ಕೃಷಿಯಲ್ಲಿ ಹಲವಾರು ರೀತಿಯ ಉಪಕಸುಬುಗಳಿವೆ ಅದರಲ್ಲಿ ಹೆಚ್ಚಿನ ಲಾಭದಾಯಕವಾದ ಕೃಷಿಯೆಂದರೆ ಹೈನುಗಾರಿಕೆಯಾಗಿದೆ. ಭಾರತವು ಹೈನುಗಾರಿಕೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಿದ್ದರು ರೈತರಿಗೆ ಹೈನುಗಾರಿಕೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿವೆ.
ಹಸುಗಳನ್ನು ಕೊಳ್ಳುವಾಗ ಅವುಗಳ ವಂಶಾವಳಿಗಳ ದಾಖಲೆ ಇದ್ದರೆ ಅದರ ವಂಶದ ಹಾಲಿನ ಉತ್ಪಾದನೆ ಸಾಮರ್ಥಯ ಮತ್ತು ಅವುಗಳ ಹಿಂದಿನ ಸೂಲಿನ ಹಾಲಿನ ಇಳುವರಿಯನ್ನು ಪರಿಸೀಲಿಸಿ ಹೆಚ್ಚು ಹಾಲು ಉತ್ಪಾದನೆಯುಳ್ಳ ವಂಶದ ದನಗಳನ್ನು ಖರೀದಿಸಬೇಕು.
ಹೈನುಗಾರಿಕಯನ್ನು ಲಾಭದಾಯಕ ಮಾಡಲು ಉತ್ತಮವಾದ ಹಸುಗಳ ಆಯ್ಕೆ ಮುಖ್ಯವಾಗಿರುತ್ತದೆ. ಇದರಿಂದ ಕೃಷಿಯಲ್ಲೂ ಲಾಭವನ್ನು ಗಳಿಸಲು ಸಹಾಯವಾಗುತ್ತದೆ. ಉತ್ತಮ ಹಸುಗಳ ಆಯ್ಕೆಯಲ್ಲಿ ಗಮನಿಸಬೇಕಾದ ಅಂಶಗಳು ಮತ್ತು ಶುದ್ಧ ಹಾಲನ್ನು ಉತ್ಪಾದಿಸುವ ವಿಧಾನಗಳು ಅದರ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಶು ಸಂಗೋಪನೆಯಲ್ಲಿ ಲಾಭ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ ಸಾಕು!
ಉತ್ತಮ ಹಸುಗಳ ಆಯ್ಕೆಯಲ್ಲಿ ಗಮನಿಸಬೇಕಾದ ಅಂಶಗಳು:
1)1-2 ಸೂಲದೊಳಗಿನ ದನಗಳನ್ನು ಖರೀದಿಸಬೇಕು.
2)ದನಗಳ ವಯಸ್ಸು 4-5 ವರ್ಷದೊಳಗಿರಬೇಕು.
3)ಹೆಚ್ಚು ಹಾಲುಕೊಡುವ ಹಸುಗಳನ್ನು ಆಯ್ಕೆ ಮಾಡಬೇಕು.
4)ಹೆಚ್ಚು ಹಾಲುಕೊಡುವ ಹಸುಗಳು ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುತ್ತವೆ.
5)ಮೃದುವಾದ ಕೂದಲು ಮತ್ತು ನುಣುಪಾದ ಚರ್ಮ ಹೊಂದಿರಬೇಕು.
6)ಕಾಂತಿಯುಕ್ತ ಮತ್ತು ಚುರುಕಾದ ಕಣ್ಣುಗಳು ಇರಬೇಕು.
7)ಹೊಟ್ಟೆ ಮತ್ತು ಎದೆಗುಂಡಿಗೆ ದೊಡ್ಡದಾಗಿರಬೇಕು.
8)ಹಣೆ ಅಗಲವಾಗಿದ್ದು ಕುತ್ತಿಗೆ ಹಾಗೂ ಇಣೆಯ ಭಾಗ ತೆಳುವಾಗಿರಬೇಕು.
9)ಕೆಚ್ಚಲ ಮೇಲೆ ಮತ್ತು ಕೆಚ್ಚಲ ಮುಂದೆ ಇರುವ ರಕ್ತನಾಳಗಳು ದೊಡ್ಡದಾಗಿದ್ದು, ಅಂಕುಡೊಂಕಾಗಿದ್ದು ಕಣ್ಣಿಗೆ ಎದ್ದು ಕಾಣುವ ಹಾಗೆ ಇರಬೇಕು.
