MGNREGA ಯೋಜನೆಯಡಿ ಈ ಕಟ್ಟಡ ನಿರ್ಮಾಣಕ್ಕೆ 57,000 ರೂ ಧನಸಹಾಯ!!
ಯೋಜನೆ ಉದ್ದೇಶವೇನು? ಅರ್ಜಿ ಎಲ್ಲಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ….
MGNREGA ಯ ದೊಡ್ಡ ಉದ್ದೇಶವೆಂದರೆ ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯೋಗದ ಗುರಿಯನ್ನು ಸಾಧಿಸುವುದು ಈ ಯೋಜನೆ ಗುರಿಯಾಗಿರುತ್ತದೆ.
ಗ್ರಾಮೀಣ ಭಾರತದಲ್ಲಿ ವಾಸಿಸುವ ಬಡ ಮತ್ತು ದುರ್ಬಲ ಆದಾಯದ ಗುಂಪಿನ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಒದಗಿಸುವುದು ಇದರಿಂದ ಅವರು ತಮ್ಮ ಜೀವನೋಪಾಯವನ್ನು ನಡೆಸುವುದಾಗಿರುತ್ತದೆ.
ಅಭಿವೃದ್ಧಿ ಕಾರ್ಯಗಳ ಜೊತೆಗೆ ಆರ್ಥಿಕ ಬಲವನ್ನು ಒದಗಿಸುವುದು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಒದಗಿಸುವುದರಿಂದ ಉದ್ಯೋಗಕ್ಕಾಗಿ ಬೇರೆ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು ಕೂಡಾ ಈ ಯೊಜನೆ ಒಂದು ಉದ್ದೇಶವಾಗಿರುತ್ತದೆ.
ಜೀವನೋಪಾಯವನ್ನು ಬಲಪಡಿಸಲು ಮತ್ತು ಬಡ ಕುಟುಂಬಗಳ ಆದಾಯವನ್ನು ಹೆಚ್ಚಿಸಲು ಜನಸಾಮಾನ್ಯರಿಗೆ ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡುವುದು.
MNREGA ಯೋಜನೆಯ ಉದ್ದೇಶವು ಸಮಾಜದ ದುರ್ಬಲ ವರ್ಗವನ್ನು ಸಹ ಮುಖ್ಯವಾಹಿನಿಗೆ ಸೇರಿಸುವುದು.
ಭಾರತದಲ್ಲಿ ಪಂಚಾಯತ್ ರಾಜ್ ಸ್ಥಾಪನೆಗಳನ್ನು ಮತ್ತಷ್ಟು ಬಲಪಡಿಸುವುದು. ಈ ಯೋಜನೆ ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಯಲ್ಲಿ ಉಪಕಸಬು ಮಾಡುವ ಆಸಕ್ತರಿಗೆ ಕೂಡಾ ವಿಶೇಷ ಯೋಜನೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ/ಆಡು ಸಾಕಾಣಿಕೆ ಮಾಡುತ್ತಿರುವವರಿಗೆ ಸುಸರ್ಜಿತ ಕಟ್ಟಡ ನಿರ್ಮಿಸಲು ಅರ್ಥಿಕವಾಗಿ ನೆರವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(MGNRGE scheme)ಪಡೆಯಬವುದಾಗಿದೆ.
ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ ಸಾಕಾಣಿಕೆ ಮಾಡುತ್ತಿರುವವರಿಗೆ ಸೂಕ್ತ ವ್ಯವಸ್ಥಿತ ಶೆಡ್ ನಿರ್ಮಾಣ ಮಾಡಿಕೊಳ್ಳಲು ಧನಸಹಾಯವನ್ನು ಈ ಯೋಜನೆಯಡಿ ಪಡೆಯಬುದಾಗಿದೆ.
