Friday, November 22, 2024

ಈ ಯೋಜನೆಯಡಿ 2 ಕೋಟಿ ವರೆಗೆ ಸಾಲ ಸೌಲಭ್ಯ.

ಭಾರತ ಸರ್ಕಾರವು ಹೊಸದಾಗಿ ಘೋಷಿಸಿರುವ ಕೇಂದ್ರ ಪುರಸೃತ ಹೊಸ ಯೋಜನೆ ‘’ಕೃಷಿ ಮೂಲಭೂತ ಸೌಕರ್ಯ ನಿಧಿ’’ ಅಡಿಯಲ್ಲಿ ಹಣಕಾಸು ಸೌಲಭ್ಯಗಳು ಯೋಜನೆಯಡಿ ಕೊಯ್ಲಿನ್ನೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮೂಕಿನ ಕೃಷಿ ಆಸ್ತಿ ನರ್ಮಾಣ ಕಾರ್ಯಗಳಿಗೆ ಸೂಕ್ತ ಮಧ್ಯಮಾವಧಿ ಮತ್ತು ಧೀರ್ಘಾವದಿ ಸಾಲ ಒದಗಿಸಿ ಈ ಸಾಲಗಳಿಗೆ ಬಡ್ಡಿ ಸಹಾಯಧನವನ್ನು ಒದಗಿಸಲಾಗುವುದು.

ಯೋಜನೆಯ ವಿವರಗಳು:

• ಪ್ರಸ್ತಾವಿತ ಯೋಜನೆಯು ಕೇಂದ್ರ ಪುರಸೃತ ಯೋಜನೆಯಾಗಿದ್ದು, ಕರ್ನಾಟಕ ರಾಜ್ಯಕ್ಕೆ ನಾಲ್ಕು ವರ್ಷಗಳಿಗೆ ರೂ.4525 ಕೋಟಿಗಳನ್ನು ನಿಗಡಿಪಡಿಸಲಾಗಿದೆ.
• ಕೃಷಿ ಮೂಲಭೂತ ಸೌಕರ್ಯಗಳಿಗೆ ಹಣಕಾಸು ಸವಲತ್ತು ಒದಗಿಸುವುದು.
• ಬಡ್ಡಿ ಸಹಾಯಧನ-ವಾರ್ಷಿಕ ಶೇಕಡ 3 ಗರಿಷ್ಟ ಮಿತಿ ರೂ 2.00 ಕೋಟಿ, ಗರಿಷ್ಟ 7 ವರ್ಷದ ಅವಧಿಗೆ.
• ಕೊಯ್ಲಿನೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮೂಹಿಕ ಕೃಷಿ ಆಸ್ತಿ ನಿರ್ಮಾಣ ಕಾರ್ಯಗಳಿಗೆ ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲ ಒದಗಿಸುವುದು.

ಇದನ್ನೂ ಓದಿ: ಯುವಕ ಸಂಘಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡಲು ತೀರ್ಮಾನ.

ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು ಏ. ಕೊಯ್ಲಿನೊತ್ತರ ನಿರ್ವಹಣೆ ಯೋಜನೆಗಳು


• ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು
• ಗೋದಾಮುಗಳು ಮತ್ತು ಸೈಲೋಗಳು
• ಪ್ಯಾಕ್ ಹೌಸ್ಗಳು
• ವಿಂಗಡಣೆ ಮತ್ತು ಶ್ರೇಣೆಕರಣ ಘಟಕಗಳು
• ಶೀಥಿಲ ಗೃಹ ಸರಪಳಿಗಳು
• ಸಾಗಾಣಿಕೆ ಸೌಲಭ್ಯಗಳು
• ಪ್ರಾಥಮಿಕ ಸಂಸ್ಕರಣ ಕೇಂದ್ರಗಳು
• ಹಣ್ಣು ಮಾಗಿಸುವ ಘಟಕಗಳು
• ಮೌಲ್ಯಮಾಪನ ಘಟಕಗಳು

ಬಿ. ಸಾಮೂಹಿಕ ಕೃಷಿ ಆಸ್ತಿ ಸೃಷ್ಟಿಸುವ ಮೂಲಭೂತ ಸೌಕರ್ಯಗಳು

• ಸಾವಯವ ಕೃಷಿ ಪರಿಕರಗಳ ಉತ್ಪಾದನಾ ಘಟಕಗಳು
• ಜೈವಿಕ ಪ್ರಚೋದಕ ಘಟಕಗಳು
• ಗುಚ್ಚ ಬೆಳೆಗಳ ಸರಬರಾಜು ಸರಪಳಿ ಮೂಲಭೂತ ಸೌಕರ್ಯ
• ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ಸ್ಥಳೀಯ ಆಡಳಿತದ ಸಮುದಾಯ ಕೃಷಿ ಆಸ್ತಿಗಳು –ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP)ಯೋಜನೆಗಳು.
• ಪ್ರಾಥಮಿಕ ಸಂಸ್ಕರಣ ಘಟಕಗಳು
• ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು- ಕೃಷಿ ಯಾಂತ್ರಿಕರಣ
• ಸಾಮೂಹಿಕ ಅಣಬೆ ಉತ್ಪಾದನಾ ಕೇಂದ್ರಗಳು
• ಹಾಲು ಶೀಥಲೀಕರಣ ಘಟಕಗಳು ಅರ್ಹರಿರುವುದಿಲ್ಲ.

