Thursday, September 19, 2024

ಈ ವರ್ಷ ಮಳೆ ಅಭಾವಕ್ಕೆ ಕಾರಣ ತಿಳಿಸಿದ ಹವಾಮಾನ ಇಲಾಖೆ!!

ರಾಜ್ಯದ ಹಲವೆಡೆ ಮುಂಗಾರು ವಿಳಂಬ ಆತಂಕಕ್ಕೆ ಕಾರಣವಾಗಿದೆ, ಬೆಳೆಗಳ ನಿರೀಕ್ಷಿತ ಇಳುವರಿ ಕಡಿಮೆಯಾಗುವುದು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ರೈತರ ಅಸಮರ್ಥತೆಯು ಕೃಷಿ ಸಂಕಷ್ಟಕ್ಕೆ ಕಾರಣವಾಗಬಹುದು. ಜೂನ್ ಆರಂಭಕ್ಕೆ ಸಾಮಾನ್ಯವಾಗಿ ಮುಂಗಾರು ನಿರೀಕ್ಷಿಸಿ ಅನೇಕ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಆದರೆ ಮುಂಗಾರು ವಿಳಂಬವಾಗಿರುವುದರಿಂದ ಹಲವು ಜಿಲ್ಲೆಗಳಲ್ಲಿ ರೈತರಿಗೆ ಸಮಸ್ಯೆಯಾಗಿದೆ.

ಮುಂಗಾರು ಆರಂಭದ ಸಮಯದಲ್ಲಿ ಮಳೆಯ ಅಭಾವವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬೆಳೆಗೆ ಹಾನಿಯನ್ನುಂಟುಮಾಡಿದೆ. ಭತ್ತ, ಸೋಯಾಬೀನ್, ತರಕಾರಿಗಳು, ಜೋಳ, ಹಸಿಬೇಳೆ, ಕಾಳು, ಕಾಫಿ, ಮೆಕ್ಕೆಜೋಳ ಸೇರಿದಂತೆ ಹಲವಾರು ಪ್ರಮುಖ ಬೆಳೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹಲವಾರು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು 60 ಪ್ರತಿಶತದಷ್ಟು ಬಿತ್ತನೆಯಾಗಿದೆ. ಈ ಬಾರಿಯ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿನ ಪ್ರಮುಖ ಬೆಳೆಗಳಾದ ಭತ್ತ, ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಇದೆ.

ಸರ್ಕಾರಿ ಇತರೆ ಯೋಜನೆಗಳು :

ಇದನ್ನೂ ಓದಿ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ :
ಇದನ್ನೂ ಓದಿ: Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:
ಇದನ್ನೂ ಓದಿ: ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ
ಇದನ್ನೂ ಓದಿ: ಬರ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ನೀಡಿದ ಮಾಹಿತಿಯ ಪ್ರಕಾರ, ಜುಲೈ 22 ರ ಹೊತ್ತಿಗೆ, ಕರ್ನಾಟಕದ 16 ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. 13 ಜಿಲ್ಲೆಗಳು ಸಾಮಾನ್ಯ ಮಳೆಯನ್ನು ಕಂಡಿವೆ ಮತ್ತು ಎರಡು ಜಿಲ್ಲೆಗಳಲ್ಲಿ ಜೂನ್ 1 ರಿಂದ ಜುಲೈ 22 ರವರೆಗೆ ಹೆಚ್ಚಿನ ಮಳೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಮಳೆ ಪ್ರಮಾಣ ಬಹಳ ಕಡಿಮೆಯಾಗಿದೆ.


ದೇಶದಲ್ಲಿ ಈ ಬಾರಿ ವಾಡಿಕೆಯ ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ನಿರೀಕ್ಷೆ ಹುಸಿಯಾದಂತೆ ಕಂಡು ಬರುತ್ತಿದೆ. ಜೂನ್ ತಿಂಗಳ ಮಳೆ ಅಭಾವವು ಶೇ 40ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಅನೇಕ ಭಾಗಗಳಲ್ಲಿ ಮುಂಗಾರು ಆರಂಭದ ಮಳೆ ತೃಪ್ತಿದಾಯಕವಾಗಿಲ್ಲದಿರುವುದು ಬಿತ್ತನೆ ವಿಳಂಬಕ್ಕೂ ಕಾರಣವಾಗಲಿದೆ. 2009ರಲ್ಲಿ ದೇಶ ಕಂಡ ತೀವ್ರ ಸ್ವರೂಪದ ಬರಗಾಲದ ಸಂದರ್ಭದಲ್ಲಿಯೂ ಜೂನ್ ತಿಂಗಳ ಮಳೆ ಈಗಿನ ಮಟ್ಟದಲ್ಲಿಯೇ ಇತ್ತು.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮಳೆಯಾಗಿ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಬಹಳ ಉತ್ಸುಕರಾಗಿದ್ದರೂ. ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಬಿತ್ತನೆ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಬಿತ್ತನೆ ಆದ ಪ್ರದೇಶವು ಕೂಡಾ ಮಳೆ ಮತ್ತು ಇತರೆ ಕಾರಣಗಳಿಂದ ಬೆಳೆಯನ್ನು ಅಳಿಸಿರುವುದು ( ತೆಗೆದಿರುವುದು) ನಾವು ನೋಡಬಹುದು.

