ನಮಸ್ಕಾರ ರೈತರೇ, ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬುದು ಬಹಳ ಅರ್ಥಪೂರ್ಣ ವಾಕ್ಯ. ಅನ್ನ ನೀಡುವ ರೈತನಿಗೆ ದುರ್ಭಿಕ್ಷ ಇಲ್ಲವೆನ್ನುವ ಮಾತಿದೆ. ಆದರೆ, ವಾಸ್ತವ ಬೇರೆಯೇ ಇದೆ. ಕೃಷಿ ಎಂದರೆ ಸಂಕಷ್ಟ ಎದುರಿಸುವ, ಸಾಲ ಮಾಡಿ ಜೀವಕ್ಕೆ ಆಪತ್ತು ತಂದುಕೊಳ್ಳುವ ಕ್ಷೇತ್ರವೆನಿಸಿದೆ. ಇಂತಹ ಸನ್ನಿವೇಶದಲ್ಲಿ ನಾವು ಸಾಧಕ ರೈತರಿಗೆ ‘ವಿಕ ಸೂಪರ್ ಸ್ಟಾರ್ ರೈತ’ ಪ್ರಶಸ್ತಿ ನೀಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ.
ಪ್ರತಿನಿತ್ಯ ಬಿಡುವಿಲ್ಲದೆ ರಕ್ತ, ಬೆವರಿಸಿ ದುಡಿಯುವ ಅನ್ನದಾತರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯನ್ನು ಉಂಟು ಮಾಡಿದೆ. ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಷ್ಟಗಳನ್ನು ದಿಟ್ಟವಾಗಿ ಎದುರಿಸಿ, ಉತ್ತಮ ಫಸಲು ಬೆಳೆಯುತ್ತಿರುವ ಕೃಷಿಕರಿಗೆ ಸರಿ ಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ. ನಾವು ಗಾಯಕರು, ಉದ್ಯಮಿಗಳು, ಲೆಕ್ಕ ಪರಿಶೋಧಕರು, ಶೆಫ್‌ಗಳು, ವೈದ್ಯರು, ವಾಸ್ತುಶಿಲ್ಪಿಗಳೂ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡುತ್ತಾರೆ ಆದರೆ ನಮಗೆ ಅನ್ನ ನೀಡುವ ರೈತನಿಗೂ ಸನ್ಮಾನ ಮಾಡಬೇಕು ಎಂಬ ಆಶಯದಿಂದ ಕಳೆದ ಎರಡು ವರ್ಷಗಳಿಂದ ರೈತರಿಗೆ ‘ವಿಕ ಸೂಪರ್ ಸ್ಟಾರ್ ರೈತ’ ಪ್ರಶಸ್ತಿ ನೀಡಲಾಗುತ್ತಿದೆ.
ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಾದರಿ ರೈತರಿದ್ದಾಗ ಯೋಜನೆಗಳು ಯಶಸ್ವಿಯಾಗುತ್ತವೆ. ಹಾಗೆಯೇ, ರೈತರು ಮತ್ತು ವ್ಯವಸ್ಥೆ ಕೈಜೋಡಿಸಿದರೆ, ಸರಕಾರದ ಯೋಜನೆಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ. ರೈತರ ಬದುಕು ಹಸನಾಗುತ್ತದೆ. ಈಗಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನದ ಮೂಲಕ ದೇಶ – ವಿದೇಶಗಳಲ್ಲಿ ಮಾರುಕಟ್ಟೆ ಒದಗಿಸುವ ಮತ್ತು ರೈತರಿಗೆ ಬೆನ್ನೆಲುಬಾಗಿ ನಿಂತಿರುವ ವ್ಯಾಪಾರಿ ವರ್ಗವೂ ಇದೆ.
ಕೃಷಿ ಕ್ಷೇತ್ರ ಕೂಡಾ ಸೇವಾ ಕ್ಷೇತ್ರ, ಔದ್ಯಮಿಕ, ಸಾಫ್ಟ್‌ವೇರ್, ವೈದ್ಯಕೀಯ ಕ್ಷೇತ್ರದಂತೆ ಆತ್ಮಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತಾಗಬೇಕು. ಕೃಷಿ ಕ್ಷೇತ್ರದಲ್ಲಿಸಾಧನೆ ಮಾಡುವವರು ಕೂಡಾ ಸೆಲೆಬ್ರಿಟಿಗಳಂತೆ ಮಿಂಚುವ ವಾತಾವರಣ ನಿರ್ಮಾಣವಾಗಬೇಕು. ಆ ಮೂಲಕ ರೈತರ ಆತ್ಮನ್ಯೂನತಾ ಭಾವ ಕಳಚಿ ಇನ್ನಷ್ಟು ಮಂದಿ ಕೃಷಿಯೆಡೆಗೆ ಆಕರ್ಷಿತರಾಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿಆರಂಭಗೊಂಡದ್ದು ವಿಕ ಸೂಪರ್ ಸ್ಟಾರ್ ರೈತ ಅಭಿಯಾನವಾಗಿದೆ.
ಇದಕ್ಕೆ ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು?
1)ಸಮಗ್ರ ಕೃಷಿ ಅಳವಡಿಕೆ ಮಾಡಿಕೊಂಡಿರುವ ರೈತರು
2)ವಿಶಿಷ್ಟ ರೀತಿಯ ಕೃಷಿ ಮಾಡುತ್ತಿರುವ ರೈತರು
3)ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ರೈತರು
4)ಮೀನು ಸಾಕಾಣಿಕೆ,ಕುರಿ,ಆಡು,ಕೋಳಿ,ಹಸು ಸಾಕಾಣಿಕೆ ಮಾಡುತ್ತಿರುವ ರೈತರು
5)ನಿಮ್ಮ ನಿಮ್ಮ ಜಿಲ್ಲೆಯಲ್ಲಿ ಉಳಿದ ರೈತರಿಗಿಂತ ವಿಭಿನ್ನ ಕೃಷಿ ಮಾಡುತ್ತಿರುವ ರೈತರು
6)ಕಡಿಮೆ ಖರ್ಚು ಮಾಡಿ ಅಧಿಕ ಲಾಭ ಪಡೆಯುತ್ತಿರುವ ರೈತರು
7)ಕೃಷಿಯಲ್ಲಿ ವಿವಿಧ ತಂತ್ರಜ್ಞಾನಗಳ ಬಳಕೆ ಕೃಷಿ ಮಾಡುವ ರೈತರು
8)ಕೃಷಿಯಲ್ಲಿ ಸಂಶೋಧನೆ ಮಾಡಿರುವ ರೈತರು
ಸೂಪರ್ ಸ್ಟಾರ್ ರೈತ ಎಲ್ಲಿ ಅರ್ಜಿ ಸಲ್ಲಿಸಬೇಕು?
ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಇದಕ್ಕೆ ನಿಮ್ಮ ಜಿಲ್ಲೆಗಳಲ್ಲಿರುವ ವಿಜಯ ಕರ್ನಾಟಕ ಸಂಪಾದಕೀಯ ಕಛೇರಿಗಳಿಗೆ ಅರ್ಜಿ ಹಾಕಬೇಕು. ಇದರ ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ ವಿಜಯ ಕರ್ನಾಟಕ ಪತ್ರಿಕೆ ವಿತರಕ ಏಜೆಂಟ್ ಅವರಲ್ಲಿ ವಿಚಾರಿಸಿ ತಿಳಿದುಕೊಳ್ಳಬಹುದು.