Saturday, October 5, 2024

Disaster damage-ಮಳೆ, ಗಾಳಿಯಿಂದ ಮನೆ ಮತ್ತು ಕೃಷಿಗೆ ಹಾನಿಯಾದರೆ ಅದರ ಪರಿಹಾರಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ.

ಭಾರತದಲ್ಲಿ ಚಂಡಮಾರುತದ ಮಳೆ ಕರ್ನಾಟಕ ರಾಜ್ಯದಲ್ಲೂ ಆರಂಭವಾಗಿದ್ದು, ತುಂಬಾ ರಭಸವಾಗಿ ಬರುತ್ತಿದೆ. ಈ ರಭಸವಾಸದ ಮಳೆಯಿಂದ ಕರ್ನಾಟಕ ರಾಜ್ಯದ ಜನರ ಮನೆ ಮತ್ತು ಕೃಷಿ ಬೆಳೆಗಳಿಗೆ ಹಾನಿಯಾದರೆ ಜನರು ಅದರ ಪರಿಹಾರ ಕೋರಿ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಗ್ರಾಮ ಪಂಚಾಯತ ಮಟ್ಟದಲ್ಲಿ (SDRF)ವಿಪತ್ತು ನಿರ್ವಹಣಾ ಪಡೆಯನ್ನುರಚನೆ ಮಾಡಲಾಗಿದೆ. ಈ ವಿಪತ್ತು ನಿರ್ವಹಣಾ ಪಡೆಯ(Panchayat president) ಅಧ್ಯಕ್ಷರು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಹಾಗೂ ಸಹ ಅಧ್ಯಕ್ಷರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಯವರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿಗಳಾಗಿ ಗ್ರಾಮ ಲೆಕ್ಕಾಧಿಕಾರಿ/(VAO)ಗ್ರಾಮ ಆಡಳಿತ ಅಧಿಕಾರಿ ಇವರನ್ನು ನೇಮಿಸಲಾಗಿದೆ.ಇನ್ನೂ ಸದಸ್ಯರುಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳು, ಕೃಷಿ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

ಕರ್ನಾಟಕ ರಾಜ್ಯದಲ್ಲಿ ಚಂಡಮಾರುತದಿಂದ ಭಾರಿ ಮಳೆ(rain) ಆರಂಭವಾಗಿದ್ದು, ಇದರಿಂದ ಮನೆಗಳು ಮತ್ತು ಕೃಷಿ ಬೆಳೆಗಳಿಗೆ ಹಾನಿಯಾದರೆ, ಇದರ ಪರಿಹಾರಕ್ಕಾಗಿ ಸಾರ್ವಜನಿಕರು ಮತ್ತು ರೈತರು ನಿಮ್ಮ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯ ಗಮನಕ್ಕೆ ತರಬೇಕು. ಹಾಗೂ ಮನೆಗಳಿಗೆ ಹಾನಿಯಾಗಿದ್ದರೆ ಅದರ ಪರಿಹಾರಕ್ಕೆ ಗ್ರಾಮ ಲೆಕ್ಕಾಧಿಕಾರಿ/ ಗ್ರಾಮ ಆಡಳಿತ ಅಧಿಕಾರಿ(VAO) ಅವರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು.ಹಾಗೂ ಮಳೆಯಿಂದ ರೈತರ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದರೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮತ್ತು ಸಂಬಂಧ ಪಟ್ಟ ಕೃಷಿ ಇಲಾಖೆ(agriculture deprt) ಮತ್ತು ತೋಟಗಾರಿಕೆ ಇಲಾಖೆಯ(horticulture) ಅಧಿಕಾರಿಗಳ ಗಮನಕ್ಕೆ ತರುವುದು ಹಾಗೂ ಪರಿಹಾರ ಕೋರಿ ಅರ್ಜಿ ಸಲ್ಲಿಸುವುದು.

ಮಳೆಯಿಂದ(Rain) ಮನೆಗಳಿಗೆ ಹಾನಿಯಾಗಿದ್ದರೆ ಸರಕಾರದ ಪರಿಹಾರದಲ್ಲಿ ಇರುವ ಮಾರ್ಗಸೂಚಿಗಳಂತೆ ಅರ್ಜಿದಾರರ ಖಾತೆಗೆ ನೇರ ಹಣ ವರ್ಗಾವಣೆ ಅಥವಾ ಚೆಕ್ ನೀಡುವ ಕಾರ್ಯವನ್ನು ತಹಶೀಲ್ದಾರ ಕಛೇರಿಯಿಂದ ಕೈಗೊಳ್ಳುವರು.

ಇದನ್ನೂ ಓದಿ: ಇದನ್ನೂ ಓದಿ: ಜೂನ್‌ 18 ರಂದು ಬಿಡುಗಡೆಯಾದ 17ನೇ ಕಂತಿನ  ಪಿ ಎಂ ಕಿಸಾನ್‌ ಹಣ ನಿಮಗೆ ಬಂತೆ! ಚೆಕ್‌ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ.

ಅದೇ ರೀತಿ ಮಳೆಯಿಂದ ರೈತರ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದರೆ ಅದರ ಅರ್ಜಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿ ನಂತರ ಅಲ್ಲಿಂದ ಅರ್ಜಿಯು ಸಂಬಂಧಪಟ್ಟ ಇಲಾಖೆಗಳಿಗೆ ಬರುತ್ತದೆ. ನಂತರ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಯ ಜೊತೆಯಲ್ಲಿ ಬೆಳೆ ಹಾನಿಯಾದ ರೈತರ ಜಮೀನಿಗೆ ಬಂದು ಸಮೀಕ್ಷೆ ಮಾಡಿ ಹಾನಿ ಪ್ರಮಾಣವನ್ನು ಮಹಜರು ಮಾಡಿ, ಕಂದಾಯ ಇಲಾಖೆಗೆ(Revenue dept) ಪರಿಹಾರ ನೀಡಬಹುದಾದ ಮೊತ್ತವನ್ನು ತಿಳಿಸಿರುತ್ತಾರೆ. ನಂತರ ಕಂದಾಯ ಇಲಾಖೆಯ ತಹಶೀಲ್ದಾರ ರವರ ಪರಿಹಾರ ನಿಧಿಯಿಂದ ನೇರ ರೈತರ ಖಾತೆಗೆ ಅಥವಾ ಚೆಕ್ ನೀಡುವ ಮೂಲಕ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ವಿತರಣೆ ಮಾಡುತ್ತಾರೆ.

ಪರಿಹಾರ ಕೋರಿ ಸಲ್ಲಿಸಬೇಕಾದ ದಾಖಲೆಗಳು:

1)ಕೈ ಬರಹ ಅಥವಾ ಅರ್ಜಿ ಪಾರ್ಮ ಸಲ್ಲಿಕೆ

2) ಆಧಾರ ಕಾರ್ಡ ಜೆರಾಕ್ಸ

3)ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ

4)ಹಾನಿಯಾದ ಮನೆ ಅಥವಾ ಕೃಷಿ ಬೆಳೆಯ ಛಾಯಾಚಿತ್ರ ಪ್ರತಿ

5)ಪಾಸ್ ಫೋರ್ಟ ಸೈಜ ಪೋಟೋ

6)RTC ಪ್ರತಿ

ಇದರ ಇನ್ನೂ ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯನ್ನು ಭೇಟಿ ಮಾಡಿ.

ಇತ್ತೀಚಿನ ಸುದ್ದಿಗಳು

Related Articles