ಆಗಿದ್ದರೆ ಇದಕ್ಕೆ ಮುಖ್ಯ ಕಾರಣ ಏನು? ಅಂತ ಈ ಲೇಖನದಲ್ಲಿ ತಿಳಿಸಲಾಗಿದೆ.`ಎಲ್ ನೈನೊ’ ಪ್ರಭಾವದಿಂದಾಗಿ ದುರ್ಬಲ­ಗೊಳ್ಳ­ಲಿರುವ ಮುಂಗಾರು, ಮುಂದೆ ಯಾವ ಪರಿಸ್ಥಿತಿಗೆ ಕಾರಣವಾಗಬಹುದು ಅಂತ ಬಹಳ ಚಿಂತೆಗೆ ಒಳಪಡಿಸಿದೆ.

ಮಳೆ ಕಡಿಮೆ ಕಾರಣ ಈ ರೀತಿ ಇದೆ.

ಎಲ್ ನಿನೋ ಆರಂಭ: ಸಾಗರ ತಾಪಮಾನ ಏರಿಕೆ, ಭಾರತದ ಮೇಲೂ ಪರಿಣಾಮ:

ಫೆಸಿಫಿಕ್ ಸಾಗರದಲ್ಲಿ ಸಮಭಾಜಕ ವೃತ್ತದ ಸಮುದ್ರ ಮೇಲ್ಮ ತಾಪಮಾನ (SSTS) ಗಳು ಏರಿಕೆಯಾಗಿದ್ದು, ಎಲ್ ನಿನೋ ಹವಾಮಾನದಂತ ವಿದ್ಯಮಾನಗಳ ಆಗಮನವಾಗುವುದನ್ನು ಸೂಚಿಸುತ್ತವೆ, ಇದರಿಂದ ಏಷ್ಯಾದ ದೇಶಗಳಿಗೆ ವಿಶೇಷವಾಗಿ ಭಾರತಕ್ಕೆ ಆತಂಕ ಎದುರಾಗಿದೆ.

ಅಮೇರಿಕಾದ ರಾಷ್ಟ್ರೀಯ ಸಮುದ್ರ ಹಾಗೂ ವಾತಾವರಣ ಆಡಳಿತದ ಹವಾಮಾನ ಮುನ್ಸೂಚನಾ ಕೇಂದ್ರ (CPC) ದ ವರದಿಯಂತೆ ಜುಲೈ ನಂತರದಲ್ಲಿ ಜೂನ್- ಮಧ್ಯಭಾಗದಿಂದ ಜುಲೈ-ಮಧ್ಯಭಾಗದವರೆಗೆ ಇಳಿಕೆಯಾಗಿದ್ದ ಭೂಗರ್ಭ ತಾಪಮಾನದ ವೈಪರೀತ್ಯಗಳು ಹೆಚ್ಚಾಗುತ್ತಿರುವುದಾಗಿ ವರದಿ ಮಾಡಿವೆ ಎಲ್ ನಿನೋ 2023 ರ ಡಿಸೆಂಬರ್ ನಿಂದ 2024 ರ ಫೆಬ್ರವರಿಯವರೆಗೆ ಉತ್ತುಂಗ ಮಟ್ಟದಲ್ಲಿರುವ ನಿರೀಕ್ಷೆಗಳಿದ್ದು ಅದು 95% ರಷ್ಟು ಸಂಭವಿಸುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿರುತ್ತದೆ.

ಉಷ್ಣವಲಯದ ಫೆಸಿಫಿಕ್ ವಾತಾವರಣದ ವೈಪರೀತ್ಯಗಳು ಎಲ್ ನಿನೋದೊಂದಿಗೆ ಸೇರ್ಪಡೆಯಾಗಲಿವೆ, ಎಂದು ಹವಾಮಾನ ಮುನ್ಸೂಚನಾ ಕೇಂದ್ರ (CPC) ವು ಖಚಿತಪಡಿಸಿದೆ.

ಭಾರತದ ಮುಂಗಾರು ಮಳೆ ಹಾಗೂ ಕೃಷಿಯ ಮೇಲೆ ಪರಿಣಾಮಗಳು:

ಭಾರತದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ವೈಪರೀತ್ಯಗಳಿಂದಾಗಿ ಕಡಿಮೆಯಾಗುವ ಸಾಧ್ಯತೆಗಳಿವೆ. ಆದಾಗ್ಯೂ, ತಾಪಮಾನ ಏರಿಕೆಯಿಂದ ಮುಂಗಾರು ನಿಲುಗಡೆಯಾಗಲಿದ್ದು, ಪ್ರಮುಖ ಮುಂಗಾರು ಬೆಳೆಗಳಿಗೆ ಇದರಿಂದ ಪರಿಣಾಮಗಳುಂಟಾಗಲಿವೆ. ಭಾರತದ ಹೆಚ್ಚಿನ ಭಾಗಗಳಲ್ಲಿ ಮಳೆ ಕೊರತೆಯಾಗಿದೆ ಅಥವಾ ತಮಿಳುನಾಡು, ಜಮ್ಮು ಮತ್ತು ಕಾಶ್ಮೀರಗಳನ್ನು ಹೊರತುಪಡಿಸಿ ಅಗಸ್ಟ್ ನಲ್ಲಿ ವ್ಯಾಪಕವಾಗಿ ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ನಲ್ಲಿ ಮಳೆಯು ಪುನರಾರಂಭವಾಗುವ ನಿರೀಕ್ಷೆಗಳಿವೆ, ಆದರೆ ಅನಿಶ್ಚಿತ ಮಳೆಗಳಿಂದಾಗಿ ಕೃಷಿ ಸಾಮಗ್ರಿಗಳ ದರಗಳ ಮೇಲೆ ಪರಿಣಾಮ ಉಂಟಾಗಲಿದೆ.

ಇತ್ತೀಚಿನ ಸುದ್ದಿಗಳು

Related Articles