Thursday, September 19, 2024

ಸಿರಿಧಾನ್ಯ ಬೆಳೆದ ರೈತರಿಗೆ ಹೆಕ್ಟೇರ್‍ ಗೆ 15,000 ರೂ ಪ್ರೋತ್ಸಾಹಧನ

ಇತ್ತೀಚಿನ ದಿನಮಾನಗಳಲ್ಲಿ ರೈತರು ವಾಣಿಜ್ಯ ಬೆಳೆಗಳ ಮೊರೆ ಹೋಗಿ ಸಾಂಪ್ರದಾಯಕ ಬೆಳೆಗಳಾದ ಸಿರಿಧಾನ್ಯನ್ನು ಬೆಳೆಯುವುದು ತುಂಬಾ ಕಡಿಮೆಯಾಗಿರುವುದು ನಮ್ಮಗೆಲ್ಲಾ ಗೊತ್ತಿರುವ ವಿಚಾರ, ಸಿರಿಧಾನ್ಯ ಬೆಳೆಗಳಲ್ಲಿ ಆರೋಗ್ಯಕ್ಕೆ ಬೇಕಾದ ಹೇರಳವಾದ ಪೌಷ್ಠಿಕಾಂಶ ಹೊಂದಿರುವುದನ್ನು ಮರೆತ ರೈತಾಪಿ ವರ್ಗ ಸಿರಿಧಾನ್ಯ ಇರುವ ಆಹಾರ ಪದಾರ್ಥಗಳನ್ನು ಮಾಲ್ ಗಳಲ್ಲಿ , ಮಾರುಕಟ್ಟೆ ಖರೀದಿಸಿ ತಮ್ಮ ಆರೋಗ್ಯವನ್ನು ನಿಧಾನವಾಗಿ ಹಾಳು ಮಾಡಿಕೋಳ್ಳುತ್ತಿದ್ದಾರೆ.

ಈ ಸಾಂಪ್ರದಾಯಕ ಬೆಳೆಗಳನ್ನು ರೈತರು ಬೆಳೆದು ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರ ಜೊತೆಗೆ ಮಣ್ಣಿನ ಸತ್ವವನ್ನು ಕೂಡಾ ಸುಧಾರಿಸಲು ಸರ್ಕಾರಗಳು 2023
ನೇ ವರ್ಷವನ್ನು ಅಂತರಾಷ್ಟೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಸಿರಿಧಾನ್ಯ ಕೃಷಿ, ಸಂಸ್ಕರಣ ಘಟಕ ಸ್ಥಾಪನೆ,ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂದಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ರಾಜ್ಯದ ಹಲವಾರು ಕಡೆ ಸಾವಯುವ ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡು ರೈತರಿಗೆ ಸಿರಿಧಾನ್ಯ ಬಗ್ಗೆ ಹರಿವು ಮೂಡಿಸುವುದರ ಜೊತೆಗೆ ಬಹುಮುಖ್ಯವಾಗಿ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನವನ್ನು ಸಹ ನೀಡುತ್ತಿದೆ.

ಈ ಬೆಳೆಗಳಿಗೆ 15000 ರೂ ಸಹಾಯಧನ :

ಇದನ್ನೂ ಓದಿ: ರೈತ ಬಾಂಧವರೆ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ ಯಾವ ಪ್ರದೇಶಕ್ಕೆ ಯಾವ ಅಡಿಕೆ ತಳಿ ಸೂಕ್ತ ? ಯಾವ ಪ್ರದೇಶದಲ್ಲಿ ಏಷ್ಟು ಹೇಕ್ಟರ್‍ ಅಡಿಕೆ ವಿಸ್ತರಿಸಿದೆ??