10)ಮೊಲೆ ತೊಟ್ಟುಗಳು ಸಮನಾಗಿದ್ದು, ದೊಡ್ಡದಾಗಿರಬೇಕು.
11)ಎರಡು ಹಿಂಗಾಲುಗಳ ನಡುವಿನ ಅಂತರ ಅಗಲವಾಗಿರಬೇಕು.
12)ಪಶುವೈದ್ಯರಿಂದ ಪರೀಕ್ಷಿಸಿ ಆರೋಗ್ಯವಂತ ದನಗಳನ್ನೆ ಖರೀದಿಸಬೇಕು.
13)ಹಸು ಮತ್ತು ಕರು ಹಾಕಿ ಎರಡು ತಿಂಗಳು ಮೀರಿರಬಾರದು.
14)ಗರ್ಭದರಿಸಿದ ಹಸು ಖರೀದಿಸುವಲ್ಲಿ ತುಂಬು ಗರ್ಭಿಣಿ ಹಸುವನ್ನು ಮಾತ್ರ ಖರೀದಿಸಬೇಕು.
15)ಒಂದೇ ಸಾರಿ ಹಾಲು ಹಿಂಡಿಸಿ ನೋಡಿ ದನ ಖರೀದಿಸಬಾರದು. ಕನಿಷ್ಠ ಪಕ್ಷ ಮೂರು ಸಾರಿ ಹಾಲು ಹಿಂಡಿಸಿ ನೋಡಿ ದನ ಖರೀದಿಸುವುದು ಅತ್ಯುತ್ತಮ.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರ ಮಕ್ಕಳಿಗೆ ಶಿಷ್ಯವೇತನದೊಂದಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.
ಶುದ್ಧಹಾಲನ್ನು ಉತ್ಪಾದಿಸುವ ಕ್ರಮಗಳು:
1)ಹಾಲನ್ನು ಯಾವಾಗಲೂ ಆರೋಗ್ಯವಂತ ಜಾನುವಾರುಗಳಿಂದ ಪಡೆಯಬೇಕು.
2)ಹಾಲು ಕರೆಯುವ ಮುನ್ನ ಆಕಳಿನ/ಎಮ್ಮೆಯ ಕೆಚ್ಚಲು,ಮೊಲೆ, ಮತ್ತು ದೇಹದ ಹಿಂಭಾಗ, ಬಾಲವನ್ನು ಸ್ವಚ್ಛವಾಗಿಡಬೇಕು.
3)ಹಾಲನ್ನು ಸಂಗ್ರಹಿಸುವಾಗ, ಹಿಂಡುವಾಗ ಬಳಸುವ ಪಾತ್ರೆಗಳನ್ನು, ಕ್ಯಾನುಗಳನ್ನು ತೊಳೆಯುವ ಸೋಡ ಅಥವಾ ಇತರೆ ಶುಚಿ ಮಾಡುವ ರಾಸಾಯನಿಕ ಪುಡಿಗಳಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
4)ಹಾಲು ಹಿಂಡುವ ವ್ಯಕ್ತಿ ಆರೋಗ್ಯವಂತನಾಗಿರಬೇಕು. ಕೆಲಸಗಾರರು ಹಾಲು ಕರೆಯುವಾಗ ಸೀನುವುದು, ಕೆಮ್ಮುವುದು, ಉಗುಳುವುದು,, ತಂಬಾಕು, ಗುಟ್ಕಾ ಸೇವನೆ ಮತ್ತು ಧೂಮಪಾನ ಇತ್ಯಾದಿ ಮಾಡಬಾರದು.
5)ಆಕಳ ಮನೆ ಮತ್ತು ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು.
6)ಹಾಲು ಹಿಂಡುವಾಗ ಶುಧ್ಧವಾದ ನೀರಿನಿಂದ ಕೆಚ್ಚಲು ತೊಳೆಯಬೇಕು.
7)ಹಾಲನ್ನು ಕರೆದ ನಂತರ ತಡಮಾಡದೆ ಮಾರಾಟ ಮಾದಬೇಕು ಅಥವಾ ಶೈತ್ಯಾಗಾರದಲ್ಲಿ ಇಡಬೇಕು.