Thursday, November 21, 2024

Pm kisan new list-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೇ ಚೆಕ್ ಮಾಡಿಕೊಳ್ಳಿ.

ನಮಸ್ಕಾರ ರೈತರೇ, ಕೃಷಿ ಮಾಡುವ ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರಕಾರವು ಕೃಷಿ ಜಮೀನು ಹೊಂದಿದ ಪ್ರತಿಯೊಬ್ಬ ರೈತರಿಗೆ ವರ್ಷಕ್ಕೆ ರೂ.6000 ಹಣವನ್ನು ಮೂರು ಕಂತುಗಳಲ್ಲಿ ನೇರ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗೂ ಪ್ರತಿ ತಿಂಗಳು ರೈತರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಆದ್ದರಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೇ ಚೆಕ್ ಮಾಡಿಕೊಳ್ಳಿ.

ತುಂಬಾ ಜನರಿಗೆ ಇಕೆವೈಸಿ ಮಾಡಿಸದೆ ಇರುವುದರಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರದೆ ಇರಬಹುದು, ಆದ್ದರಿಂದ ತಪ್ಪದೇ ಎಲ್ಲರೂ ಇಕೆವೈಸಿ ಮಾಡಿಸಿ. ಇಕೆವೈಸಿಯನ್ನು ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ನಾಗರಿಕ ಸೇವಾ ಸಿಂಧು ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಬಹುದು.

ಕೇಂದ್ರ ಸರಕಾರದ ಈ ಯೋಜನೆಯು ಎಲ್ಲಾ ವರ್ಗದ ರೈತರಿಗೆ ಇದ್ದು ಅದರಲ್ಲಿ ತೆರಿಗೆ ಪಾವತಿ, ಸರಕಾರಿ ನೌಕರರಿಗೆ, ಪಿಂಚಣಿದಾರರಿಗೆ, ಲಾಯರ್ ಮತ್ತು ಡಾಕ್ಟರ್  ಇವರು ಪಡೆಯಲು ಬರುವುದಿಲ್ಲ. ಒಂದು ವೇಳೆ ಪಡೆದುಕೊಂಡಿದ್ದಲ್ಲಿ ಹಿಂದುರುಗಿಸಬಹುದು.

ಇದನ್ನೂ ಓದಿ:ಯಾವುದೇ ಜಮೀನನ್ನು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ.

Pm kisan new list-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ಪಟ್ಟಿ ನೋಡುವ ವಿಧಾನ!

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

Step-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

step-2: ಈ ಎಲ್ಲಾ ಅಂಕಣಗಳಲ್ಲಿ ನೀವು Beneficiary list  ಮೇಲೆ ಕ್ಲಿಕ್ ಮಾಡಿ.

step-3: ಆ ಮೇಲೆ ನಿಮ್ಮ ರಾಜ್ಯ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಉಪ ಜಿಲ್ಲೆ ಆಯ್ಕೆ ಮಾಡಿ, ತಾಲೂಕು ಆಯ್ಕೆ ಮಾಡಿ, ಕೊನೆಯಲ್ಲಿ ನಿಮ್ಮ ಗ್ರಾಮ/ಹಳ್ಳಿ ಆಯ್ಕೆ ಮಾಡಿ.

step-4:ನಂತರ Get report ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಇರುವ ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ.

ಇದನ್ನೂ ಓದಿ:ಮನೆಯಲ್ಲೆ ಕುಳಿತು ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ ನೋಡಬಹುದು!

ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಕಾಣದಿದ್ದರೇ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಅರ್ಜಿ ಏನಾಗಿದೆ ಎಂದು ತಿಳಿದುಕೊಳ್ಳಿ. ಕೆಲವು ಬಾರಿ Ekyc ಮತ್ತು Aadhar ಹೆಸರು ತಿದ್ದುಪಡಿ, RTC/ಪಹಣಿ ತಿದ್ದುಪಡಿ, ಹೀಗೆ ಹಲವಾರು ಕಾರಣಗಳಿಂದ ಬರದೆ ಇರಲು ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿಗಳು

Related Articles