ಆತ್ಮೀಯ ರೈತ ಬಾಂದವರೇ ಪ್ರತಿ ವರ್ಷ ನೀವು ನಾವೆಲ್ಲರೂ ನಮ್ಮ ಬೆಳೆಗಳಿಗೆ ವಿಮೆ ಮಾಡಿಸುತ್ತೇವೆ. ಆದರೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) (Pradhan Mantri Pasal Bhima Scheme) ಬೆಳೆವಿಮೆ ಬಗ್ಗೆ ಹಲವಾರೂ ಪ್ರಶ್ನೆಗಳಲೂ ನಮ್ಮಲ್ಲಿ ಕಾಡುತ್ತಿರುತ್ತವೆ. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೀಡಿರುತ್ತೆವೆ. ಈ ಎಲ್ಲಾ ಅಂಶಗಳನ್ನು ಓದಿ ಇನ್ನೂ ಹೆಚ್ಚಿನ ರೈತರಲ್ಲಿ ಈ ಲೇಖನವನ್ನು ಹಂಚಿಕೊಳ್ಳಿ.
ರೈತರ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗೆ ನೀಡಲಾಗಿದೆ.
ಪ್ರಶ್ನೆ: ರಾಜ್ಯದಲ್ಲಿ ಬೆಳೆ ವಿಮೆಗೆ ಜಾರಿಯಲ್ಲಿರುವ ಯೋಜನೆಗಳು ಯಾವುವು?
ಉತ್ತರ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY). ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಈ ಎರಡು ಬೆಳೆ ವಿಮೆ ಯೋಜನೆಗಳು.
ಪ್ರಶ್ನೆ: ಬೆಳೆ ವಿಮೆ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿರುವ ಇಲಾಖೆಗಳು ಯಾವುವು?
ಉತ್ತರ: ಕೃಷಿ ಇಲಾಖೆಯಿಂದ PMFBY ಯೋಜನೆಯನ್ನು ಮತ್ತು ತೋಟಗಾರಿಕೆ ಇಲಾಖೆವತಿಯಿಂದ RWBCIS ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಇದನ್ನೂ ಓದಿ: ಬರ ಪರಿಹಾರ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.
ಪ್ರಶ್ನೆ: ಬೆಳೆವಿಮೆ ಯೋಜನೆಗಳ ಉದ್ದೇಶವೇನು?
ಉತ್ತರ: ನೈಸರ್ಗಿಕ ವಿಕೋಪಗಳು ಅಥವಾ ಕೀಟ ಮತ್ತು ರೋಗಗಳ ಪರಿಣಾಮವಾಗಿ ಯಾವುದೇ ಸೂಚ್ಯಂಕದ ಬೆಳೆ ವಿಫಲವಾದಾಗ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಹಣಕಾಸಿನ ಬೆಂಬಲವನ್ನು ನೀಡುವುದು ಮತ್ತು ರೈತರ ಆದಾಯವನ್ನು ಸ್ಥಿರಗೊಳಿಸುವುದು ಯೋಜನೆಗಳ ಪ್ರಮುಖ ಉದ್ದೇಶವಾಗಿರುತ್ತದೆ.
ಪ್ರಶ್ನೆ: ಬೆಳೆ ವಿಮೆ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ತೋಟಗಾರಿಕೆ ಬೆಳೆಗಳು ಯಾವುವು?
ಉತ್ತರ: ಬೆಳೆ ಕಟಾವು ಪ್ರಯೋಗಗಳ (CCE) ಮೂಲಕ ಐತಿಹಾಸಿಕ ಇಳುವರಿ ಮಾಹಿತಿ ಲಭ್ಯವಿರುವ ವಾರ್ಷಿಕ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೊಮ್ಯಾಟೋ, ಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಬೀನ್ಸ್, ಎಲೆಕೋಸು, ಬದನೆಕಾಯಿ ಮತ್ತು ಅರಿಶಿಣ ಬೆಳೆಗಳನ್ನು PMFBY ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿದೆ. CCE ಮಾಹಿತಿ ಲಭ್ಯವಿಲ್ಲದ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಪರಂಗಿ, ಮಾವು, ಅಡಿಕೆ, ಕರಿಮೆಣಸು, ವಿಳ್ಳಬೆಲೆ ಹಾಗೂ ವಾರ್ಷಿಕ ಬೆಳೆಗಳಾದ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಹೂಕೋಸು ಬೆಳೆಗಳನ್ನು RWBCIS ಆಡಿ ಅನುಷ್ಠಾನ ಮಾಡಲಾಗುತ್ತಿದೆ.
ಪ್ರಶ್ನೆ: ಬೆಳೆ ವಿಮೆ ನೋಂದಣಿಗೆ ದಾಖಲಾತಿಗಳು ಯಾವುವು?
ಉತ್ತರ: ಅರ್ಜಿ ಜೊತೆಗೆ, ಭೂ ದಾಖಲೆ(RTC),ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಹಾಗೂ ರೈತರ ನೋಂದಣಿ ಸಂಖ್ಯೆ. ಈ ಎಲ್ಲಾ ದಾಖಲೆಗಳು ಬೇಕಾಗಿರುತ್ತದೆ.
ಪ್ರಶ್ನೆ : ನೋಂದಣಿಯ ಸಮಯದಲ್ಲಿ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಎಷ್ಟು?
ಉತ್ತರ: ಆಯಾ ಅಧಿಸೂಚಿತ ಬೆಳೆಗಳಿಗೆ ನಿಗದಿಪಡಿಸಲಾದ ಒಟ್ಟು ವಿಮೆಯ (Sum Insured) ಶೇಕಡಾ 5 ರಷ್ಟು ಮೊತ್ತವನ್ನು ರೈತರು ಪಾವತಿಸಬೇಕಾಗಿರುತ್ತದೆ.
ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:
ಪ್ರಶ್ನೆ: ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡಲಾಗುತ್ತಿದೆ
ಉತ್ತರ: ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಿಮಾ ಯೋಜನೆಯ ಅನುಷ್ಠಾನದಲ್ಲಿ ಆಗುವ ವಿಳಂಬ ಹಾಗೂ ಇತರೆ ನ್ಯೂನತೆಗಳನ್ನು ತಪ್ಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗಳಿಸಲು 2016-17 ನೇ ಸಾಲಿನಲ್ಲಿ “ಸಂರಕ್ಷಣೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಆನ್ಸೆನ್ ಅರ್ಜಿಯಿಂದ ಆರಂಭಗೊಂಡು ರೈತರ ಉಳಿತಾಯ ಖಾತೆಗೆ ಕ್ರೈಮ್ ಮೊತ್ತ ಜಮೆಯಾಗುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ಸಂರಕ್ಷಣೆ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ.
ಪ್ರಶ್ನೆ: RWBCIS ಯೋಜನೆಯಡಿ ವಿಮಾ ಪರಿಹಾರ ಲೆಕ್ಕಾಚಾರವನ್ನು ಹೇಗೆ ಮಡಲಾಗುತ್ತದೆ?
ಉತ್ತರ: ಆಯಾ ಋತುವಾರು ನೋಂದಾಯಿಸಲ್ಪಟ್ಟ ರೈತರಿಗೆ ವಿಮಾ ಪರಿಹಾರ ಮೊತ್ತವನ್ನು ಟರ್ಮ್ ಶೀಟ್ ಗಳ ಪ್ರಕಾರ ಅಧಿಸೂಚಿತ ವಿಮಾಘಟಕಗಳಿಗೆ ಲೆಕ್ಕ ಮಾಡಲಾಗುವುದು ಆಯಾ ವಿಮಾ ಘಟಕ/ಗ್ರಾಮ ಪಂಚಾಯತಿಯಲ್ಲಿ ಹವಾಮಾನ ಸೂಚ್ಯಂಕಗಳಿಂದ ಬೆಳೆ ನಷ್ಟ ಉಂಟಾದರೆ ಸದರಿ ವಿಮಾ ಘಟಕ/ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿಸಿರುವ ಎಲ್ಲಾ ರೈತರುಗಳಿಗೆ ಸಮಾನವಾಗಿ ನಷ್ಟ ಉಂಟಾಗಿದೆ ಎಂದು ಪರಿಗಣಿಸಿ ಅಧಿಸೂಚಿಸಲಾದ ಟರ್ಮ ಶೀಟ್ ರಸ್ತೆಯ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಮೊತ್ತವನ್ನು ಸಮವಾಗಿ ಲೆಕ್ಕ ಮಾಡಲಾಗುತ್ತದೆ.