2022-23 ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ(RKVY) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ ಸಿರಿಧಾನ್ಯ ನವಣೆ, ಹಾರಕ,ಕೊರಲೆ,ಸಾಮೆ,ಮತ್ತು ಊದಲು,ಬರಗು ಸಿರಿಧಾನ್ಯಗಳನ್ನು (ರಾಗಿ, ಸಜ್ಜೆ,ಜೋಳ,ಹೊರತುಪಡಿಸಿ) ಬೆಳೆದ ರೈತರಿಗೆ ಬೆಳೆವ ಸಮೀಕ್ಷೆ ಆಧಾರದ ಅನುಗುಣವಾಗಿ ಪ್ರತಿ ಹೇಕ್ಟೇರ್‍ ಗೆ 10,000 ರೂಪಾಯಿ ರೈತನ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ನೀಡಿ ರೈತನಿಗೆ ಪ್ರೋತ್ಸಾಹಿಸಲಾಗಿರುತ್ತದೆ..
ಇದೀಗ ಇನ್ನೂ ಹೆಚ್ಚಿನದಾಗಿ ರೈತರನ್ನು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲು ಸರ್ಕಾರ ಮುಂದಿನ ದಿನಮಾನಗಳಲ್ಲಿ ಅಂದರೆ ಮುಂದಿನ ಬಜೆಟ್ ನಲ್ಲಿ 10000/- ಸಾವಿರ ಇರುವ ಪ್ರೋತ್ಸಾಹಧನ ವನ್ನು 15000/-ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಫಲಾನುಭವಿಗಳ ಆಯ್ಕೆ (ಅರ್ಹತೆ):


*ಯೋಜನೆಯ ಫಲಾನುಭವಿಗಳು ಆಗುವರು ಜಮೀನು ರೈತರ ಹೆಸರಿನಲ್ಲಿ ಇರಬೇಕು ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆಯಬೇಕು.
*ಜಮೀನು ಕನಿಷ್ಠ 20 ಗುಂಟೆಯಾದರು ಹೊಂದಿರಬೇಕು. 1 ಹೆಕ್ಟೇರ್‍ ಗರಿಷ್ಠ .
*ಒಂದು ವೇಳೆ ಜಮೀನು ತಂದೆ ತಾಯಿಯ ಹೆಸರಿನಲ್ಲಿ ಇದ್ದರೆ ಅವರು ಮರಣ ಹೊಂದಿದ್ದರೆ ಗ್ರಾಮ ಲೆಕ್ಕಿಗರಿಂದ ದೃಡೀಕರಣ ಪತ್ರ ತೆಗೆದುಕೊಂಡು ನೀಡಬೇಕು.
*ರೈತನ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮತ್ತು ಇಲಾಖೆ ನೀಡುವ ಅರ್ಜಿ ,

  • *ಪರಿಶಿಷ್ಟ ಜಾತಿ, ಪರಿಸಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ರೈತರಿಗೆ ಹೆಚ್ಚಿನ ಆದ್ಯತೆವಿರುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೇಕ್ಟೇರ್‍ ವರೆಗೆ ಅವಕಾಶವಿದೆ
  • .
  • ಇದನ್ನೂ ಓದಿ: ಸುಜ್ಞಾನನಿಧಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ , ಯಾರಿಗೆ, ಯಾವ ಸಂಸ್ಥೆಯಿಂದ ತಿಳಿಯೋಣ??
  • ವಿ. ಸೂ: ಮುಖ್ಯವಾಗಿ ರೈತರು ಸಿರಿಧಾನ್ಯಗಳನ್ನು ಬೆಳೆದಿರಬೇಕು ಅಂತಹ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹಾಗೂ ಆ ಜಿಲ್ಲೆ ಮತ್ತು ತಾಲ್ಲೂಕು ಸಿರಿಧಾನ್ಯ ಯೋಜನೆಗೆ ಒಳಗೊಂಡಿದ್ದರೆ ಮಾತ್ರ ಇದರ ಪ್ರಯೋಜನೆ ರೈತರು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ: ತಾಲೂಕಿನ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಇತ್ತೀಚಿನ ಸುದ್ದಿಗಳು

Related Articles