ನಮಸ್ಕಾರ ರೈತರೇ, ನಿಮ್ಮ ನಿಮ್ಮ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಯಾವಾಗ ಮಾಡಿಸಬೇಕು ಮತ್ತು ಮಣ್ಣಿನ ಪರೀಕ್ಷೆಯನ್ನು ಎಲ್ಲಿ ಮಾಡಿಸಬೇಕು ಅಥವಾ ಯಾರು ಮಾಡುತ್ತಾರೆ ಹಾಗೂ ಮಣ್ಣಿನ ಪರೀಕ್ಷೆ(soil test) ಮಾಡಿಸಿದರೆ ಅದರಿಂದ ರೈತರಿಗೆ ಆಗುವ ಲಾಭಗಳೇನು ಎಂಬ ಇತ್ಯಾದಿ ಮಾಹಿತಿನ್ನು ಈ ದಿನ ತಿಳಿದುಕೊಳ್ಳುವ.
ಮನುಷ್ಯನ ಆರೋಗ್ಯ ಹೇಗೆ ಮುಖ್ಯ ಹಾಗೆ ಬೆಳೆಗಳಿಗೆ ಮಣ್ಣಿನ ಆರೋಗ್ಯ ಮುಖ್ಯವಾಗಿದೆ. ಅದರಂತೆ ಮನುಷ್ಯನ ಆರೋಗ್ಯ ಪರೀಕ್ಷೆ ಮಾಡಿಸಿದ ಹಾಗೆ ಕೃಷಿ ಜಮೀನಿನ ಮಣ್ಣು ಪರೀಕ್ಷೆ(soil test) ಮಾಡಿಸಬೇಕು ಇದರಿಂದ ಆ ಮಣ್ಣು ಕೃಷಿ ಬೆಳೆಯಲು ಯೋಗ್ಯವಾಗಿದೆಯೇ ಇಲ್ಲವೇ ಎಂದು ತಿಳಿಯುತ್ತದೆ.
Why do soil test-ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು?
1)ಮಣ್ಣಿನಲ್ಲಿರುವ ರಸಸಾರ(PH) ತಿಳಿಯಲು.
2)ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ತಿಳಿಯಲು.
3)ಮಣ್ಣು ಕೃಷಿ ಮಾಡಲು ಯೋಗ್ಯ ಹೌದಾ ಅಲ್ವಾ ತಿಳಿಯಲು.
4)ಮಣ್ಣಿನಲ್ಲಿರುವ ಸಾವಯವ ಅಂಶ ತಿಳಿಯಲು.
5)ಮಣ್ಣಿನ ಗುಣಧರ್ಮ ತಿಳಿಯಲು.
ಇದನ್ನೂ ಓದಿ:ನೌಕರರ ಹಾಗೆ ಪ್ರತಿ ತಿಂಗಳು ಆದಾಯ ಪಡೆಯಬೇಕೆ ಈ ಬೆಳೆ ಬೆಳೆಯಿರಿ! ಇಲ್ಲಿದೆ ಅದರ ಮಾಹಿತಿ.
How to collect soil-ಮಣ್ಣು ಪರೀಕ್ಷೆ ಮಾಡಲು ಮಣ್ಣು ಸಂಗ್ರಹಣೆ ವಿಧಾನ:
ಉದಾಹರಣೆಗೆ ನಿಮ್ಮಲ್ಲಿ 1 ಎಕರೆ ಕೃಷಿ ಜಮೀನು ಇದ್ದರೆ ನೀವು 4 ರಿಂದ 5 ಕಡೆ Z(ಜೆಡ್) ಮಾದರಿಯಲ್ಲಿ ಅಲ್ಲಲ್ಲಿ 500 ಗ್ರಾಂ ನಷ್ಟು ಮಣ್ಣನ್ನು ಸಂಗ್ರಹಣೆ ಮಾಡಬೇಕು. ಕೃಷಿ ಮತ್ತು ತರಕಾರಿ ಬೆಳೆಗೆ 5 ಇಂಚು ಆಳದವರೆಗಿನ (V) ಆಕಾರದಲ್ಲಿ ಗುಂಡಿ ತೆಗೆದು ಮಣ್ಣನ್ನು ಸಂಗ್ರಹಣೆ ಮಾಡಬೇಕು. ತೋಟಗಾರಿಕೆ ಬೆಳೆಗಳಿಗೆ 1 ರಿಂದ 1.5 feet ಆಳದ ವರೆಗೆ (V) ಆಕಾರದಲ್ಲಿ ಗುಂಡಿ ತೆಗೆದು ಅದರಲ್ಲಿ ಮಣ್ಣು ಸಂಗ್ರಹಣೆ ಮಾಡಬೇಕು.ಅದನ್ನು ಒಟ್ಟು ಗೂಡಿಸಿ ವೃತ್ತಾಕಾರ ಮಾಡಿ, ನಂತರ ವೃತ್ತಾಕಾರ ಮಾಡಿದ ಮಣ್ಣನ್ನು ಸಮವಾಗಿ ನಾಲ್ಕು ಭಾಗ ಮಾಡಬೇಕು. ನಂತರ ಅದರಲ್ಲಿ ಬರುವ ಎರಡು ವಿರುದ್ಧ ದಿಕ್ಕಿನ ಭಾಗವನ್ನು ಬಿಟ್ಟು ಉಳಿದ ಎರಡು ಭಾಗವನ್ನು ಮರಳಿ ಒಟ್ಟು ಗೂಡಿಸಬೇಕು. ಈ ಪ್ರಕ್ರೀಯೆಯನ್ನು ನಿಮಗೆ 500ಗ್ರಾಂ ಮಣ್ಣು ಸಿಗುವವರೆಗೂ ಮಾಡಬೇಕು. ನಂತರ ಆ ಅರ್ಧ ಕೆ.ಜಿ ಮಣ್ನನ್ನು ನೆರಳಿನಲ್ಲಿ ಒಣಗಿಸಬೇಕು. ನಂತರ ಒಂದು ತೊಟ್ಟಯಲ್ಲಿ ಹಾಕಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು. ಹಾಗೆ ಅದರಲ್ಲಿ ಒಂದು ಕಾಗದದ ಹಾಳೆ ಹಾಕಬೇಕು ಅದರಲ್ಲಿ ನಿಮ್ಮ ಹೆಸರು, ಗ್ರಾಮ, ಬೆಳೆ, ಸರ್ವೇ ನಂಬರ್, ಮೊಬೈಲ್ ನಂಬರ್, ಆಧಾರ್ ನಂಬರ್ ಹಾಗೂ ಇತ್ಯಾದಿ ವಿವರಗಳ ಚೀಟಿ ಹಾಕಬೇಕು.

Where do soil test-ಮಣ್ಣು ಪರೀಕ್ಷೆಯನ್ನು ಎಲ್ಲಿ ಮಾಡಲಾಗುತ್ತದೆ?
ಕೃಷಿ ಇಲಾಖೆಯ ಮಣ್ಣು ಆರೋಗ್ಯ ಕೇಂದ್ರಗಳಲ್ಲಿ ಮತ್ತು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಹಾಗೂ ಇನ್ನಿತರ ಕೃಷಿ ಕಾಲೇಜುಗಳಲ್ಲಿ ಮತ್ತು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಲ್ಲಿ ಮಣ್ಣು ಪರೀಕ್ಷೆಯನ್ನು ಮಾಡಿಸಬಹುದು.
When do soil test-ಮಣ್ಣು ಪರೀಕ್ಷೆಯನ್ನು ಯಾವಾಗ ಮಾಡಿಸಬೇಕು?
ಮಣ್ಣು ಪರೀಕ್ಷೆಯನ್ನು ಬೇಸಿಗೆ ಸಮಯದಲ್ಲಿ ಮಾಡಿದರೆ ಉತ್ತಮ ಏಕೆಂದರೆ ಭೂಮಿಯಲ್ಲಿ ನೀರಿನಂಶ ಕಡಿಮೆ ಮತ್ತು ಬೆಳೆಗಳು ಕಟಾವು ಮುಗಿದಿರುತ್ತದೆ. ಬೆಳೆಗೆ ಗೊಬ್ಬರ ನೀಡಿದ ಒಂದು ತಿಂಗಳ ನಂತರ ಮಣ್ಣು ಸಂಗ್ರಹಣೆ ಮಾಡಬೇಕು ಪರೀಕ್ಷೆಗೆ. ಮರದ ಬುಡದಿಂದ ಮಣ್ಣು ಸಂಗ್ರಹಣೆ ಮಾಡಬಾರದು. ಹೆಚ್ಚಿನ ಮಾಹಿತಿಗೆ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಲ್ಲಿ ಕೇಳಿ ತಿಳಿದುಕೊಳ್ಳಿ.
ಇದನ್ನೂ ಓದಿ:ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.
SOIL TEST BENEFITS-ಮಣ್ಣು ಪರೀಕ್ಷೆಯ ಲಾಭಗಳೇನು?
1)ಯಾವ ಗೊಬ್ಬರ ಎಷ್ಟು ಕೊಡಬೇಕು ಎಂದು ತಿಳಿದುಕೊಳ್ಳಬಹುದು.
2)ಗೊಬ್ಬರಗಳ ಮಿತ ಬಳಕೆ
3)ಗೊಬ್ಬರದ ಮಿತ ಬಳಕೆಯಿಂದ ಖರ್ಚು ಕಡಿಮೆ
4)ಯಾವ ಬೆಳೆಯನ್ನು ಬೆಳೆಯಬಹುದು ಎಂದು ತಿಳಿಯುತ್ತದೆ.
5)ಸಾವಯವ ಗೊಬ್ಬರದ ಪ್ರಮಾಣ ಬಳಕೆ ತಿಳಿಯಲು.
6)ಯಾವ ಮಣ್ಣು ಯಾವ ಬೆಳೆ ಬೆಳೆಯಲು ಯೋಗ್ಯ ಎಂದು ತಿಳಿಯಲು.
7) ಮಣ್ಣಿನ ರಸಸಾರ(PH) ತಿಳಿಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ ಮಾಹಿತಿ ಪಡೆಯಬಹುದು.