ಬೆಳೆ ಸಮೀಕ್ಷೆ ಪ್ರಕಾರ ದಾಖಲಾದ ಬೆಳೆಯೊಂದಿಗೆ ವಿಮೆ ಮಾಡಿಸಿದ ಬೆಳೆಯು ಹೊಂದಾಣಿಕೆಯಾದಲ್ಲಿ ಅಂತಹ ಪ್ರಸ್ತಾವನೆಗಳನ್ನು ವಿಮಾ ಪರಿಹಾರ ಲೆಕ್ಕಾಚಾರಕ್ಕೆ ಪರಿಗಣಿಸಲಾಗುತ್ತದೆ. ಹೊಂದಾಣಿಕೆಯಾಗದ ಪ್ರಸ್ತಾವನೆಗಳನ್ನು ಮರು ಪರಿಶೀಲನೆಗೆ ಗುರುತಿಸಿ, ಪರಿಶೀಲನೆಯ ನಂತರ ಅರ್ಹವೆಂದು ಕಂಡು ಬಂದ ಪ್ರಸ್ತಾವನೆಗಳನ್ನೂ ಸಹ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದು.
ಪ್ರಶ್ನೆ: ಹವಾಮಾನ ದತ್ತಾಂಶಗಳನ್ನು ಹೇಗೆ ಪಡೆಯಲಾಗುತ್ತದೆ?
ಉತ್ತರ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವು ಹವಾಮಾನ ದತ್ತಾಂಶವನ್ನು ಒದಗಿಸುವ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಸಂರಕ್ಷಣೆ ತಂತ್ರಾಂಶಕ್ಕೆ ನೇರವಾಗಿ ವಿದ್ಯುನ್ಮಾನವಾಗಿ ಹವಾಮಾನ ಡೇಟಾವನ್ನು ಒದಗಿಸುತ್ತದೆ. ಪ್ರತಿ ವಿಮಾ ಘಟಕವನ್ನು ಸ್ವಯಂಚಾಲಿತ ಹವಾಮಾನ ಕೇಂದ್ರಗಳು (AWS) ಮತ್ತು ಸ್ವಯಂಚಾಲಿತ ಮಳೆಮಾಪನ ಕೇಂದ್ರಗಳು (TRG) ಮತ್ತು ಪರ್ಯಾಯ ಕೇಂದ್ರಗಳೊಂದಿಗೆ ಮ್ಯಾಪ್ ಮಾಡಲಾಗಿದೆ. ವಿಮಾ ಪರಿಹಾರ ಲೆಕ್ಕಾಚಾರಗಳನ್ನು ಗಣಕೀಕೃತಗೊಳಿಸಲಾಗಿದೆ.
ಪ್ರಶ್ನೆ: ಟರ್ಮ್ ಶೀಟ್ ಎಂದರೇನು?
ಉತ್ತರ: ಟರ್ಮ ಶೀಟ್ ಎನ್ನುವುದು ಬೆಳೆ ಪ್ರತಿಕ್ರಿಯೆಯನ್ನು ವಿವಿಧ ಬೆಳೆಗಳ ಬೆಳೆವಣಿಗೆಯ ಹಂತಗಳಲ್ಲಿ/ಅವಧಿಗಳಲ್ಲಿ ವಿವಿಧ ಹವಮಾನ ಅಂಶಗಳಿಂದ ಉಂಟಾಗುವ ಸಂಭವವೀಯ ನಷ್ಟವನ್ನು ಗುರುತಿಸುವ ಗಣಿತದ ಮಾಡ್ಯೂಲ್ ಆಗಿದೆ. ಇದು ಒಟ್ಟು ವಿಮಾ ಮೊತ್ತವನ್ನು ಆಧಾರಿಸಿ ಇಳುವರಿ ನಷ್ಟಕ್ಕೆ ವಿಮಾ ಪರಿಹಾರವನ್ನು ಇತ್ಯರ್ಥಪಡಿಸಲು ಕಾರಣವಾಗುತ್ತದೆ.
ಪ್ರಶ್ನೆ: RWBCIS ಯೋಜನೆಯಡಿ ಇಳುವರಿ ನಷ್ಟವನ್ನು ಗುರುತಿಸಲು ಬಳಸುವ ಹವಮಾನ ಸೂಚ್ಯಂಕಗಳೂ ಯಾವುವು?
