ಆಹಾರ ಮತ್ತು ನಾಗರಿಕ ಸೇವಾ ಇಲಾಖೆಗಳ ಮಾರ್ಗ ಸೂಚಿ ಪ್ರಕಾರ ಪಡಿತರ ಚೀಟಿ ಹೊಂದಿರುವ ಗ್ರಾಹಕರು ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು(Ration card e-kyc) ಪಡೆಯಲು ಈ ಅಂಕಣದಲ್ಲಿ ತಿಳಿಸಿರುವ ಕೆಲಸವನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿಉಚಿತವಾಗಿ ಪಡೆಯುತ್ತಿರುವ ಆಹಾರ ಧಾನ್ಯಗಳು ಸಿಗುವುದಿಲ್ಲ.
ರೇಷನ್ ಕಾರ್ಡ್(Ration card) ಹೊಂದಿರುವ ಗ್ರಾಹಕರು ಸರಕಾರಕ್ಕೆ ಫಲಾನುಭವಿ ನೈಜತೆಯನ್ನು ಖಾತ್ರಿ ಪಡಿಸಲು ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಆಹಾರ ಇಲಾಖೆಯಿಂದ ಕಡ್ಡಾಯವಾಗಿರುತ್ತದೆ. ಈ ನಿಯಮದ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಯ ಪಡಿತರ ಚೀಟಿದಾರರು ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.
ಈ ಲೇಖನದಲ್ಲಿ Ration card e-kyc ನ್ನು ಮಾಡಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಈಗಾಗಲೇ ಇ-ಕೆವೈಸಿ (Ration card e-kyc) ಆಗಿರುವುದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬೇಕು? ಇ-ಕೆವೈಸಿಗೆ ಮಾಡಲು ಬೇಕಾಗುವ ದಾಖಲೆಗಳು ಏನು ಎಂಬ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಇದನ್ನೂ ಓದಿ:ಪಿಎಂ ಕಿಸಾನ್ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳಿ! ಚೆಕ್ ಮಾಡುವ ವಿಧಾನ.
Ration card-ಇ-ಕೆವೈಸಿ ಮಾಡಿಕೊಳ್ಳದವರಿಗಿಲ್ಲ ಪಡಿತರ ವಿತರಣೆ:
ಈಗಾಗಲೇ ಕಳೆದ ಹಲವು ತಿಂಗಳಿಂದ ಪಡಿತರ ಚೀಟಿದಾರರಿಗೆ ಇಲಾಖೆಯಿಂದ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿರುತ್ತದೆ, ಇದಾಗ್ಯೂ ಇಲ್ಲಿಯವರೆಗೆ ಇ-ಕೆವೈಸಿ ಮಾಡಿಕೊಳ್ಳದವರಿಗೆ ಫೆಬ್ರುವರಿ 15ರ ಒಳಗೆ Ration card e-kyc ಮಾಡಿಕೊಂಡರೆ ಮಾತ್ರ ಪಡಿತರ ವಿತರಣೆ ಸಿಗಲಿದೆ.
Ration card e-kyc- ಈಗಾಗಲೇ ಇ-ಕೆವೈಸಿ ಆಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಎಲ್ಲಾ ಸದಸ್ಯರ ಇ-ಕೆವೈಸಿ ಆಗಿದೆಯೇ? ಇಲ್ಲವೋ ಎಂದು ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಈ ಕೆಳಗೆ ತಿಳಿಸಿದ ಹಂತಗಳ ಮೂಲಕ ಇ-ಕೆವೈಸಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ವಿಧಾನ-1: ಮೊದಲಿಗೆ Ration card e-kyc status check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
ವಿಧಾನ-2: ನಂತರ ಈ ಪುಟದಲ್ಲಿ ಮೇಲೆ ಕಾಣುವ “ಇ-ಸೇವೆಗಳು/E- services” ಮೇಲೆ ಕ್ಲಿಕ್ ಮಾಡಿ “new/existing RC Request status/ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿ “ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆಯ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3: ಈ ಪೇಜ್ ನಲ್ಲಿ ಪಡಿತರ ಚೀಟಿ ವಿವರ/ status Ration card ಮೇಲೆ ಕ್ಲಿಕ್ ಮಾಡಿ with out opt ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ನಮೂದಿಸಿ “GO” ಮೇಲೆ ಕ್ಲಿಕ್ ಮಾಡಿದರೆ member count ಆಯ್ಕೆಯ ವಿಭಾಗದಲ್ಲಿ E-KYC done ಎಂದು ತೋರಿಸಿ ಎಲ್ಲಾ ಸದಸ್ಯರ ಸಂಖ್ಯೆ ಕಾಣಿಸಿದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಆಗಿದೆ ಎಂದು ತಿಳಿಯಬೇಕು.
ಒಂದೊಮ್ಮೆ ರೇಷನ್ ಕಾರ್ಡ್ ನಲ್ಲಿ 4 ಜನ ಸದಸ್ಯರಿದ್ದು 3 ಜನ E-KYC done ಕಾಲಂ ಕೆಳಗೆ ತೋರಿಸಿ “E-KYC remaining ಕಾಲಂ ನಲ್ಲಿ 1 ಎಂದು ತೋರಿಸಿದರೆ ಇನ್ನು ಒಬ್ಬರ ಕೆವೈಸಿ ಬಾಕಿ ಉಳಿದಿದೆ ಎಂದು ಅರ್ಥ.
ಇದನ್ನೂ ಓದಿ: ಹಸಿರೆಲೆ ಗೊಬ್ಬರ ಮಹತ್ವ ಮತ್ತು ಅದರ ಪ್ರಯೋಜನಗಳು! ನಿಮ್ಮ ಜಮೀನಿನ ಪೋಷಕಾಂಶ ಹೆಚ್ಚಿಸಿ.
Where do to E-kyc-ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು?
ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ತಮ್ಮ ಕಾರ್ಡ್ ನಲ್ಲಿರುವ ಸದಸ್ಯರ ಇ-ಕೆವೈಸಿಯನ್ನು ಮಾಡಿಸಲು ನೀವು ಪ್ರತಿ ತಿಂಗಳು ಪಡಿತರ ಆಹಾರ ಧಾನ್ಯಗಳನ್ನು ಪಡೆಯಲು ಹೋಗುವ ನ್ಯಾಯ ಬೆಲೆ ಅಂಗಡಿಗಳಲ್ಲಿ ನೇರವಾಗಿ ಭೇಟಿ ಮಾಡಿ ಖುದ್ದು ಸದಸ್ಯರು ಹಾಜರಿದ್ದು ಅಗತ್ಯ ದಾಖಲೆಗಳನ್ನು ಒದಗಿಸಿ ಇ-ಕೆವೈಸಿ ಮಾಡಿಕೊಳ್ಳಬಹುದು.
Documents for e-kyc-ಇ-ಕೆವೈಸಿ ಗೆ ಬೇಕಾಗುವ ದಾಖಲೆಗಳು?
1)ಅರ್ಜಿದಾರರ ಆಧಾರ್ ಕಾರ್ಡ್
2)ರೇಷನ್ ಕಾರ್ಡ್ ಪ್ರತಿ
3)ಮೊಬೈಲ್ ನಂಬರ್
ಆಹಾರ ಇಲಾಖೆಯ ಅಧಿಕೃತ ಜಾಲತಾಣ:click here