Thursday, November 21, 2024

ARECANUT FARMING-ಅಡಿಕೆ ಬೆಳೆ ಬೆಳೆಯುವ ರೈತರು ಮುಂಗಾರು ಹಂಗಾಮಿನಲ್ಲಿ ಮಾಡಬೇಕಾದ ಕ್ರಮಗಳು.

ಅಡಿಕೆ ನಮ್ಮ ದೇಶದ ಪ್ರಮೂಖ ವಾಣಿಜ್ಯ ಬೆಳೆಯಾಗಿದ್ದು, ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಅರೆ ಮಲೆನಾಡು ಪ್ರದೇಶಗಳ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆ ಬೆಳೆಯ ನಿಖರ ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ಅಡಿಕೆ ಬೆಳೆಯನ್ನು ಪ್ರಸ್ತುತ 4.76 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬೆಳೆದು, 7.78 ಲಕ್ಷ ಟನ್ ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯವು ಅಡಿಕೆ ಬೆಳೆಯ ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದಿವೆ.

ಆದರೆ ಇತೀಚಿನ ದಿನಗಳಲ್ಲಿ ಅಡಿಕೆ ಬೆಳೆಗೆ ವಿವಧ ಬಗೆಯ ರೋಗ ರುಜಿನಗಳಿಂದಾಗಿ ಇಳುವರಿ ಕಡಿಮೆಯಾಗುತ್ತಿದೆ. ಬೆಳೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಲು ಮುಂಗಾರಿನಲ್ಲಿ ವೈಜ್ಞಾನಿಕ ಬೇಸಾಯ ಮತ್ತು ಸಸ್ಯ ಸಂರಕ್ಷಣೆ ಕ್ರಮಗಳನ್ನು ಅಳವಡಿಸುವುದರ ಜೊತೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಮುಖ್ಯವಾಗಿದೆ.

ಇದನ್ನೂ ಓದಿ:17ನೇ ಕಂತು ಬಿಡುಗಡೆಗೆ ತಯಾರಿ, ಕಡ್ಡಾಯ ಪಿ ಎಂ ಕಿಸಾನ್ ಫಲಾನುಭವಿಗಳು Ekyc ಮಾಡಿಸಿ. ಲಿಂಕ್ ಇಲ್ಲಿದೆ.

ಮುಂಗಾರು ಹಂಗಾಮಿನಲ್ಲಿ ರೈತರು ಮಾಡಬೇಕಾದ ಕಾರ್ಯಗಳು:

1)ಅಧಿಕ ಮಳೆ ಬೀಳುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಷ್ಟ-ಸಪ್ಟಂಬರ್‌ ಅವಧಿಯಲ್ಲಿ 90*90*90 ಸೆಂ.ಮೀ. ಅಳತೆಯ ಗುಣಿಗಳನ್ನು 2.7*2.7 ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡುವುದು ಸೂಕ್ತ.

2)ಪ್ರತಿ ಮರಕ್ಕೆ 15-20ಕೆ.ಜಿ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ಮತ್ತು ಸುಡೋಮೊನಾಸ್‌ ಜೈವಿಕ ಗೊಬ್ಬರಗಳೊಂದಿಗೆ ಮಿಶ್ರಣಮಾಡಿ ಮಣ್ಣಿಗೆ ಸೇರಿಸಬೇಕು.

3)1 ತಿಂಗಳ ನಂತರ ಫಲ ಬಿಡುವ ಪ್ರತಿ ಮರಕ್ಕೆ 100ಗ್ರಾಂ ಸಾರಜನಕ, 40ಗ್ರಾಂ ರಂಜಕ, 140ಗ್ರಾಂ ಪೋಟ್ಯಾಷ್‌ ರಾಸಾಯನಿಕ ಗೊಬ್ಬರವನ್ನು ಒದಗಿಸಬೇಕು. ಈ ಗೊಬ್ಬರವನ್ನು ಮೇ-ಜೂನ್‌ ತಿಂಗಳು ಮತ್ತು ಸೆಪ್ಟಂಬರ್‌ -ಅಕ್ಟೋಬರ್‌ ತಿಂಗಳಿನಲ್ಲಿ ಕೊಡಬೇಕು.

