ನೀರಿನ ಸಂರಕ್ಷಣೆ ಹಾಗೂ ತೇವಾಂಶ ಹಾರಿಹೋಗದಂತೆ ನೋಡಿಕೊಳ್ಳಲು ಪ್ಲಾಸ್ಟಿಕ್ ಮಲ್ಚಿಂಗ್ (ಹೋದಿಕೆ)ಮಾಡಲಾಗುತ್ತದೆ. ಗಿಡದ ಹರಡುವಿಕೆ ಅನುಸರಿಸಿ ಮಲ್ಚಿಂಗ್ ಮಾಡುವ ಪದ್ದತಿ.
ಅದುಹೇಗೇ?
ಇದಕ್ಕೆ ಗಿಡ ಹರಡುವಿಕೆಯಷ್ಟು ಅಗಲದ ಪ್ಲಾಸ್ಟಿಕ್ ಶೀಟ್ ಅಗತ್ಯ. ಅದರ ಮದ್ಯಭಾಗ ಗುರುತಿಸಿ, ಒಂದು ದಿಕ್ಕಿನಿಂದ ಮದ್ಯಭಾಗದವರೆಗೆ ನೇರವಾಗಿ ಕತ್ತರಿಸಬೇಕು. ಮಧ್ಯದ ಬಿಂದುವಿನಿಂದ ಆರು ಗುರುತು ಮಾಡಿ ನಕ್ಷತ್ರಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ.ಬಳಿಕ ಮರದ ಸುತ್ತಲಿನ ಕಲ್ಲು.ಕಳೆ ತೆಗೆದು ಉಳುಮೆ ಮಾಡಿ, ನೀರು ಚಿಮುಕಿಸಿ. ಇದಾದ ನಂತರ ಪ್ಲಾಸ್ಟಿಕ್ ಶೀಟನ್ನು ಕತ್ತರಿಸಿದ ಭಾಗದಿಂದ ಎಳೆದು ನಕ್ಷತ್ರಭಾಗ ಗಿಡದ ಕಾಂಡವನ್ನು ಸುತ್ತುವರಿಯುವಂತೆ ಜೋಡಿಸಿ.
ಇದನ್ನೂ ಓದಿ:ನರೇಗಾ ಯೋಜನೆಯಡಿ ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳು ಮತ್ತು ಆರ್ಥಿಕ ನೆರವು
ಕತ್ತರಿಸಿದ ಉದ್ದನೆಯ ಭಾಗಕ್ಕೆ ಟೇಪ್ನಿಂದ ಅಂಟಿಸಿ ನಾಲ್ಕು ತುದಿಗಳಲ್ಲಿ ಅರ್ಧ ವೃತ್ತಾಕಾರದಲ್ಲಿ ಗೀರೆಳೆದು ರಂಧ್ರ ಮಾಡಿ. ಗಾಳಿಗೆ ಹಾರದಂತೆ ಸುತ್ತಲೂ ಮೊಳೆ ಹೊಡೆಯಬಹುದು.ಇದಕ್ಕೆ ಹನಿ ನೀರಾವರಿ ಅಥವಾ ಇಂದಿನ ಹೊಸ ವಿಧಾನವಾದ ಭೂಮಿಯ ಒಳಗಿನಿಂದ ನೀಡಲಾಗುವ ನೀರಾವರಿ ವಿಧಾನ ಸೂಕ್ತ.
ಅಲ್ಪಾವಧಿ ಬೆಳೆಗಳಿಗೆ ಸಾಲುಗಳ ಅಂತರ ಹಾಗೂ ಗಿಡಗಳ ನಡುವಿನ ಅಂತರಗಳ ಅಳತೆ ತೆಗೆಯಬೇಕು. ಈ ಅಳತೆಗಳಿಗೆ ತಕ್ಕಂತ ಟಾನ್ ಮಾದರಿಯಲ್ಲಿ ಮಡಚಿ ಮಧ್ಯ ವೃತ್ತಾಕಾರದ ರಂಧ್ರ ಮಾಡಬೇಕು.
