Thursday, September 19, 2024

Bele vime parihara: ರಾಜ್ಯದಲ್ಲೇ ಅತಿಹೆಚ್ಚು ಬೆಳೆವಿಮೆ ಪರಿಹಾರ ಈ ಜಿಲ್ಲೆಯ ರೈತರಿಗೆ !!!ಯಾವ ಜಿಲ್ಲೆ? ಎಷ್ಟು ರೈತರಿಗೆ ಬೆಳೆವಿಮೆ ಪರಿಹಾರ ಘೋಷಣೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ….

Bele vime parihara: ರಾಜ್ಯದಲ್ಲೇ ಅತಿಹೆಚ್ಚು ಬೆಳೆವಿಮೆ ಪರಿಹಾರ ಈ ಜಿಲ್ಲೆಯ ರೈತರಿಗೆ !!!
ಯಾವ ಜಿಲ್ಲೆ? ಎಷ್ಟು ರೈತರಿಗೆ ಬೆಳೆವಿಮೆ ಪರಿಹಾರ ಘೋಷಣೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ….

ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಅಲ್ಲಿಯ ಹವಾಗುಣ, ಮಣ್ಣಿನ ಗುಣಧರ್ಮ, ಮಳೆ ಪ್ರಮಾಣ ಹಾಗೂ ಇನ್ನಿತರ ವ್ಯವಸಾಯ ಸ್ಥಿತಿಗಳನ್ನು ಆಧರಿಸಿ, ವಿವಿಧ ವಲಯಗಳನ್ನು ವಿಂಗಡಿಸಲಾಗಿದೆ. ಈ ಒಂದು ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯು ವಲಯ 8 ಮತ್ತು ವಲಯ 9 ರಲ್ಲಿ ಗುರುತಿಸಿಕೊಂಡಿದೆ.

ಉತ್ತರದ ಅರೆಮಲೆನಾಡು ಪ್ರದೇಶವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಿಂದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನವರೆಗೂ ಹರಡಿರುವ ಕಡಿಮೆ ಅಗಲದ ಪಟ್ಟಿಯಾಗಿದ್ದು, 12.11 ಲಕ್ಷ ಹೆಕ್ಟೇರಿನ ಒಟ್ಟು ವಿಸ್ತೀರ್ಣ ಮತ್ತು 9.45 ಲಕ್ಷ ವಿಸ್ತೀರ್ಣ ಸಾಗುವಳಿ ಪ್ರದೇಶ ಹೊಂದಿದೆ.ಇದರಲ್ಲಿ 0.82 ಲಕ್ಷ ಹೆಕ್ಟೇರು ಜಮೀನು ನೀರಾವರಿ ಒಳಪಟ್ಟಿದೆ. ಈ ಪ್ರದೇಶದಲ್ಲಿ ಹಲವು ಬಗೆಯ ಸಮ್ಮಿಶ್ರಿತ ಮಣ್ಣು ಕಂಡು ಬರುತ್ತದೆ.

ಈ ವರ್ಷ ಮಳೆ ಅಭಾವಕ್ಕೆ ಕಾರಣ ತಿಳಿಸಿದ ಹವಾಮಾನ ಇಲಾಖೆ:

ದಕ್ಷಿಣ ಭಾಗದಲ್ಲಿ ಕೆಂಪು ಮರಳು ಮತ್ತು ಗೋಡು ಮಣ್ಣು ಹೆಚ್ಚಾಗಿದ್ದು, ಅಲ್ಲದೇ ಅಳವಾದ ಕಪ್ಪು ಮಣ್ಣು, ಜಲ್ಲಿ ಮಣ್ಣು ಹಾಗೂ ಕೆಂಪು -ಕಪ್ಪು ಸಮ್ಮಿಶ್ರಿತ ಮಣ್ಣು ಸಹ ಕಂಡು ಬರುತ್ತದೆ. ಉತ್ತರ ಭಾಗದಲ್ಲಿ ಸಾಧಾರಣ ಅಳದ ಕಪ್ಪು ಜೇಡಿ, ಕೆಂಪು ಮರಳು ಮಿಶ್ರಿತಗೋಡು ಕಾಣಬರುತ್ತದೆ.

ಈ ಭಾಗದ ನೈಋತ್ಯ ಮತ್ತು ಈಶಾನ್ಯ ಮಾರುತಗಳಿಂದಲೂ ಮಳೆ ಪಡೆಯುತ್ತದೆ. ಈ ಪ್ರಾಂತ್ಯದಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ 619 ದಿಂದ 1303 ಮಿ.ಮೀ. ಇರುತ್ತದೆ. ಶೇ. 84ರಷ್ಟು ಮಳೆ ಮೇ ನಿಂದ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಬೀಳುತ್ತದೆ. ಉತ್ತಮ ಮಳೆ ಹಂಚಿಕೆಯಿಂದಾಗಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲೂ ಬೆಳೆ ಬೆಳೆಯಬಹುದಾಗಿದೆ.

ಆದರೆ ಈ ವರ್ಷ ರಾಜ್ಯದಲ್ಲಿ ಅತೀಯಾದ ಮಳೆ ಕೊರತೆಯಿಂದ ಹಾವೇರಿ ಜಿಲ್ಲೆಯಲ್ಲಿ ರೈತರ ಜೀವನ ಬಹಳ ಕಷ್ಟಕರವಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಹೆಚ್ಚು ಬೆಳೆ ವಿಮೆ ಮಾಡಿಸಿರುವ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯು ಒಂದು.

Crop Loss Ground Truthing Survey: ಬರ ಪರಿಸ್ಥಿತಿ ಸಮೀಕ್ಷೆ ಆರಂಭ:

ಹಾವೇರಿ: ಜನತಾ ದರ್ಶನ ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಜನತಾ ದರ್ಶನದಲ್ಲಿ ಬಹಳಷ್ಟು ಜನರು ಅಹವಾಲು ನೀಡಿದ್ದಾರೆ. ಅದರಲ್ಲಿ ಪರಿಹಾರದ ಬಗ್ಗೆಯೆ ಅರ್ಜಿಯನ್ನು ನೀಡಿದ್ದಾರೆ.


ರಾಜ್ಯಾದಲ್ಲಿಯೇ ಹಾವೇರಿ ಜಿಲ್ಲೆಗೆ ಅತಿ ಹೆಚ್ಚು ಬೆಳೆವಿಮೆ ಪರಿಹಾರ ಘೋಷಣೆಯಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯ ಅರ್ಜಿಯೆ ಮೊದಲು ಪ್ರೊಸೆಸ್ ಆಗಿದೆ. ಇದಕ್ಕೆ ನಮ್ಮ ಮೂರು ಇಲಾಖೆಯ ಅಧಿಕಾರಿಗಳ ಕೆಲಸವು ಕಾರಣ. ಜಿಲ್ಲೆಯ ರೈತರಿಗೆ ಈ ಸುದ್ದಿ ಹೋಗಬೇಕಾಗಿದೆ. ಎಲ್ಲಿ ನಮಗೆ ಪರಿಹಾರ ಸಿಗುತ್ತೊ ಇಲ್ಲೊ ಎಂಬ ಭಯವಿತ್ತು.ಆದರೆ ರೈತರಿಗೆ ಶುಭಸುದ್ದಿ ದೊರೆತಿದೆ ಎಂದು ತಿಳಿಸಿದರು.

ಮೆಕ್ಕೆಜೋಳ,ಶೇಂಗಾ,ಹತ್ತಿ ಬೆಳೆಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ. ಮೂರು ತಾಲೂಕುಗಳನ್ನ ಬರಪೀಡಿತ ತಾಲೂಕು ಘೋಷಣೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗಿದೆ. ಜಿಲ್ಲೆಯ 2,35,174 ರೈತರಿಗೆ ಬೆಳೆವಿಮೆ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿರುತ್ತಾರೆ.

ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!

ಕೃಷಿ ಜಿಲ್ಲೆಯ ಪ್ರಮುಖ ಉದ್ಯ್ದೊಗವಾಗಿದ್ದು, ಜಿಲ್ಲೆಯ ಭೌಗೋಳಿಕ ಪ್ರದೇಶದ 4,85,000 ಹೆಕ್ಟೇರ್ ಪ್ರದೇಶದಲ್ಲಿ 3,60,030 ಹೆಕ್ಟೇರ್ ಕೃಷಿ ಚಟುವಟಿಕೆ ಒಳಗೊಂಡಿದೆ,.ಇಲ್ಲಿ ಜೋಳ, ಹತ್ತಿ, ಅಕ್ಕಿ, ಮೆಣಸಿನಕಾಯಿ, ನೆಲಗಡಲೆ, ಸೂರ್ಯಕಾಂತಿ, ಕಬ್ಬು ಮತ್ತು ಎಣ್ಣೆಕಾಳುಗಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ.

ಹಿಂದಿನ ವರ್ಷದ ಬೆಳೆ ವಿಮೆ ಪರಿಹಾರ ಚೆಕ್ ಮಾಡುವ ಲಿಂಕ್

https://landrecords.karnataka.gov.in/PariharaPayment/

ವರದಾ, ಕುಮಧ್ವತಿ, ಧರ್ಮಾ ಮತ್ತು ತುಂಗಭದ್ರಾ ಜಿಲ್ಲೆಯ ಪ್ರಮುಖ ನದಿಗಳಾಗಿವೆ. ಮರಳು ಮತ್ತು ಕಟ್ಟಡದ ಕಲ್ಲುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖನಿಜ ಅದಿರುಗಳು ಜಿಲ್ಲೆಯಲ್ಲಿ ಕಂಡುಬರುವುದಿಲ್ಲ.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.
Mushroom Cultivation Training: ಎರಡು ದಿನದ ಅಣಬೆ ಕೃಷಿ ತರಬೇತಿ ಜೊತೆಗೆ ಉಚಿತ ಅಣಬೆ ಬೀಜ ಮತ್ತು ಪ್ರೋಟಿಂಗ್ ಬ್ಯಾಗ್ ವಿತರಣೆ
ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:
ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:

ಇತ್ತೀಚಿನ ಸುದ್ದಿಗಳು

Related Articles