ಇದನ್ನೂ ಓದಿ: ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ

ಅರ್ಹ ಫಲಾನುಭವಿಗಳು:


• ರೈತರು / ರೈತ ಉತ್ಪಾದಕ ಸಂಸ್ಥೆಗಳು
• ಕೃಷಿ ಉದ್ಯಮಿಗಳು /ನವೋದ್ಯಮಿಗಳು
• ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು
• ವಿವಿಧೋದ್ದೇಶ ಸಹಕಾರ ಸಂಘಗಳು
• ಸ್ವ-ಸಹಾಯ ಗುಂಪುಗಳು
• ಜಂಟಿ ಭಾದ್ಯತಾ ಗುಂಪುಗಳು
• ಖಾಸಗಿ ಮಾಲೀಕತ್ವ ಸಂಸ್ಥೆಗಳು
• ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ/ಸ್ಥಳೀಯ ಆಡಳಿತ ಪ್ರಯೋಜಿತ ಸಾರ್ವಜನಿಕ –ಖಾಸಗಿ ಸಹಭಾಗಿತ್ವ ಯೋಜನೆಗಳು (PPP Project)

ಅರ್ಜಿ ಸಲ್ಲಿಕೆ ಪ್ರಕ್ರಿಯೆ:


• ಫಲಾನುಭವಿಗಳು www.agriinfra.dac.gov.in ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
• ಹೆಚ್ಚಿನ ಮಾಹಿತಿಗೆ ಕೃಷಿ/ತೋಟಗಾರಿಕೆ ಇಲಾಖೆಗಳು, ಜಿಲ್ಲಾ ನಬಾರ್ಡ ವ್ಯವಸ್ಥಾಪಕರು/ನಿಮ್ಮ ವ್ಯಾಪ್ತಿಯ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಗುಡ್ ನ್ಯೂಸ್ :2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ಯೋಜನೆಯ ಅವಧಿ:2020-21 ರಿಂದ 2019-30(10ವರ್ಷಗಳು)


• ಗರಿಷ್ಠ 7 ವರ್ಷ ಸಾಲ ಮರುಪಾವತಿ ಅವಧಿ
• 6 ರಿಂದ 24 ತಿಂಗಳು ಸಾಲ ವಸೂಲಾತಿ ವಿನಾಯತಿ ಅವಧಿ
• ರೂ.2.00 ಕೋಟಿವರೆಗೆ ಸಾಲಕ್ಕೆ ಕೇಂದ್ರ ಸಾರ್ಕಾರವು ಖಾತರಿ ಒದಗಿಸುವುದು.
• ರೈತ ಉತ್ಪಾದಕ ಸಂಸ್ಥೆಗಳು ರೈತ ಉತ್ಪಾದಕ ಸಂಸ್ಥೆಗಳ ಉತ್ತೇಜನಕ್ಕೆ ನಿಗದಿಪಡಿಸಿರುವ ಯೋಜನೆಯಡಿ ಸಾಲದ ಖಾತರಿಯನ್ನು ಪಡೆದುಕೊಳ್ಳಬಹುದು
• ರಾಕ್ಯ/ಕೇಂದ್ರದ ಯಾವುದಾದರೂ ಸಹಾಯಧನ ಒದಗಿಸುವ ಯೋಜನೆಯನ್ನು ಈ ಯೋಜನೆಯೊಂದಿಗೆ ಒಟಗ್ಗೂಡಿಸಬಹುದಾಗಿದೆ.

ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು:


• ರಾಷ್ಟ್ರೀಕೃತ ಬ್ಯಾಂಕುಗಳು
• ಶೆಡ್ಯೂಲ್ಡ ಸಹಕಾರಿ ಬ್ಯಾಂಕುಗಳು
• ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು
• ಸಣ್ಣ ಹಣಕಾಸು ಬ್ಯಾಂಕುಗಳು
• ಬ್ಯಾಂಕೇತರ ಹಣಕಾಸು ಸಂಸ್ಥೆಗಳು
• ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ(ಎನ್ಸಿಡಿಸಿ)

ಇದನ್ನೂ ಓದಿ:ತೋಟಗಾರಿಕೆ ವಿಶ್ವವಿದ್ಯಾಲಯದಿಂದ ರೈತರ ಮಕ್ಕಳಿಗೆ ಮಾಸಿಕ ಶಿಷ್ಯವೇತನದ ಜೊತೆಗೆ ಉಚಿತ ತೋಟಗಾರಿಕೆ ತರಬೇತಿ

ಇತ್ತೀಚಿನ ಸುದ್ದಿಗಳು

Related Articles