Thursday, September 19, 2024

Crop Loss Ground Truthing Survey: ಬರ ಪರಿಸ್ಥಿತಿ ಸಮೀಕ್ಷೆ ಆರಂಭ:

Crop Loss Ground Truthing Survey: ಬರ ಪರಿಸ್ಥಿತಿ ಸಮೀಕ್ಷೆ ಆರಂಭ:
ಬರ ಸಮೀಕ್ಷೆಯ ಮಾನದಂಡಗಳೇನು? ಈ ಜಿಲ್ಲೆಯಲ್ಲಿ ಕಾರ್ಯ ಪ್ರಾರಂಭ.

ಕರ್ನಾಟಕ ರಾಜ್ಯ ಸಚಿವ ಸಂಪುಟ ಉಪಸಮಿತಿ ಸಭೆ ವಿಧಾನಸೌಧದಲ್ಲಿ ಸಭೆ ನಡೆದಿರುತ್ತದೆ. ಈ ಸಭೆಯಲ್ಲಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ನಿಯಮದಂತೆ 113 ತಾಲೂಕಗಳ ಪೈಕಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿರುತ್ತವೆ. ಆದರೆ ಜಂಟಿ ಸಮೀಕ್ಷೆಯ ನಂತರ ಉಳಿದ 51 ತಾಲೂಕುಗಳಲ್ಲಿ ಬೆಳೆ ಪರಿಸ್ಥಿತಿ ಕುಸಿದಿರುವ ಹಿನ್ನೆಲೆ ಈ ತಾಲೂಕುಗಳಲ್ಲಿ ಮೊತ್ತೊಮ್ಮೆ ಜಂಟಿ ಸಮೀಕ್ಷೆ ಮಾಡಲು ನಿರ್ಧಾರಿಸಲಾಗಿರುತ್ತದೆ.


ಕರ್ನಾಟಕ ಸಚಿವ ಸಂಪುಟ ಉಪಸಮಿತಿ ಸಭೆಯ ನಂತರ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವರು ಜಂಟಿ ಸಮೀಕ್ಷೆಯ ನಂತರ 51 ತಾಲೂಕುಗಳಲ್ಲಿ ಬೆಳೆ ಪರಿಸ್ಥಿತಿ ಕುಸಿದಿರು ಹಿನ್ನೆಲೆ ಈ ತಾಲೂಕುಗಳಲ್ಲಿ ಮೊತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.
ಉಳಿದ 81 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಮೇಲೆ ಬರ ಘೋಷಣೆ ತೀರ್ಮಾನ ಮಾಡುತ್ತೇವೆ. ಇನ್ನೊಂದು ವಾರದೊಳಗೆ ಬರ ಬೆಳೆ ಸಮೀಕ್ಷೆ ಬರಲಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಬರ ತಾಲೂಕುಗಳ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೆಗೌಡರು ತಿಳಿಸಿರುತ್ತಾರೆ.

ಯಾವ ಮಾನದಂಡಗಳ ಆಧಾರದ ಮೇಲೆ ಬರ ಸಮೀಕ್ಷೆ:

ಆಗಸ್ಟ್ 22 ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರಲ್ಲಿ ಸೂಚಿಸಲಾಗಿರುವ, ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇಕಡಾ 60), ಸತತ 3 ವಾರಗಳ ಶುಷ್ಕ ವಾತಾವರಣ, ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರತ ಬೆಳೆ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ, ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿರುತ್ತಾರೆ.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಸಮೀಕ್ಷೆ ಕಾರ್ಯ ಆರಂಭ: ಸಹಾಯಕ ಕೃಷಿ ನಿರ್ದೇಶರು ಕುಲಕರ್ಣಿ;

ಮಳೆಯ ಕೊರತೆಯಿಂದ ಬೆಳೆ ಹಾನಿ ಆಗಿರುವುದರ ಕುರಿತು ವಾಸ್ತವಿಕ ನೆಲೆಗಟ್ಟಿನ ಮೇಲೆ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಸಿಬ್ಬಂದಿ ನೇತೃತ್ವದ ತಂಡವು ಬುಧವಾರದಿಂದ ಆಯ್ದ ಗದ್ದೆಗಳನ್ನು ಪರಿಶೀಲಿಸುವ ಕೆಲಸ ಆರಂಭಿಸಿದೆ.

ಅರೆಮಲೆನಾಡು, ಬಯಲು ಸೀಮ ಪ್ರದೇಶ ಒಳಗೊಂಡ ತಾಲ್ಲೂಕಿನಲ್ಲಿ ಬರದ ಛಾಯೆ ಅವರಿಸಿದ್ದು, ಬರಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆಯಾಗುವತ್ತ ದಿನಗಳನ್ನು ಎಣಿಸುತ್ತಿದೆ. ‘ಭತ್ತದ ಕಣಜ’ ಎಂದು ಈ ಹಿಂದೆ ಕರೆಯಲ್ಪಡುತ್ತಿದ್ದ. ತಾಲ್ಲೂಕಿನಲ್ಲಿ ಮಳೆಯಾಶ್ರಿತ ಬೆಳೆಯಾದ ಭತ್ತವು ಚೀಲವನ್ನೂ ತುಂಬದಷ್ಟು ಮಳೆ ಭತ್ತ ಕೊರತೆ ಎದುರಿಸುತ್ತಿದೆ.

ವಾಡಿಕೆಗಿಂತ ಅರ್ಧದಷ್ಟು ಮಳೆಯ ಪ್ರಮಾಣ ಕಡಿಮೆ ಆಗಿರುವುದು, ರೈತರು ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ.. ಭತ್ತ ಕೈ ಕೊಟ್ಟರೂ ಗೋವಿನಜೋಳ ಕೈ ಹಿಡಿದಿತು ಎಂದು ಅದರ ಬೆನ್ನಹತ್ತಿದ ರೈತರಿಗೂ ಈ ವರ್ಷ ನಿರಾಸೆ ಮೂಡಿಸಿದೆ.

ಬರ ಪರಿಸ್ಥಿತಿಯ ಕುರಿತು ಅಧ್ಯಯನ, ನಡೆಸುತ್ತಿರುವ ಅಧಿಕಾರಿಗಳ ತಂಡ ಭತ್ತ ಹಾಗೂ ಗೋವಿನಜೋಳ ಪ್ರದೇಶಗಳನ್ನು ಆಯ್ದುಕೊಂಡಿದ್ದು, ಬೆಳೆ – ಪರಿಸ್ಥಿತಿಯನ್ನು ಮೊಬೈಲ್ – ಆ್ಯಪ್ ಮೂಲಕ ದಾಖಲಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ. ಇಂದೂರ, ಕ್ಯಾಸನಕೇರಿ, ಮಲವಳ್ಳಿ, ಕಾವಲಕೊಪ್ಪ, ಹಿರೇಹಳ್ಳಿ, ಅಗಡಿ, ಕೋಡಂಬಿ, ಓರಲಗಿ, ಮರಗಡಿ ಆಯ್ಕೆಯಾಗಿವೆ. ‘ಬೆಳೆಯ ಪರಿಸ್ಥಿತಿ ಮಣ್ಣಿನಲ್ಲಿ ತೇವಾಂಶದ ಪ್ರಮಾಣ ಸೇರಿದಂತೆ ಇನ್ನಿತರ ಅಂಶಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ಹಂತದಲ್ಲಿ ಮಳೆಯಾದರೂ ಸಹಿತ ಎಷ್ಟು ಪ್ರಮಾಣದಲ್ಲಿ ಬರಬಹುದು ಎಂಬುದನ್ನೂ ಗಣನೆಗೆ ತೆಗೆದುಕೊಂಡು ಸರ್ಕಾರಕ್ಕೆ ವರದಿ ಕಳಿಸಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ‘ ಎಂ,ಎಸ್ ಕುಲಕರ್ಣಿ ಮಾಹಿತಿಯನ್ನು ತಿಳಿಸಿರುತ್ತಾರೆ.

‘ತಾಲ್ಲೂಕಿನ 86 ಹಳ್ಳಿಗಳ ಈ ಪೈಕಿ ಶೇ.10ರಷ್ಟು ಹಳ್ಳಿಗಳನ್ನು – ಅಯ್ದುಕೊಂಡು, ಬೆಳೆ ನಷ್ಟದ ನೆಲಸ್ಥಿತಿ ದೃಢೀಕರಣ ಕಾರ್ಯ ನಡೆಸುತ್ತಿದೆ. ನಿಗದಿಪಡಿಸಿರುವ ಹಳ್ಳಿಗಳಲ್ಲಿ ತಲಾ ಐದು ಪ್ಲಾಟ್‌ಗಳನ್ನು ಆಯ್ದುಕೊಂಡು – ಅಲ್ಲಿರುವ ಬೆಳೆಗಳ ಪರಿಸ್ಥಿತಿಯನ್ನು ದಾಖಲಿಸಲಾಗುವುದು. ತಾಲ್ಲೂಕಿನ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಯಲ್ಲಿ ಶೇ.33 ರಷ್ಟು ಇಳುವರಿ ಪ್ರಮಾಣ ಕುಂಠಿತಗೊಂಡಿದೆ’ ಎಂದೂ ಸಹಾಯಕ ಕೃಷಿ ನಿರ್ದೇಶಕರು ಮಾಹಿತಿಯನ್ನು ತಿಳಿಸಿರುತ್ತಾರೆ.

ಇತರೆ ಯೋಜನೆಗಳು:


ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!
ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.
Ration card Mobile Number Change ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?
ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ.
Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

ಇತ್ತೀಚಿನ ಸುದ್ದಿಗಳು

Related Articles