4)ಹಸಿರೆಲೆ ಗೊಬ್ಬರದ ಬೀಜಗಳಾದ ಸೆಣಬು, ಡಯಂಚಾ ಮತ್ತು ದ್ವಿದಳ ಧಾನ್ಯದ ಕೆಸರು,ಉದ್ದು,ಅಲಸಂಡೆ ಬೀಜಗಳನ್ನು ಬೆಳೆದು 7 ರಿಂದ 8 ವಾರಗಳ ಕಾಲ ಬೆಳೆಸಿ ಕಾಯಿ ಕಚ್ಚುವ ಮೊದಲು ಮಣ್ಣಿನಲ್ಲಿ ಸೇರಿಸಬೇಕು. ಇದರಿಂದ ಅಡಿಕೆ ಗಿಡಗಳಿಗೆ ಸೊಪ್ಪು ಹಾಕುವ ಕೆಲಸ ಬರುವುದಿಲ್ಲ.

5)ಮುಂಗಾರಿನ ಮೊದಲು ಬಸಿಗಾಲುವೆಗಳಲ್ಲಿ ಬಿದ್ದಿರುವ ಮಣ್ಣನ್ನು ತೆಗೆದು ಹಾಕಿ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ದಾರಿ ಮಾಡಿ ಅನೂಕೂಲವಾಗುತ್ತದೆ.

ಇದನ್ನೂ ಓದಿ: ನಿರುದ್ಯೋಗ ಮಹಿಳೆಯರಿಗೆ ಮತ್ತು ಪುರುಷರಿಗೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗದಲ್ಲಿ ಉದ್ಯೋಗಾವಕಾಶಗಳು!

6)ಅಡಿಕೆ ತೋಟದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಮರದ ಬುಡಕ್ಕೆ ಹಾಕುವುದರಿಂದ ಕಳೆ ನಿಯಂತ್ರಣ ಮಾಡಿದ ಹಾಗೆ ಮತ್ತು ಗಿಡಗಳಿಗೆ ಸಾವಯವ ಗೊಬ್ಬರ ನೀಡಿದ ಹಾಗೆ ಆಗುತ್ತದೆ.

7)ಚಿಕ್ಕ ಅಡಿಕೆ ತೋಟಗಳಲ್ಲಿ ಬಾಳೆ, ಕೊಕ್ಕೊ,ಕಾಳುಮೆಣಸು ಬೆಳೆಯಬಹುದು. ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ಬರುತ್ತದೆ.

8)ಮಳೆಗಾಲ ಆರಂಭಕ್ಕೆ ಪ್ರಾರಂಭದಲ್ಲಿ ತೋಟಗಳನ್ನು ಸ್ವಚ್ಛವಾಗಿಡಿ ಇದರಿಂದ ನಿಮ್ಮ ತೋಟಕ್ಕೆ ರೋಗಗಳ ಭಾದೆ ಕಡಿಮೆ ಆಗುತ್ತದೆ.

9)ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ತೋಟದಲ್ಲಿ ಹೆಚ್ಚು ಮಳೆಯಾಗುವುದರಿಂದ ಕೊಳೆ ರೋಗದ ಹಾನಿಯಿಂದ ರೈತರಿಗೆ ಅಡಿಕೆ ಇಳುವರಿಯಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ರೋಗವನ್ನು ಹೋಗಲಾಡಿಸಲು ಮುಂಗಾರು ಪೂರ್ವದಲ್ಲಿ ಶೇ.1 ಬೋರ್ಡೋ ದ್ರಾವಣ ಸಿಂಪರಣೆ ಮಾಡಬೇಕು. ನಂತರ 20 ದಿನಗಳಲ್ಲಿ ಮತ್ತೊಮ್ಮೆ ಸಿಂಪರಣೆ ಮಾಡಬೇಕು.

ಅಡಿಕೆ ಬೆಳೆಯ ಇನ್ನೂ ಹೆಚ್ಚಿನ ಮಾಹಿತಿಗೆ ರೈತರು ತಮ್ಮ ತಾಲೂಕುಗಳಲ್ಲಿ ಇರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಅಥವಾ ನಿಮ್ಮ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳನ್ನು ಭೇಟಿ ಮಾಡಿ ಮಾಹಿತಿ ಕೇಳಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles