಗಲೇ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ರಾಜ್ಯ ಸರಕಾರ 2ನೇ ಕಂತಿನಡಿ ರೈತರ ಖಾತೆಗೆ ಜಮೆ ಮಾಡಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ರೈತರ ಖಾತೆಗೆ ಇನ್ನೂ ಮೂರು ದಿನಗಳ ಒಳಗೆ (BARA PARIHARA) ಬರ ಪರಿಹಾರದ ಮೊತ್ತವು ಜಮೆ ಆಗಲಿದೆ ಎಂದು ಕಂದಾಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಕಳೆದ 2023ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರಾಜ್ಯ ಮಳೆ ಕೊರತೆಯನ್ನು ಅನುಭವಿಸಿತ್ತು. ಹಿಂಗಾರು ಮಳೆಯು ಬಾರದೇ ಇರುವುದರಿಂದ ರೈತರಿಗೆ ತುಂಬಾ ನಷ್ಟವಾಗಿತ್ತು. ಇದನ್ನು ಮನಗಂಡು ರಾಜ್ಯ ಸರಕಾರ ಒಟ್ಟು 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆಮಾಡಿತ್ತು.
ಆ ಬರ ಪೀಡಿತ ತಾಲೂಕುಗಳಿಗೆ ಕೇಂದ್ರದಿಂದ ಬಿಡುಗಡೆಯಾದ 3498 ಕೋಟಿ ರೂಪಾಯಿ ಬರ ಪರಿಹಾರದ ಮೊತ್ತವನ್ನು ರಾಜ್ಯ ಸರಕಾರ 2ನೇ ಕಂತಿನಡಿ ರೈತರಿಗೆ ಇನ್ನೂ ಮೂರು ದಿನಗಳ ಒಳಗೆ ಎಲ್ಲಾ ಬರ ಪೀಡಿತ ಪ್ರದೇಶದ ರೈತರ ಖಾತೆಗಳಿಗೆ ಜಮೆ ಮಾಡಲಿದ್ದಾರೆ. ಈ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೋ ಇಲ್ಲವೋ ಎಂದು ಕೆಳಗೆ ನೀಡಿದ ಮಾಹಿತಿ ಪ್ರಕಾರ ತಿಳಿದುಕೊಳ್ಳಬಹುದು.
ಕೇಂದ್ರದಿಂದ ಪ್ರಸ್ತುತ ಬಿಡುಗಡೆಯಾಗಿರುವ (Drought fund) ಪರಿಹಾರದ ಹಣ ಯಾವೆಲ್ಲ ರೈತರಿಗೆ ಸಿಗಲಿದೆ ಎಂದು ನಿಮ್ಮ ಮೊಬೈಲ್ ನಲ್ಲೇ ರೈತರು ತಿಳಿಯಬಹುದು.
ಇದನ್ನೂ ಓದಿ:Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!
Step-1: ಮೊದಲಿಗೆ ಈ parihara eligible list ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ನಂತರದಲ್ಲಿ “Select year/ವರ್ಷ ಆಯ್ಕೆ ಮಾಡಿ”, Select season/ಹಂಗಾಮು ಆಯ್ಕೆ ಮಾಡಿ, Calamity Type/ವಿಪತ್ತಿನ ವಿಧ ಮತ್ತು ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Hobli/ಹೋಬಳಿ, ಮತ್ತು ನಿಮ್ಮ Village/ಗ್ರಾಮ/ಹಳ್ಳಿಯನ್ನು ಸೆಲೆಕ್ಟ್ ಮಾಡಿ “Get Report” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: “Get Report” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ಇಲ್ಲಿ “ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details” ಎಂದು ಗೋಚರಿಸುತ್ತದೆ ಇದರ ಕೆಳಗೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಮೊದಲ ಕಂತಿನ ರೂ 2,000 ಬರ ಪರಿಹಾರ ನೇರ ನಗದು ವರ್ಗಾವಣೆ(DBT) ಅಗಿದೆ ಎನ್ನುವ ರೈತರ ಪಟ್ಟಿಯನ್ನು ನೋಡಬಹುದು ಈ ಪಟ್ಟಿಯಲ್ಲಿರುವವರಿಗೆ ಎರಡನೇ ಕಂತಿನ ಬರ ಪರಿಹಾರದ ಹಣ ಜಮಾ ಅಗಲಿದೆ. ಒಂದೊಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದಲ್ಲಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ಈ ಕುರಿತು ವಿಚಾರಣೆ ಮಾಡಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ:Agriculture loan-ಕೃಷಿ ಸಾಲ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯ!
NDRF ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್‌ಗೆ(2.5 acre)ಬೆಳೆ ನಷ್ಟಕ್ಕೆ ಎಷ್ಟು ಪರಿಹಾರ ನಿಗಧಿಪಡಿಸಲಾಗಿದೆ?
ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ನಿಗಧಿಪಡಿಸಿರುವ ಬರ ಪರಿಹಾರ ಹಣ ವಿವರ ಹೀಗಿದೆ:
(1) ಮಳೆಯಾಶ್ರಿತ ಬೆಳೆಗಳಿಗೆ- 8,500 ರೂ
(2) ನೀರಾವರಿ ಬೆಳೆಗಳಿಗೆ- 17,000 ರೂ
(3) ಬಹುವಾರ್ಷಿಕ ಬೆಳೆಗಳಿಗೆ- 22,500 ರೂ