Friday, November 22, 2024

ಕೇಂದ್ರ ಸರ್ಕಾರದ PM-Kisan 14 ಕಂತಿನ ಹಣ ಯಾರಿಗೆಲ್ಲಾ ಜಮಾ?? ಹಣ ಜಮಾ ಆಗಿರುವುದನ್ನು ಪರಿಶಿಲಿಸುವುದು ಹೇಗೇ??

Pradhan Mantri Kisan Samman Nidhi Yochane: ಆತ್ಮೀಯ ರೈತ ಬಾಂದವರೇ ಕೇಂದ್ರ ಸರ್ಕಾರ ದೇಶದ ಅನ್ನದಾತನ ಕೃಷಿ ಪರಿಕರಗಳ ಸಹಾಯಕ್ಕಾಗಿ ವಾರ್ಷಿಕವಾಗಿ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮುಖಾಂತರ ಕೃಷಿ ಜಮೀನು ಹೊಂದಿರುವ ಪ್ರತಿ ರೈತರ ಖಾತೆಗೆ ನಾಲ್ಕು ತಿಂಗಳಿಗೆ ಒಮ್ಮೆ 2000/- ರೂ ಅಂತೆ ವಾರ್ಷಿಕವಾಗಿ ಒಬ್ಬ ಫಲಾನುಭವಿಗಳಿಗೆ 6000/-ರೂ. ಬಿತ್ತನೆ ಬೀಜಗಳಿಗೆ, ಇನ್ನೀತರ ಕೃಷಿ ಪರಿಕರಗಳನ್ನು ಕೊಳ್ಳಲು ಸಹಾಯಧನವಾಗಿ ಕಳೆದ 01/02/2019 ನೇ ಸಾಲಿನಿಂದ ಇಲ್ಲಿವರೆಗೆ ನೀಡುತ್ತಾ ಬಂದಿರುತ್ತದೆ.

ಮುಂದುವರೆದು ದಿನಾಂಕ 27/07/2023 ರಂದು ಪಿ ಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ 14 ನೇ ಕಂತಿನ ಆರ್ಥಿಕ ನೆರವು ವರ್ಗಾವಣೆ ಮಾಡಲು ಪಿ ಎಂ ಕಿಸಾನ್ ಸಮ್ಮೇಳನ ಕಾರ್ಯಕ್ರಮವನ್ನು ದಿನಾಂಕ 27/07/2023 ರಂದು ಸಿಕರ್‍, ರಾಜಸ್ಥಾನದಲ್ಲಿ ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ತಿಳಿಸಿದೆ.

ಆತ್ಮೀಯ ರೈತ ಬಾಂದವರೇ ಯಾರಿಗೆ ಜಮಾ ಆಗಿದೇ ಹೇಗೇ ತಿಳಿಯುವುದು :

ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಲು ಮೊದಲು chrome ನಲ್ಲಿ https:/pmkisan.gov.in/ ಈ ಲಿಂಕ್ ಮೇಲೆ ಒತ್ತಿ ಈ ಒಂದು ವೆಬ್ಸೈಟ್ ಗೆ ಭೇಟಿ ನೀಡಿ ನಂತರ know your status ಆಯ್ಕೆಯ ಮೇಲೆ ಒತ್ತಿ ..
ಇದು ಆದ ನಂತರ ಫಲಾನುಭವಿಗಳ ರಿಜಿಸ್ಟ್ರೇಶನ್ನಂಬರ್‍ (GOI_Reg No KA222– ) ನಂಬರ್‍ ಹಾಕಿ ಪಕ್ಕದಲ್ಲೆ ಕಾಣುವ capture ಅನ್ನು ಯತ್ತಾವತ್ತಾಗಿ ನಮೂದಿಸಿ Get data ಮೇಲೆ ಒತ್ತಿ ನಂತರ ನಿಮಗೆ 14 ಕಂತಿನ ಹಣ ಜಮಾ ಆಗಿರುವುದು ಕಾಣುತ್ತದೆ.

ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ:

ರಾಜ್ಯ ಸರ್ಕಾರ ಹಣ ಪಾವತಿಯಾಗಿದೇ ಇಲ್ಲವೋ ಎಂದು ತಿಳಿಯಲು ರೈತರು ಅನುಸರಿಸಬೇಕಾದ ಕ್ರಮಗಳು:
1.ಮೊದಲು ನಿಮ್ಮ ಮೊಬೈಲ್ ನಲ್ಲಿchrome ನಲ್ಲಿ www.fruits pmkisan ಅಂತ ಟೈಪ್ ಮಾಡಿ.
2.ನಂತರ ಓಪನ್ ಆಗುವ ವೆಬ್ ಪೇಜ್ ನ ಡ್ಯಾಶ ಬೋರ್ಡ ನಲ್ಲಿ PM kisan,ವರದಿಗಳು,ಸ್ಥೀತಿಪರಿಶೀಲನೆ,CSC status,Get Details by Aadhar ಎನ್ನುವ ಆಯ್ಕೆ ಯನ್ನು ಕಾಣಬಹುದು.ಅದರಲ್ಲಿ Get Details by Aadhar ಆಯ್ಕೆ ಮೇಲೆ ಕ್ಲಿಕ್ ಮಾಡಿ ಆಧಾರ್‍ ನಮೂದಿಸಬೇಕು.


3.ನಂತರ ತೆರಯುವ ವೆಬ್ ಪೇಜ್ ನಲ್ಲಿ Pm kisan ID ಯನ್ನು ಬರೆದುಕೊಳ್ಳಬೇಕು.ಅಥವಾ ನಕಲು ಮಾಡಿಕೊಳ್ಳಬೇಕು.
4.ಈಗ ಪುನ: Dash Board ವೆಬ್ ಪೇಜ್ ಗೆ ಹೋಗಿ ಈ ಮೇಲೆ ತಿಳಿಸಿರುವ (Point-2) ಸ್ಥಿತಿಪರಿಶೀಲನೆ ಮಾಡಬೇಕು ಆಯ್ಕೆ ಮಾಡಿ ಬರೆದಟ್ಟುಕೊಂಡಿರುವ PM kisan ID ಯನ್ನು ನಮೂದಿಸಬೇಕು.
ಈ ಕೆಳಗೆ ಕಾಣಿಸಿರುವ ವೆಬ್ ