ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿನ(Morarji Desai Admission) 6ನೇ ತರಗತಿ ಪ್ರವೇಶಾತಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಸತಿ ಶಾಲೆಗಳು ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಮುಖವಾದ(Morarji Desai Registration) ಶಿಕ್ಷಣ ಸಂಸ್ಥೆಗಳಾಗಿದ್ದು, 1981 ರಲ್ಲಿ ಸ್ಥಾಪಿಸಿಲಾಗಿದದೆ. ಸುಮಾರು 45 ವರ್ಷಗಳಿಂದ ದೇಶಾದ್ಯಾಂತ ಆರ್ಥಿಕವಾಗಿ ಹಿಂದುಳಿದ ಮಧ್ಯಮ ಮತ್ತು ಬಡ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದೆ ಇದರ ಉದ್ದೇಶವಾಗಿದೆ.
ಇದನ್ನೂ ಓದಿ: Krishi bhagya yojane-ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಶೇ.80% ಸಹಾಯಧನ ಕೃಷಿ ಭಾಗ್ಯ ಯೋಜನೆಯಡಿ!
ಸಮಾಜದ ಎಲ್ಲಾ ವರ್ಗಗಳ ಮಕ್ಕಳಿಗೆ ಉತ್ತಮ ಮತ್ತು ಸಮಾನವಾದ ಶಿಕ್ಷಣವನ್ನು ಒದಗಿಸುತ್ತವೆ. ಸರ್ಕಾರದಿಂದ ಸಹಾಯ ಮಾಡುವ ಈ ಎಲ್ಲಾ ವಸತಿ ಶಾಲೆಗಳ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಯಾರು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಬೇಕಾದ ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Important Dates- ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 31 ಜನವರಿ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮಾರ್ಚ್ 2025
ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯದ ಮಿತಿ:
2A, 2B, 3A, 3B ವರ್ಗ:- ₹1,00,000/- ರೂ
ಹಿಂದುಳಿದ ವರ್ಗ ಪ್ರವರ್ಗದವರು-1:- ₹2,50,000/- ರೂ
ಪರಿಶಿಷ್ಟ ಜಾತಿ/ಪ.ಪ ವರ್ಗದವರು:- ₹2,50,000/- ರೂ
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ಧಿ ಕಿಸಾನ್ ಸಮ್ಮಾನ್ 19ನೇ ಕಂತು ಬಿಡುಗಡೆ ದಿನಾಂಕ ಬಿಡುಗಡೆ!

Where should apply- ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು?
- ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯನ್ನು ವ್ಯಾಸಂಗ ಮುಗಿಸಿರಬೇಕು.
- ಅಭ್ಯರ್ಥಿಯು ವಿದ್ಯಾರ್ಥಿಯ ವಯಸ್ಸು 09 ರಿಂದ 14 ವರ್ಷದವರಾಗಿರಬೇಕು.
- ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಮೊದಲ ಆದ್ಯತೆ ನೀಡುತ್ತದೆ.
Documents- ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು?
- ಆಧಾರ್ ಕಾರ್ಡ ಪ್ರತಿ/Aadhar Card
- ಜನನ ಪ್ರಮಾಣಪತ್ರ/Birth Certificate
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Cast & Income Certificate
- ಅಂಕಪಟ್ಟಿ/MarksCard
- ಶಾಲಾ ವಿವರಗಳ ಪ್ರಮಾಣಪತ್ರ/Previous Examination Certificate
- ಮೊಬೈಲ್ ನಂಬರ್/Mobile number
ಇದನ್ನೂ ಓದಿ:ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಅಜೋಲ್ಲಾ ಬಳಸಿ ಇಲ್ಲಿದೆ ಮಾಹಿತಿ.
How to apply- ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ವಿಧಾನವನ್ನು ಪಾಲನೆ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
- ಕೇಳಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
- ನಿಗದಿ ಪಡಿಸಿರುವ ಸೇವಾ ಸಿಂಧು ಪೊರ್ಟಲ್ ನ ಮೂಲಕ ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರಗಳು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಕಛೇರಿಗಳಲ್ಲಿಯೂ ಸಹ ಭೇಟಿ ಮಾಡಿ ಸಲ್ಲಿಸಬಹುದು.
More information-ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click here