ಕೃಷಿ ಸಂಬಂಧಿಸಿದ ಇತರ ಯೋಜನೆಗಳು
ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ
ಇದನ್ನೂ ಓದಿ: ಕೃಷಿ ಸಂಬಂದಿಸಿದ ಉದ್ಯಮಕ್ಕೆ, ತರಬೇತಿ ಜೊತೆಗೆ ಆರ್ಥಿಕ ಸಹಾಯಧನ
ಇದನ್ನೂ ಓದಿ: ಬೆಳೆ ವಿಮೆ ಮತ್ತು ಪರಿಹಾರ ಪಡೆಯಲು ತಪ್ಪದೇ ಈ ಕೆಲಸ ಮಾಡಿ
ಕಳೆದ ವರ್ಷಗಳಲ್ಲಿ ಅಂದರೆ ಹಿಂದಿನ ದಿನಗಳಲ್ಲಿ ಈ ಸಹಾಯಧನದ ಮೊತ್ತ ರೂ. 43,000 ಅಗಿತ್ತು ಕಳೆದ ವರ್ಷ ಇದನ್ನು ಈ ಮೊತ್ತವನ್ನು 57,000 ರೂ ಹೆಚ್ಚಿಸಲಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾನುವಾರು ಶೆಡ್’ನ ಸಹಾಯಧನದ ಮೊತ್ತವು ರೂ. 57,000 ರೂ ಅಗಿರುತ್ತದೆ.
ಈ ಆದೇಶದ್ವಯ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ ಸಾಮಾನ್ಯ ವರ್ಗದವರಿಗೆ ಸಮಾನ ಸಹಾಯಧನ ನೀಡಲಾಗುತ್ತಿದೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಸಹಾಯಧನ ದೊರಕುವಂತೆ ಮಾಡಲಾಗಿದೆ.
ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದವರು ಹಾಗೂ 4 ಅಥವಾ 4ಕ್ಕಿಂತ ಹೆಚ್ಚು ಜಾನುವಾರು ಸಾಕಿದ ಪ್ರತಿಯೊಬ್ಬರೂ ಜಾನುವಾರು ಶೆಡ್ ನಿರ್ಮಿಸಿಕೊಂಡು ರೂ. 57,000 ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳು ಇರುವ ಕುರಿತು ದೃಢೀಕರಣ ಪತ್ರ ಪಡೆದ್ಲು. ಈ ದಾಖಲೆಗಳಿರುವ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು.
ಈ ಸ್ವೀಕೃತ ಅರ್ಜಿಯನ್ನು ಗ್ರಾಮ ಪಂಚಾಯತಿಯವರು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಮೇಲಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿ ಅನುಷ್ಠಾನಗೊಳ್ಳುತ್ತದೆ.
ಜಾನುವಾರು ಶೆಡ್ ಅಳತೆ ಮತ್ತು ಮೊತ್ತದ ಬಳಕೆ:
ನರೇಗಾ ಯೋಜನೆಯಡಿ ನಿರ್ಮಿಸಲಾಗುವ ಜಾನುವಾರು ಶೆಡ್ 10 ಅಡಿ ಅಗಲ, 18 ಅಡಿ ಉದ್ದ ಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಗೋದಲಿ/ಮೇವುತೊಟ್ಟಿ ಒಳಗೊಂಡಿರಬೇಕು. ಜೊತೆಗೆ ಜಾನುವಾರುಗಳಿಗೆ ಗಾಳಿ ಆಡಲು ಜಾಗವಿರುವಂತೆ ಶೆಡ್ ಗೆ ಶೀಟ್ಗಳನ್ನು ಅಳವಡಿಸಬೇಕು. ಜಾನುವಾರು ನಿರ್ಮಾಣಕ್ಕೆ ನರೇಗಾದಡಿ ಫಲಾನುಭವಿಗಳಿಗೆ ಸಿಗುವ ಟ್ಟೂ 57 ಸಾವಿರ ಸಹಾಯಧನದಲ್ಲಿ 10,556 ರೂ. ಕೂಲಿ ಹಾಗೂ 46,444 ರೂ. ಸಾಮಗ್ರಿ ಮೊತ್ತ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದಾಗಿರುತ್ತದೆ.