PM kisan E kyc pending list: ಇಲಾಖೆಯಿಂದ ಕೆವೈಸಿ ಬಾಕಿರುವ ರೈತರ ಪಟ್ಟಿ ಬಿಡುಗಡೆ:
ಕೇಂದ್ರ ಸರ್ಕಾರ ಪಿ ಎಂ ಕಿಸಾನ್ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯಗಳಿಸಲು ನೆರವಾಗಲು ಆರ್ಥಿಕ ನೆರವನ್ನು ನೀಡಲಾಗುತ್ತಿದೆ.
ಈ ಯೋಜನೆಯಡಿ ನೋಂದಣಿ ಮಾಡಿರುವ ಫಲಾನಿಭವಿಗಳಲ್ಲಿ ಇ -ಕೆವೈಸಿ (E kyc pending) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಾಕಿ ಇರುವುದು ಕಂಡುಬಂದಿರುತ್ತದೆ.
ಆತ್ಮೀಯ ರೈತ ಬಾಂದವರೇ ಕೃಷಿ ಇಲಾಖೆ ಪಿ ಎಂ ಕಿಸಾನ್ ಯೋಜನೆಯನ್ನು ಕೇಂದ್ರ ಸರ್ಕಾರ 2019 ನೇ ಇಸ್ವಿಯಲ್ಲಿ ಜಾರಿಗೊಳ್ಳಿಸಿರುತ್ತದೆ. ಮುಂದುವರೆದು ಈ ಯೋಜನೆಯಡಿ ಫಲಾನುಭವಿಗಳಾದ ರೈತರು ಅರ್ಜಿ ಸಲ್ಲಿಸುವಾಗ ನೀಡಿದ ದಾಖಲೆಗಳನ್ನುಇತ್ತೀಚಿಗೆ ಬದಲಾವಣೆಯಾದಲ್ಲಿ ಇ ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಹಣ ಬರುವುದು ರದ್ದಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
E -kyc pending statistics: ಕೆವೈಸಿ ಬಾಕಿ ಇರುವ ಅಂಕಿ ಅಂಶಗಳು :
ರಾಜ್ಯದಲ್ಲಿ PM kisan ಯೋಜನೆ ನೋಂದಣಿ ಮಾಡಿಕೊಂಡ ರೈತರ ಸಂಖ್ಯೆ ಸುಮಾರು 49,60,164 ಜನ ರೈತರು ಅದರಲ್ಲಿ ಇ -ಕೆವೈಸಿ ಮಾಡಿಸಿಕೊಂಡ ರೈತರ ಸಂಖ್ಯೆ 45,46,622 ಜನ ರೈತರು, ಇನ್ನೂ ಬಾಕಿ ಇರುವ ಕೆವೈಸಿ ರೈತರ ಸಂಖ್ಯೆ 4,12,945 ಜನ ರೈತರು ಅಂತ ಇಲಾಖೆ ಮಾಹಿತಿ ನೀಡಿರುತ್ತದೆ.
ಇದನ್ನೂ ಓದಿ: ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರಕ್ಕೆ ಈ ಕೆಲಸ ಕಡ್ಡಾಯ !!!
How much is due in which district: ಯಾವ ಜಿಲ್ಲೆಯಲ್ಲಿ ಎಷ್ಟು ಜನರ ಕೆವೈಸಿ ಬಾಕಿ? :
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳು EKYC ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. EKYC ಮಾಡುವುದು ಬಾಕಿ ಇರುತ್ತದೆ.
EKYC ಮಾಡಿಸದೆ ಬಾಕಿ ಇರುವ ರೈತರ ಯಾದಿಯನ್ನು ಜಿಲ್ಲೆಯ ಮತ್ತು ತಾಲೂಕಗಳ ಸಂಬಂದ ಪಡುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗಿದೆ. ಅರ್ಹ ಫಲಾನುಭವಿಗಳು ಆಧಾರ ಕಾರ್ಡ ಹಾಗೂ ಆಧಾರ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಹತ್ತಿರದ ಕೃಷಿ ಇಲಾಖೆಗೆ, ಅಥವಾ ಗ್ರಾಮ್ ಓನ್, CSC (Common Service Centres )ಕರ್ನಾಟಕ ಓನ್, Karnataka One centres ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿರುತ್ತದೆ.
ಸೂಚನೆ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿ ರೈತರು ಮರಣ ಹೊಂದಿದ್ದಲ್ಲಿ ಅಂತಹ ರೈತರ ಮರಣ ದಾಖಲೆ ಹಾಗೂ ಆಧಾರ ಪ್ರತಿಯನ್ನು ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.
ವಿಶೇಷ ಮಾಹಿತಿ: ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ ಗೆ ಲಿಂಕ್ ಇಲ್ಲದೇ ಇದ್ದರೆ ಹೊಸ ಮೊಬೈಲ್ ನಂಬರ್ ಸೇರಿಸಲು ಈ ಕೆಳಗೆ ಕಾಣಿಸಿರುವ ಲಿಂಕ್ ಬಳಸಿಕೊಂಡು EKYC ಮಾಡಿಕೊಳ್ಳಬಹುದಾಗಿರುತ್ತದೆ.
ಇದನ್ನೂ ಓದಿ: ಏಳು ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ!!
PM kisan ಯೋಜನೆಯ ಅರ್ಹ ಫಲಾನುಭವಿಗಳ ಯಾದಿ :ಇಲ್ಲಿ ಓತ್ತಿ PM kisan ನಿಮಗೆ ಯೋಜನೆಯ ಅರ್ಹ ಫಲಾನುಭವಿಗಳ ಯಾದಿ ದೊರೆಯುವುದು.