Wednesday, March 12, 2025

DBT Status Check- ಎಲ್ಲಾ ಯೋಜನೆಯ ಹಣದ ಜಮಾ ವಿವರ ತಿಳಿಯುವುದು ಇನ್ನು ಭಾರೀ ಸುಲಭ!

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿದ ಯೋಜನೆ ಅಡಿಯಲ್ಲಿ ನಾಕರಿಕರಿಗೆ ಜಮಾ ಮಾಡುವ(DBT Status Check)ಹಣಾದ ವಿವರವನ್ನು ಪಡಿಯುವುದು ಇನ್ನೂ ಭಾರೀ ಸುಲಭ ಏಕೆಂದರೆ ಗೂಗಲ್ ಸ್ಟೋರ್ ನಲ್ಲಿ ಲಭ್ಯವಿರುವ ಈ ಒಂದು ಮೊಬೈಲ್ ಆಪ್ ಅನ್ನು ಸಾರ್ವಕನಿಕರು ಡೌನ್ಲೊಡ್ ಮಾಡಿಕೊಂಡು ಹಣ ಜಮಾವಿವರ ಪಡಿಯಬಹುದು.

ಸಾರ್ವಜನಿಕರು ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿ ಪಡಿಸಿರುವ ಡಿ ಬಿ ಟಿ ಕರ್ನಾಟಕ ಮೊಬೈಲ್(DBT application) ಅಪ್ಲಿಕೇಶನ್ ಅಲ್ಲಿ ವಿವಿದ ಯೋಜನೆಯ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ವರ್ಗಾವಣೆ ಮಾಡುವ ಆರ್ಥಿಕ ನೆರವಿನ ಜಮಾ ವಿವರವನ್ನು ಪಡೆಯಬಹುದು.

ಇದನ್ನೂ ಓದಿ: Pouthi Khata Abhiyana-ರಾಜ್ಯ ಸರಕಾರದಿಂದ ಪೌತಿ ಖಾತೆ ಅಭಿಯಾನ!

ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೊಡ್(DBT Statua app) ಮಾಡಿಕೊಳ್ಳುವ ವಿಧಾನ ಮತ್ತು ಬಳಕೆ ವಿಧಾನ ಹೇಗೆ? ಎನ್ನುವ ಮಾಹಿತಿಯನ್ನು ಹಾಗೂ ಈ ಅಪ್ಲಿಕೇಶನ್ ಅಲ್ಲಿ ಯಾವೆಲ್ಲ ಯೋಜನೆಯ ಹಣ ಜಮಾ ವಿವರವನ್ನು ಪಡೆಯಬಹುದು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

DBT Status Check-ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಯಾವೆಲ್ಲ ಯೋಜನೆಯ ಹಣ ಜಮಾ ವಿವರವನ್ನು ಪಡೆಯಬಹುದು?

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿದ ಯೋಜನೆಯಡಿ ಪ್ರಯೋಜನವನ್ನು ಪಡಿಯಲು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೊಡ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ಯೋಜನೆಗಳ ಹಣ ಜಮಾ ವಿವರವನ್ನು ಪಡೆಯಬಹುದು.

ಇದನ್ನೂ ಓದಿ: Agriculture machine subsidy-ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.

dbt status check
  • ಗೃಹಲಕ್ಷ್ಮಿ/Gruhalakshmi
  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಕರ್ನಾಟಕ/Pradhan Mantri Kisan Sammana Nidhi Karnataka
  • ರಾಷ್ಟೀಯ ಆಹಾರ ಭದ್ರತಾ ಅಭಿಯಾನ ಯೋಜನೆ/National Food Security Campaign Scheme
  • ರೈತ ಶಕ್ತಿ/Raita Shakti
  • ಸಂಧ್ಯಾ ಸುರಕ್ಷಾ ಯೋಜನೆ/Sandhya Suraksha Yojana
  • ವೃದ್ಯಾಪ್ಯ ಪಿಂಚಣಿ/Old age pension
  • ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ/Crop loss input subsidy
  • ಡಿಸೆಂಟ್ರೇಲ್ಜ್ಡ್ ಪ್ರೊಕ್ಯೂರಿಮೆಂಟ್ ಏನ್ ಎಫ್ ಎಸ್ ಎ ರಾಗಿ/MSP Scheme
  • ಅನ್ನಭಾಗ್ಯ/Annabhagya

ಇದನ್ನೂ ಓದಿ: ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಮಾನದಂಡಗಳು!

Online DBT Status Check- ನಿಮ್ಮ ಮೊಬೈಲ್ ಸಹಾಯದಿಂದ ಎಲ್ಲಾ ಯೋಜನೆಯ ಹಣ ಎಷ್ಟು ಜಮಾ ಆಗಿದೆ ಎಂದು ತಿಳಿಯೋಣ:

ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ನೇರ ಹಣ ವರ್ಗಾವಣೆ ಮೂಲಕ ಅನ್ನ ಭಾಗ್ಯ ಯೋಜನೆಯ ಹಣದ ಜಮಾ ವಿವರವನ್ನು, ಸಂದ್ಯಸುರಕ್ಷಾ, ಗೃಹಲಕ್ಷ್ಮಿ, ಸೇರಿದಂತೆ ಇತರೆ ಯೋಜನೆಗಳ ಹಣ ಜಮಾ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

Step-೧: ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT karnataka mobile application ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-೨: ತದನಂತರ ನಿಮ್ಮ Aadhar Card number ಅನ್ನು ಹಾಕಿ, ನಂತರ OTP ಅನ್ನು ಪಡೆದು 4 ಅಂಕಿಯ ಒಟಿಪಿಯನ್ನು ನಮೂದಿಸಬೇಕು.

ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣ ಶೇ.80% ಸಹಾಯಧನ ಕೃಷಿ ಭಾಗ್ಯ ಯೋಜನೆ!

Step-೩: ನಂತರ ನಿಮ್ಮ ಹೆಸರು, ವಿಳಾಸ, ಮತ್ತು ಇತರೆ ವೈಯಕ್ತಿಕ ಮಾಹಿತಿಯನ್ನು ಕೇಳುತ್ತದೆ. ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ ಮಾಡಿದ ನಂತರ ಅದೇ ಪೇಜ್ ನ ಕೊನೆಯಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹಾಕಿದ ನಂತರ ರಿಜಿಸ್ಟರ್ ಮಾಡಿಕೊಳ್ಳಲು ID ಮತ್ತು Password ಅನ್ನು ಸಿದ್ದ ಮಾಡಿಕೊಂಡು ಲಾಗಿನ್ ಆಗಬೇಕು.

Step-೪ : ಲಾಗಿನ್ ಆದ ನಂತರ ಎಡ ಬದಿಯಲ್ಲಿ ಕಾಣುವ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಅನ್ನಭಾಗ್ಯ ಯೋಜನೆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಯಾವ ತಿಂಗಳಿನಲ್ಲಿ ಎಷ್ಟು ಹಣ ಜಮಾ ಆಗಿದೆ? ಎಂದು ತೋರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles