Wednesday, March 12, 2025

Togari MSP- ತೊಗರಿ ಖರೀದಿಗೆ ₹450 ರೂ ಹೆಚ್ಚುವರಿ ಸಹಾಯಧನ!

ರಾಜ್ಯ ಸರ್ಕಾರದ ಅಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ತೊಗರಿ(Togari support price) ಬೆಳೆಯನ್ನು ಖರೀದಿ ಮಾಡಲು ಈಗಾಗಲೆ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ನೋಂದಣಿಯನ್ನು ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಸರ್ಕಾರವು 2024-25ನೇ ಸಾಲಿನಲ್ಲಿ ರೈತರಿಂದ ನೇರವಾಗಿ(Togari price 2025) ಖರೀದಿ ಮಾಡುವ ಪ್ರತಿ ಕ್ವಿಂಟಾಲ್ ತೊಗರಿಗೆ ರೂ.7,550/- ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದು, ತೊಗರಿ ಬೆಂಬಲ ಬೆಲೆಯ ಜೊತೆಗೆ ತೊಗರಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ₹450/- ಸಹಾಯಧನವನ್ನು ಹೆಚ್ಚಳ ಮಾಡಲು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Morarji Desai School- ವಸತಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ!

ಈ ಯೋಜನೆಯು ಕೃಷಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ತೊಗರಿಯ ಮಾರುಕಟ್ಟೆ(Togari MSP) ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯಕಾರಿಯಾಗಿದ್ದು, ತೊಗರಿಯನ್ನು ಮಾರಾಟ ಮಾಡಲು ರೈತರು ನೋಂದಣಿಯನ್ನು ಮಾಡಿಕೊಳ್ಳಲು ಬೇಕಾಗುವ ದಾಖಲೆಗಳೇನು? ಯಾವ ಕ್ರಮಗಳನ್ನು ಅನುಸರಿಸಬೇಕು? ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Purpose of this scheme-ಈ ಯೋಜನೆಯ ಉದ್ದೇಶವೇನು?

ಕೃಷಿಕರಿಗೆ ಆರ್ಥಿಕತೆಯ ಸುಧಾರಣೆ: ಈ ಸಹಾಯಧನವು ರೈತರಿಗೆ ತಮ್ಮ ಬೆಳೆಗಳ ಉತ್ತಮವಾದ ಫಲಿತಾಂಶವನ್ನು ಪಡೆಯಲು ಸಹಾಯವಾಗಿದೆ.

ಇದನ್ನೂ ಓದಿ: Krishi bhagya yojane-ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಶೇ.80% ಸಹಾಯಧನ ಕೃಷಿ ಭಾಗ್ಯ ಯೋಜನೆಯಡಿ!

ಭದ್ರತೆಯ ಸುರಕ್ಷತೆ: ರೈತರಿಗೆ ಸಂಬಂಧಿಸಿದ ಯಾವುದೇ ಬೆಳೆಗಳನ್ನು ಉತ್ತಮ ಸ್ಥಿತಿಯಲ್ಲಿ ಬೆಳೆಸಿ ಹೆಚ್ಚಿನ ಲಾಭ ಗಳಿಸಲು ಸಹಾಯಕಾರಿಯಾಗಿದೆ.

ಮಾರುಕಟ್ಟೆ ಬೆಲೆ ಸ್ಥಿತಿಗತಿ: ತೊಗರಿ ಬೆಲೆಗಳಲ್ಲಿ ಬದಲಾವಣೆಗಳನ್ನು ಕಡಿಮೆ ಮಾಡುವುದು, ರೈತರು ಉತ್ತಮ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವಾದಿಯಾಗಿದೆ.

Documents- ತೊಗರಿ ಖರೀದಿ ನೋಂದಣಿಗೆ ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರ ಆಧಾರ್ ಕಾರ್ಡ/Aadhar card
2) ಬ್ಯಾಂಕ್ ಪಾಸ್ ಬುಕ್/Bank Passbook
3) ತೊಗರಿ ಬೆಳೆದಿರುವ ಜಮೀನಿನ ಪಹಣಿ/RTC
4) ಮೊಬೈಲ್ ನಂಬರ್/Mobile number

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ಧಿ ಕಿಸಾನ್ ಸಮ್ಮಾನ್ 19ನೇ ಕಂತು ಬಿಡುಗಡೆ ದಿನಾಂಕ ಬಿಡುಗಡೆ!

Karnataka Togari Kharidi Kendra-ಯಾವ ಯಾವ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ?

ವಿಜಯಪುರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಬಾಗಲಕೋಟೆ, ವಿಜಯನಗರ, ಕೊಪ್ಪಳ ಹಾಗೂ ಬೆಳಗಾವಿ, ಚಿಕ್ಕಬಳ್ಳಾಪುರ,ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ರಾಜ್ಯಾದ್ಯಂತ ಒಟ್ಟು 300 ಕ್ಕೂ ಅಧಿಕ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

Togari Kharidi Kendra-ನಿಮ್ಮ ಜಿಲ್ಲೆಯ ತೊಗರಿ ಖರೀದಿ ಮಾಡುವ ಕೇಂದ್ರದ ಮಾಹಿತಿ ಪಡೆಯುವುದು ಹೇಗೆ?

ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಮಾರಾಟ ಇಲಾಖೆ ಕಚೇರಿ/APMC ಅನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು?

ಈ ಯೋಜನೆಯ ಮೂಲಕ ರೈತರಿಗೆ ತೊಗರಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಕೆಳಗೆ ವಿವರಿಸಲಾಗಿದೆ:

ಇದನ್ನೂ ಓದಿ:ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಅಜೋಲ್ಲಾ ಬಳಸಿ ಇಲ್ಲಿದೆ ಮಾಹಿತಿ.

  1. ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯುವುದು: ರೈತರು ತಮ್ಮ ಹತ್ತಿರದ ಸ್ಥಳೀಯ ಕೃಷಿ ಇಲಾಖೆ / ರೈತ ಸಂಘಟನೆಗಳಿಗೆ ಭೇಟಿ ಮಾಡಿ ಬೆಂಬಲ ಬೆಲೆ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆದಿರಬೇಕು.
  2. ತೊಗರಿ ಖರೀದಿಯ ಪರಿಶೀಲನೆ ಮತ್ತು ನೋಂದಣಿ: ರೈತರು ತಮ್ಮ ಬೆಳೆಗಳನ್ನು ಸ್ಥಳೀಯ ಕೃಷಿ ಇಲಾಖೆ / ರೈತ ಸಹಕಾರ ಸಂಘದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
  3. ಬೆಂಬಲ ಬೆಲೆಗೆ ತೊಗರಿ ಮಾರಾಟಕ್ಕಾಗಿ ಅಂಗಡಿಗಳೊಂದಿಗೆ ಒಪ್ಪಂದ: ರೈತರು ನಿಗದಿತ ಬೆಂಬಲ ಬೆಲೆಗೆ ತೊಗರಿಯನ್ನು ಮಾರಾಟ ಮಾಡಲು ಅರ್ಹರಾದ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಬೇಕಾದರೆ, ಸರ್ಕಾರದಿಂದ ಅವರ ಮಾರಾಟವನ್ನು ನೇರವಾಗಿ ನಿರ್ವಹಿಸಲಾಗುತ್ತದೆ.
  4. ತೊಗರಿ ಗುಣಮಟ್ಟ ಪರಿಶೀಲನೆ: ತೊಗರಿಯನ್ನು ಮಾರಾಟ ಮಾಡುವ ಮೊದಲು, ಅದರ ಗುಣಮಟ್ಟವನ್ನು ಪರಿಶೀಲಿಸಿ. ತೊಗರಿಯನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸಲು ಮತ್ತು ಸರಿಯಾದ ಪ್ರಕ್ರಿಯೆಗೆ ಅನುಗುಣವಾಗಿ ಮಾರಾಟ ಮಾಡಲು ಸಿದ್ಧಪಡಿಸಿಕೊಳ್ಳಬೇಕು.
  5. ಮಾರಾಟ ಮಾಡುವ ಪ್ರಮಾಣ ಪತ್ರಗಳು ಮತ್ತು ದಾಖಲೆಗಳು:
    ಮಾರಾಟ ಮಾಡುವ ಮೊದಲು ರೈತರು ಸರ್ಕಾರ ನೀಡಿದ ಬೆಂಬಲ ಬೆಲೆಗೆ ತೊಗರಿಯನ್ನು ಮಾರಾಟ ಮಾಡುತ್ತಿರುವುದನ್ನು ದೃಢಪಡಿಸುವ ದಾಖಲೆಗಳನ್ನು ಮತ್ತು ಪ್ರಮಾಣಪತ್ರಗಳನ್ನು ಒದಗಿಸಬೇಕು.

ಇದನ್ನೂ ಓದಿ:ಹೈನುಗಾರಿಕೆ ಎಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಬೇಕೆ? ಇಲ್ಲಿದೆ ಮಾಹಿತಿ.

Karnataka APMC Department-ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ಕೃಷಿ ಇಲಾಖೆಯ ಪ್ರಮುಖ ಸೂಚನೆಗಳು:

  • ರೈತರಿಂದ ಪ್ರತಿ ಎಕರೆಗೆ 04 ಕ್ವಿಂಟಲ್ ರಂತೆ – ಗರಿಷ್ಠ 40 ಕ್ವಿಂಟಲ್ ವರೆಗೆ ಪ್ರತಿ ರೈತರಿಂದ ಖರೀದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
  • ಅರ್ಜಿದಾರರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ FID ಸಂಖ್ಯೆಯನ್ನು ನೀಡಿ ನೊಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದು ಎಂದು ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ವಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳು

Related Articles