ಒಂದು ತುದಿಯನ್ನು ಸಾಲಿನ ಪ್ರಾರಂಭದಲ್ಲಿ ಮಣ್ಣಿನೊಳಗೆ ಸೇರಿಸಿ ಹಾರಿಹೋಗದಂತೆ ಭದ್ರಪಡಿಸಿ, ಪ್ಲಾಸ್ಟಿಕ್ ಮಲ್ಚ್ ಮಾಡುವ ಮೊದಲು ಮಡಿ ಮಾಡಿಕೊಂಡಿರಬೇಕು.ಆ ಮೇಲೆ ಪ್ಲಾಸ್ಟಿಕ್ ಶೀಟ್ ಹಾಸಿ,ರಂದ್ರ ಬಂದ ಕಡೆ ಬೀಜಗಳನ್ನು ಬಿತ್ತಿರಿ. ಫಸಲು ಪಡೆದ ಮೇಲೆ ಗಿಡಗಳನ್ನು ಬುಡಕ್ಕೆ ಕತ್ತರಿಸಿ, ಮಲ್ಚಿಂಗ್ ಮಾಡಿದ ಶೀಟನ್ನು ಮತ್ತೋಮ್ಮೆ ಬಳಸಲು ತೆಗೆದಿಟ್ಟುಕೊಳ್ಳಬಹುದು.
ಇದನ್ನೂ ಓದಿ:ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ 1:3 ಅರ್ಹರಾದ ಅಭ್ಯರ್ಥಿಗಳ ಪಟ್ಟಿ
ಸೊಲಾರೈಸೇಶನ್ :
ಮಣ್ಣನ್ನು ರೋಗಕಾರಕ ಜೀವಿಗಳಿಂದ ಮುಕ್ತಗೊಳಿಸಲು ಮಣ್ಣಿನ ನೇರವಾಗಿ ಮಲ್ಚಿಂಗ್ ಮಾಡುವ ವಿಧಾನವೇ ಸೊಲಾರೈಸೇಶನ್ ನರ್ಸರಿ ಮಾಡುವವರು ಈ ಕ್ರಮವನ್ನು ಅನುಸರಿಸಿ ತಮ್ಮ ಗಿಡಗಳಗೆ ಪ್ರಾರಂಂದಲ್ಲಿಯೇ ರೋಗ ಬಾರದಂತೆ ನೋಡಿಕೊಳ್ಳತ್ತಾರೆ.ಈ ವಿಧಾನದ ಪ್ರಕಾರ ಮೊದಲು ಮಣ್ಣನ್ನು ಹುಡಿ ಮಾಡಿಕೊಳ್ಳಬೇಕು.ಅದನ್ನು ನರ್ಸರಿಗೆ ಅನುಗುಣವಾಗುವಂತೆ ಮಡಿ ಮಾಡಬೇಕು.ಅದರ ಮೇಲೆ ಬಿಳಿಯ ಪ್ಲಾಸ್ಟಿಕ್ ಶೀಟ್ ಮುಚ್ಚಬೇಕು. ಸುಮಾರು 21 ದಿನಗಳ ಕಾಲ ಗಾಳಿಯಾಡದಂತೆ ನೋಡಿಕೊಳ್ಳುವುದು ಮುಖ್ಯ. ಹೀಗೆ ಮಾಡಿದಾಗ ಮಣ್ಣಿನಲ್ಲಿರುವ ರೋಗಜನಕ ಸೂಕ್ಷ್ಮ ಜೀವಿಗಳು ನಾಶವಾಗಿರುತ್ತವೆ. ಅಂಥ ಮಣ್ಣಿಗೆ ಗೊಬ್ಬರ, ಮರಗಳ ಮಿಶ್ರಣ ಮಾಡಿ ಸಸಿಗಳನ್ನು ನೇಡಬೇಕು. ಬೀಜ ಬಿತ್ತನೆ ಮಾಡಬೇಕು.