ಉತ್ತರ: ಟರ್ಮ ಶೀಟ್ ನಲ್ಲಿ ಇಳುವರಿ ನಷ್ಟವನ್ನು ಗುರುತಿಸಲು ಈ ಮುಂದಿನ ಹವಾಮಾನ ಸೂಚ್ಯಂಕಗಳನ್ನು ಪ್ರಾಕ್ಸಿ (Proxy)ಯಾಗಿ ಬಳಸಲಾಗುತ್ತದೆ
ಮಳೆ ಪ್ರಮಾಣ : ಮಲೇ ಕೊರತೆ, ಅಧಿಕ ಮಳೆ, ಮಳೆಯ ದಿನಗಳು ಮತ್ತು ಒಣ ದಿನಗಳು
ತಾಪಮಾನ : ಹೆಚ್ಚಿನ ತಾಪಮಾನ ಮತ್ತು ಕಡಿಮೆ ತಾಪಮಾನ
ಸಾಪೇಕ್ಷೆ ಆರ್ದ್ರತೆ
ಗಾಳಿಯ ವೇಗ
ಮೇಲಿನ ಸಂಯೋಜನೆ
ರೋಗಗಳಿಗೆ ಅನುಕೂಲಕರವಾದ ಹವಮಾನ
ಪ್ರಶ್ನೆ: ವಿಮಾ ಪರಿಹಾರವನ್ನು ಯಾರು ಪಾವತಿಸುತ್ತಾರೆ?
ಉತ್ತರ: ವಿಮಾ ಪರಿಹಾರವನ್ನು ಅನುಷ್ಟಾನ ವಿಮಾ ಕಂಪನಿವತಿಯಿಂದ ಅರ್ಹ ರೈತರುಗಳು ವಿಮಾ ಪರಿಹಾರವನ್ನು ಪಾವತಿಸಲಾಗುವುದು.
ಪ್ರಶ್ನೆ: ವಿಮಾ ಪರಿಹಾರ ಮೊತ್ತ ಜಮೆಯಾಗಿರುವ ಕುರಿತು ರೈತರಿಗೆ ಮಾಹಿತಿ ಹೇಗೆ ತಿಳಿಯುತ್ತದೆ?
ಉತ್ತರ: ವಿಮಾ ಪರಿಹರ ಮೊತ್ತ ಜಮೆಯಾಗಿರುವ ಕುರಿತು ರೈತರಿಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ, ಅಲ್ಲದೇ ರೈತರು ನೇರವಾಗಿ ಸಂರಕ್ಷಣೆ ತಂತ್ರಾಂಶದ ಮುಖ ಪುಟದಲ್ಲಿ ಅರ್ಜಿ ಸ್ಥಿತಿಯನ್ನು ಅರ್ಜಿಯ ಸಂಖ್ಯೆ/ ಮೊಬೈಲ್ ಸಂಖ್ಯೆಯ ನಮೂದನೆ ಮಾಡುವುದರರೊಂದಿಗೆ ತಿಳಿದುಕೊಳ್ಳಬಹುದಾಗಿರುತ್ತದೆ. ಅಥವಾ ಕೃಷಿ ಮತ್ತು ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಬುಹುದು.
ಪ್ರಶ್ನೆ: RWBCIS ಯೋಜನೆಯಡಿ ಈವರೆಗೆ ಪಾವತಿಸಿರುವ ವಿಮಾ ಪರಿಹಾರ ಮೊತ್ತವೆಷ್ಟು?
ಉತ್ತರ: ಮುಂಗಾರು 2016-2021 ರವರೆಗೆ 6.62 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಒಟ್ಟು 14.21 ಲಕ್ಷ ರೈತರು ನೋಂದಾಯಿಸಿರುತ್ತಾರೆ. ವಿಮಾ ಕಂಪನಿಗಳ ವತಿಯಿಂದ ಅರ್ಹ ರೈತರಿಗೆ ರೂ.1979.92.ಕೋಟಿ ಗಳನ್ನು ಪಾವತಿಸಲಾಗುತ್ತದೆ. 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈವರೆಗೆ 3.60 ಲಕ್ಷಕ್ಕೂ ಅಧಿಕ ರೈತರು ನೋಂದಾಯಿಸಿರುತ್ತಾರೆ.
ಪ್ರಶ್ನೆ: ಬೆಳೆ ವಿಮೆ ನೋಂದಣಿ ಮಾಡುವ ಕೇಂದ್ರಗಳು ಯಾವುವು?
ಉತ್ತರ : ಸಮೀಪದ ಬ್ಯಾಂಕ್ ಗಳು, ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಗ್ರಾಮಾ ಒನ್ ಗಳು ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕಾಗಿರುಯತ್ತದೆ.