Thursday, September 19, 2024

Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

ಆತ್ಮೀಯ ರೈತ ಬಾಂದವರೇ ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಒಂದೇ ಬೆಳೆಯ ಮೇಲೆ ಅವಲಂಬನೆಯಾಗಿದ್ದರೆ ಕೃಷಿಯಲ್ಲಿ ಖುಷಿ ಕಾಣಲು ಸಾಧ್ಯವಿಲ್ಲ. ಕೃಷಿಯಲ್ಲಿ ಲಾಭ ಪಡೆಯಬೇಕಾದರೆ, ವೈವಿಧ್ಯಮಯವಾಗಿ ಬೆಳೆ ಬೆಳೆಯಬೇಕಾಗುತ್ತದೆ. ಹಾಗೂ ವರ್ಷಪೂರ್ತಿ ಆದಾಯ ಬರುವ ರೀತಿ ಕೃಷಿಯಲ್ಲಿ ತೊಡಗಬೇಕಾಗುತ್ತದೆ.

ಆ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಆಸಕ್ತಿಯಿರುವ ರೈತರಿಗೆ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ( RKVY) ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಯೋಜನೆಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಪದ್ದತಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತೆ, ಅಗ್ಗಿದ್ದರೆ ಸಮಗ್ರ ಕೃಷಿ ಪದ್ಧತಿಯೆಂದರೆ ಏನು? ಅದರಲ್ಲಿ ಯಾವೆಲ್ಲ ಘಟಕಗಳಿವೆ? ಸರ್ಕಾರದಿಂದ ಯಾವ ಘಟಕಕ್ಕೆ ಎಷ್ಟು ಸಹಾಯಧನ ನಿಗಧಿಪಡಿಸಲಾಗಿದೆ ಅಂತ ಸಂಪೂರ್ಣ ವಿವರ ಈ ಒಂದು ಲೇಖನದಲ್ಲಿ

ಇದನ್ನೂ ಓದಿ:ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಭದ್ರತೆಯನ್ನು ಸಬಲೀಕರಣಗೊಳಿಸುವುದು

ಸಮಗ್ರ ಕೃಷಿ ಪದ್ಧತಿಯೆಂದರೆ ಎರಡು ಅಥವಾ ಹೆಚ್ಚಿನ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪರಸ್ಪರ ಅವಲಂಬನೆಯೊಂದಿಗೆ ಅಳವಡಿಸಿಕೊಳ್ಳುವುದು ಅಥವಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು, ರಾಜ್ಯದ ರೈತರು ಅನೇಕ ಶತಮಾನಗಳಿಂದ ವರ್ಷಪೂರ್ತಿ ಆದಾಯ ಮತ್ತು ಹೆಚ್ಚುವರಿ ಉದ್ಯೋಗಾವಕಾಶಗಳಂತಹ ಅನುಕೂಲಗಳಿಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸುತ್ತಿದ್ದಾರೆ.

ಇದು ನೈಸರ್ಗಿಕ ತತ್ತ್ವವನ್ನು ಒಳಗೊಂಡಿರುವುದಲ್ಲದೆ, ಇದರ ಮೂಲಕ ಕೃಷಿ ಬೆಳೆಗಳ ಸಾಗುವಳಿ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳಾದ ಜಾನುವಾರು, ಕೋಳಿ, ಮೀನುಗಾರಿಕೆ, ರೇಷ್ಮೆ ಇವುಗಳನ್ನು ಒಗ್ಗೂಡಿಸಿ ಅಧಿಕ ಆದಾಯ ಪಡೆಯಬಹುದಾಗಿರುತ್ತದೆ. ಸಮಗ್ರ ಕೃಷಿ ಪದ್ಧತಿಯಲ್ಲಿ ವಿಭಿನ್ನ ಚಟುವಟಿಕೆಗಳನ್ನು

ಸಮತೋಲನದಲ್ಲಿ ಒಗ್ಗೂಡಿಸಿ ಪ್ರತಿಯೊಂದು ಘಟಕವು ಪೂರಕವಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಲು ಹಾಗೂ ಒಂದರ ತ್ಯಾಜ್ಯವನ್ನು ಇನ್ನೊಂದರ ಸಂಪನ್ಮೂಲವಾಗಿ ಮರುಬಳಕೆ ಮಾಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿವಿಧ ಘಟಕಗಳು ಉತ್ತಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು, ನೀರಿನ ಒಳಹರಿವಿನ ಗರಿಷ್ಠ ಬಳಕೆಗೆ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತವೆ.

ಸಮಗ್ರ ಕೃಷಿ ಪದ್ಧತಿ ಶ್ರಮದಾಯಕವಾಗಿದ್ದರೂ, ರೈತರ ಕುಟುಂಬಗಳುವರ್ಷದುದ್ದಕ್ಕೂ ಆದಾಯ ಪಡೆಯುವಂತೆತೊಡಗಿಸಿಕೊಳ್ಳಲು ಸಹಾಯಕವಾಗುತ್ತವೆ. ಸಮಗ್ರ ಕೃಷಿ ಪದ್ಧತಿಯನ್ನು ಕ್ಲಸ್ಟರ್ (ಗುಚ್ಛ) ಮಾದರಿಯಲ್ಲಿ ಅನುಷ್ಠಾನ ಮಾಡುವುದರಿಂದ, ಸಂಪನ್ಮೂಲಗಳ ಸದ್ಬಳಕೆ ಮತ್ತು ಸಾಮೂಹಿಕ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತೇಜಿಸಬಹುದಾಗಿರುತ್ತದೆ. ಇದರಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಿದ್ದು, ಸುಸ್ಥಿರ ಆಧಾರದ ಮೇಲೆ ಆದಾಯವನ್ನು ಹೆಚ್ಚಿಸುತ್ತದೆ.

ಸಮಗ್ರ ಕೃಷಿ ಪದ್ಧತಿಯು ಏಕ ಬೆಳಪದ್ಮತಿ ವಿಧಾನದಿಂದ ಬಹು ಬೆಳಪದ್ಧತಿ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆ. ಕೃಷಿ ಪದ್ಧತಿಗಳಲ್ಲಿ ಜಾನುವಾರು, ಬೆಳೆ ಉತ್ಪಾದನೆ, ತೋಟಗಾರಿಕೆ, ಇತರ ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳು:

ಯೋಜನೆಯ ಗುರಿ:

2023-24 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ಧತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ, ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಮುಖ್ಯ ಗುರಿಯಾಗಿರುತ್ತದೆ.

ಉದ್ದೇಶಗಳು:

  1. ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಸಿದ್ಧಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.
  2. ಉತ್ತಮ ಬೇಸಾಯ ಪದ್ಧತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು,
  3. ರೈತರ ಆದಾರ ಹೆಚ್ಚಿಸಲು ಕೃಷಿ ಜೊತೆಗೆ ಇತರ ಆದಾಯ ಬರುವ ಉದ್ಯಮಗಳನ್ನು ಅಳವಡಿಸಲು ಪ್ರೇರೇಪಿಸುವುದು.

ಈ ಯೋಜನೆ ಆರ್ಥಿಕ ವೆಚ್ಚ:

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಮಗ್ರ ಕೃಷಿ ಮಾದರಿ ಸ್ಥಾಪಿಸಲು ಒಟ್ಟಾರೆ 72.736 ಕೋಟಿ ರೂಗಳ ಅನುದಾನ ಅನುಮೋದನೆಯಾಗಿದ್ದು,
ರಾಜ್ಯಾದ್ಯಂತ ಮಳೆಯಾಶ್ರಿತ / ನೀರಾವರಿ ಮಾದರಿಗಳನ್ನು ಅಳವಡಿಸಲಾಗುವುದು.

2023-24 ನೇ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 4000 ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲು ರೂ. 20,00 ಕೋಟೆಗಳ ಕಾರ್ಯಕ್ರಮ ರೂಪಿಸಲಾಗಿದೆ.

2023-24 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಮತಿ ಮಾದರಿಗಳನ್ನು ಅಳವಡಿಸಲು ಅವಕಾಶ ಕಲ್ಪಿಸಿದ್ದು, ರೈತರ ಆಸಕ್ತಿಯನ್ನು ಪರಿಗಣಿಸಿ ಬೇಡಿಕೆ ಇರುವ ಪಂಚಾಯಿತಿಯಲ್ಲಿ ಈಗಾಗಲೇ (2021-22 ಹಾಗೂ 2022-23 ನೇ ಸಾಲಿನಲ್ಲಿ) ಅನುಷ್ಠಾನ ಮಾಡಿದ್ದರೂ ಸಹ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಅನುಷ್ಠಾನ ಮಾಡದಿರುವ ಗ್ರಾಮ/ ಗ್ರಾಮ ಪಂಚಾಯಿತಿಗಳಲ್ಲಿ ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತದೆ.

ಯೋಜನೆಯ ವಿವರ ಹಾಗೂ ಅನುಷ್ಠಾನ:

ಯೋಜನೆಯ ವಿವರ ಹಾಗೂ ಅನುಷ್ಠಾನ ಮಾರ್ಗಸೂಚಿ ವಿವರ ಹೀಗಿದೆ:

ಕರ್ನಾಟಕ ರಾಜ್ಯದಲ್ಲಿ 6027 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ ಮಳೆ ಪ್ರಮಾಣದ ಆಧಾರದಲ್ಲಿ 4100 ಗ್ರಾಮ ಪಂಚಾಯಿತಿಗಳನ್ನು ಮಳೆಯಾಶ್ರಿತ ಪ್ರದೇಶಗಳಿಗಾಗಿ ಹಾಗೂ 1927 ಪಂಚಾಯಿತಿಗಳನ್ನು ನೀರಾವರಿ ಮಾದರಿಗಳಾಗಿ ಅನುಷ್ಠಾನಗೊಳಿಸಲು

ಯೋಜಿಸಲಾಗಿರುತ್ತದೆ. ಈ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಸ್ಥಾಪಿಸಲು ಯೋಜಿಸಿದೆ

ಪುಸಕ್ತ ವರ್ಷದಲ್ಲಿ ಅವಶ್ಯಕತೆ ಹಾಗೂ ಸದರಿ ಪ್ರದೇಶದ ಕೃಷಿ ಪದ್ಧತಿಯನ್ನಾಧರಿಸಿ ಮಳೆಯಾಶ್ರಿತ ಅಥವಾ ನೀರಾವರಿ ಸಮಗ್ರ ಕೃಷಿ ಪದ್ಮತಿಗಳಾಗಿ ಮಾದರಿಗಳನ್ನು ಅನುಷ್ಠಾನ ಮಾಡಹುದಾಗಿದ್ದು, ಸದರಿ ಮಾದರಿಗಳನ್ನು ಇತರೆ ರೈತರಿಗೆ ಕಲಿಕಾ ಕ್ಷೇತ್ರವಾಗಿ ಸ್ಥಾಪಿಸಲು ಯೋಜಿಸಲಾಗಿದೆ.

ಫಲಾನುಭವಿ ಆಯ್ಕೆ ಹೇಗೆ ಮಾಡಲಾಗುತ್ತದೆ:

  1. ಪ್ರತಿ ಪಂಚಾಯಿತಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾದರಿಯಂತೆ ಪ್ರತಿ ಹೋಬಳಿಯಲ್ಲಿ 8-10 ಸಮಗ್ರ ಕೃಷಿ ಪದ್ಧತಿ ತಾಕುಗಳನ್ನು ಆಯಾ ಜಿಲ್ಲೆಗಳ ಮಳೆಯಾಶ್ರಿತ ಪ್ರದೇಶ ಅಥವಾ ನೀರಾವರಿ ಪ್ರದೇಶಕ್ಕನುಗುಣವಾಗಿ ಸ್ಥಾಪಿಸಉವುದು.
    ಕಾರ್ಯಕ್ರಮ ಅನುಷ್ಠಾನ ಮಾಡುವುದು ಹಾಗೂ ತದನಂತರ ಬೇಡಿಕೆ ಇರುವ ಪಂಚಾಯಿತಿಗಳಲ್ಲಿ ಒಂದಕ್ಕಿಂತ ಹೆಚ್ಚು ಮಾದರಿಯನ್ನು ಅನುಷ್ಠಾನ ಮಾಡುಲಾಗುತ್ತದೆ.
  2. ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ಕನಿಷ್ಠ 1 ಎಕರೆಯಿಂದ ಗರಿಷ್ಠ 1 ಹೆಕ್ಟೇರ್‍ – ಪ್ರದೇಶದಲ್ಲಿ ಏರ್ಪಡಿಸಲಾಗುತ್ತದೆ.
  3. ರೈತ ಸಂಪರ್ಕ ಕೇಂದ್ರವಾರು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ತಮ್ಮ ವ್ಯಾಪ್ತಿಯ ಅನುಷ್ಠಾನ ಮಾಡುವ ರೈತರ ಪಟ್ಟಿಯನ್ನು ಸಿದ್ಧಪಡಿಸಿ. ಫಲಾನುಭವಿಯು ಆಸಕ್ತ ಪ್ರಗತಿ ಪರ ರೈತನಾಗಿದ್ದು ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಶೇ 50 ರಷ್ಟು ವಂತಿಕೆ ಭರಿಸಲು ಸಿದ್ಧನಾಗಿರಬೇಕು.
    ಇತರ ರೈತರು ಅಳವಡಿಸಲು ಸೂಕ್ತವಾಗುವಂತೆ ಮಾದರಿಯಾಗಿ ಸಮಗ್ರ ಕೃಷಿ ಪದ್ಧತಿಯ ತಾಕನ್ನು ರೂಪಿಸುವ ಮನೋಭಾವನೆ ಇರುವ ರೈತರನ್ನು ಆಯ್ಕೆ ಮಾಡಲಾಗುತ್ತದೆ.
  4. ನಿಯಮಾನುಸಾರ ಪರಿಶಿಷ್ಟ ಜಾತಿ (17.15%), ಪರಿಶಿಷ್ಟ ಪಂಗಡ (6.95%) ರಂತ ಆಯ್ಕೆ ಮಾಡುವುದು. ಮಹಿಳೆಯರಿಗೆ (33%) ರಷ್ಟು, ಅಲ್ಪ ಸಂಖ್ಯಾತರಿಗೆ (15%) ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ , ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬವುದು.

ಬೇಕಾಗುವ ದಾಖಲಾತಿಗಳು ಈ ಕೆಳಗಿನಂತಿವೆ:

  1. ಆಧಾರ್ ಕಾರ್ಡ
  2. ಬ್ಯಾಂಕ್ ಪಾಸ್ ಬುಕ್
  3. ಪೋಟೋ 4.ಜಮೀನು ರೇಕಾರ್ಡ.
    ಮತ್ತು ಇಲಾಖೆ ಅಧಿಕಾರಿಗಳು ಕೆಳುವ ಅವಶ್ಯಕ ದಾಖಲಾತಿಗಳು

ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದ ಸಮಗ್ರ ಕೃಷಿ ಪದ್ದತಿಯ ಮಾದರಿ( 1 ಹೇ)ಗೆ ಅಳವಡಿಸಲು ಘಟಕವಾರು ವಿವರ ಈ ಕೇಳಗೆ ನೀಡಲಾಗಿದೆ.
ಘಟಕವಾರು ವಿವರ:

ಇತ್ತೀಚಿನ ಸುದ್ದಿಗಳು

Related Articles