ಪ್ರಯೋಜನೆಗಳು:
ಈ ಪದ್ದತಿಯಿಂದ ಆವಿಯಾದ ನೀರು ಪ್ಲಾಸ್ಟಿಕ್ ಶೀಟ್ ಗಳಲ್ಲಿ ಶೇಖರಣೆಯಾಗಿ ಮತ್ತೆ ನೆಲ ಸೇರುತ್ತದೆ. ಇದರಿಂದ ತೇವಾಂಶ ನಷ್ಟವಾಗದು. ನೀರು ನೀಡುವ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ.
ಲೀನಿಯರ್ ಲೋ ಡೆನ್ಸಿಟ್ ಪಾಲಿಥಿನ್ ಅಂದರೆ, ಕಪ್ಪು ಪ್ಲಾಸ್ಟಿಕ್ ಶೀಟ್ ಗಳ ಬಳಕೆಯಿಂದ ಕಳೆ. ಏಳುವುದಿಲ್ಲ. ಕಾರಣ ಸೂರ್ಯನ ಕಿರಣಗಳು ಹಾದು ಹೋಗದೇ ಕಳೆ ಇದ್ದರೂ ಹಸುರಾಗದೇ ಅಲ್ಲಿಯೇ ಕರಗಿಹೋಗುತ್ತದೆ.
ಗಿಡದ ಬೇರಿನ ವ್ಯವಸ್ಥೆ ಚೆನ್ನಾಗಿ ಆಗುತ್ತದೆ. ನೀರು ಮರ/ಗಿಡದ ಸುತ್ತಲೂ ಹರಡಿಕೊಳ್ಳತ್ತದೆ. ಕಾರ್ಬನ ಡೈಯಾಕ್ಸೆಡ್ ಮಿನಿಮಯ ಚೆನ್ನಾಗಿ ನಡೆಯುತ್ತದೆ.
ರಾತ್ರಿ ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಗಲು ತೀವ್ರತೆ ಹೆಚ್ಚಾಗದಂತೆ ನಿರ್ವಹಿಸುತ್ತದೆ.
ಕೆಲವು ಬೆಳೆಗಳಿಗೆ ಲೋ ಡೆಸ್ಸಿಟಿ ಪಾಲಿಥಿನ್ ಬಳಕೆಯೂ ಇದೆ. ಅಂದರೆ ಬಿಳಿ ಪಾರದರ್ಶಕ ಪ್ಲಾಸ್ಟಿಕ್ ಶೀಟ್ ಗಳನ್ನು ಬಳಸುತ್ತಾರೆ. ಶೇಂಗಾ, ಮೆಣಸಿನಕಾಯಿ ಮುಂತಾದ ಅಲ್ಪಾವದಿ ಬೆಳೆಗಳಿಗೆ ಬಳಕೆಯಿದೆ.
ಕಾಳುಮೆಣಸು ಬೆಳೆಗೆ ಈ ರೀತಿ ಮಲ್ಚಿಂಗ್ ಮಾಡಿದ್ದರಿಂದ ಇಳುವರಿಯ ಹೆಚ್ಚಳವೊಂದೆ ಅಲ್ಲ, ರೋಗಗಳಿಂದಲೂ ರಕ್ಷಣೆ ದೊರೆತಿದೆ.
ತರಕಾರಿ ಬೆಳೆಗಳಿಗೆ ಸಿಮೆಂಟ್ ಬಣ್ಣದ ಶೀಟ್ ಗಳನ್ನು ಬಳಸಲಗುತ್ತದೆ.
ಪ್ಲಾಸ್ಟಿಕ್ ಮಲ್ಚಿಂಗ ನಿಂದ ಕಳೆ ನಿಯಂತ್ರಣವಾಗುವ ಪ್ರಯುಕ್ತ ಭಯಂಕರ ವಿಷದ ಕಳೆನಾಶಕಗಳನ್ನು ಬಳಸುವ ಅಗತ್ಯ ಉಂಟಾಗದು.