Saturday, March 22, 2025

Sprinkler pipe subsidy-ಎಲ್ಲಾ ವರ್ಗದ ರೈತರಿಗೆ ಶೇ.90% ರ ಸಹಾಯಧನದಲ್ಲಿ ಸ್ಪಿಂಕ್ಲರ್ ವಿತರಣೆಗೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.

ಕೃಷಿ ಇಲಾಖೆಯಿಂದ 2024-25ನೇ ಸಾಲಿನ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ(pmksy) ಎಲ್ಲಾ ವರ್ಗದ ರೈತರಿಗೆ ಶೇ.90% ರ ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ (ಕಪ್ಪು ಪೈಪು) Sprinkler pipe ಒದಗಿಸಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೀರಿನ ಸಮಸ್ಯೆ ಮತ್ತು ನೀರನ್ನು ಮಿತವಾಗಿ ಬೆಳೆಗಳಿಗೆ ರೈತರು ತಮ್ಮ ಬೆಳೆಗಳಿಗೆ ಒದಗಿಸಲು ತುಂತುರು ನೀರಾವರಿ ಘಟಕವನ್ನು (Sprinkler pipe) ಪಡೆಯಲು ಇಲಾಖೆಯಿಂದ ಆರ್ಥಿಕ ನೆರವು ನೀಡಲು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ (ಕಪ್ಪು ಪೈಪು) Sprinkler pipe ಒದಗಿಸಲಾಗುತ್ತಿದೆ.

ರೈತರು ಈ ಯೋಜನೆಯಡಿ ಸಬ್ಸಿಡಿದರಲ್ಲಿ ಸ್ಪಿಂಕ್ಲರ್ ಸೆಟ್ (ಕಪ್ಪು ಪೈಪು) Sprinkler pipe ಅನ್ನು ಪಡೆಯಲು ಅರ್ಜಿಸಲ್ಲಿಸುವ ವಿಧಾನ ಹೇಗೆ? ರೈತರ ಪಾವತಿ/ವಂತಿಗೆ ಎಷ್ಟು ಮಾಡಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಇದನ್ನೂ ಓದಿ:ಉಚಿತ ಹೊಲಿಗೆ ಯಂತ್ರ ತರಬೇತಿ! ಯಾವೆಲ್ಲ ಯೋಜನೆಯಡಿ ಹೊಲಿಗೆ ಯಂತ್ರಕ್ಕೆ ಸಬ್ಸಿಡಿ ಲಭ್ಯ?

Sprinkler set subsidy amount- ಸ್ಪಿಂಕ್ಲರ್ ಸೆಟ್ (ಕಪ್ಪು ಪೈಪು) ಸಬ್ಸಿಡಿ ಎಷ್ಟು ನೀಡಲಾಗುತ್ತದೆ?

ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ(pmksy) ರೈತರಿಗೆ ಒದಗಿಸುವ ತುಂತುರು ನೀರಾವರಿ ಘಟಕಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ.90% ರ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತದೆ. ರೈತರು ಪೈಪು ಸರಬರಾಜು ಕಂಪನಿಯವರಿಗೆ ರೂ.4667/- ರೈತರ ವಂತಿಗೆ ಪಾವತಿಸಿದರೆ ಸಾಕು ಸ್ಪಿಂಕ್ಲರ್ ಸೆಟ್ (ಕಪ್ಪು ಪೈಪು) ಪಡೆದುಕೊಳ್ಳಬಹುದು.

Sprinkler pipes details-ಈ ಯೋಜನೆಯಡಿ ಎಷ್ಟು ಪೈಪು ಮತ್ತು ಸ್ಪಿಂಕ್ಲರ್ ಸಿಗುತ್ತದೆ ಗೊತ್ತೆ?

ಕೃಷಿ ಇಲಾಖೆಯಿಂದ (KSDA) ರೈತರಿಗೆ ನೀರಿನ ಮಿತಬಳಕೆ ಬೆಳೆಗಳಿಗೆ ನೀರನ್ನು ಒದಗಿಸಲು ಈ ಯೋಜನೆಯಡಿ ಸಹಾಯಧನದಲ್ಲಿ 30 ಪೈಪು ಮತ್ತು 5 ಜೆಟ್ಸ್, ಕ್ಲಾಂಪ್ಸ್, ಕಪ್ಲರ್ಸ್, ಎಂಡ್ ಕ್ಯಾಪ್ಸ್, ವಾಷರ್ಸ್  ಸಲಕರಣೆಗಳನ್ನು ನೀಡಲಾಗುತ್ತದೆ.

Application documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

1)ಕೃಷಿ ಇಲಾಖೆ ಅರ್ಜಿ ನಮೂನೆ

2)ರೈತರ ಜಮೀನಿನ ಪಹಣಿ/ಆರ್ ಟಿ ಸಿ

3)ಆಧಾರ್ ಕಾರ್ಡ್ ಪ್ರತಿ

4)ಬ್ಯಾಂಕ್ ಪಾಸ್ ಬುಕ್ ಪ್ರತಿ

5)100 ಛಾಪಾ ಕಾಗದ

6)1 ಫೋಟೋ

7)ಕೃಷಿ ಇಲಾಖೆಯ ಅಧಿಕಾರಿಗಳು ಹೇಳುವ ದಾಖಲೆಗಳು

ಇದನ್ನೂ ಓದಿ: ಎರೆಹುಳು ಗೊಬ್ಬರ ಮಹತ್ವ ಮತ್ತು ಪ್ರಯೋಜನಗಳು!

How to apply sprinkler pipes-ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ರೈತರು ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ(ಕೃಷಿ ಇಲಾಖೆ) ವನ್ನು ಕಛೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಸೂಚನೆ: ಒಮ್ಮೆ ಈ ಸೌಲಭ್ಯ ಪಡೆದುಕೊಂಡಿದ್ದಲ್ಲಿ 7 ವರ್ಷ ಸೌಲಭ್ಯ  ಪಡೆಯಲು ಅವರಿಗೆ ಬರುವುದಿಲ್ಲ.

ರೈತರ ಸಹಾಯವಾಣಿ (ಉಚಿತ ಕರೆ): 18004253553

ಇತ್ತೀಚಿನ ಸುದ್ದಿಗಳು

Related Articles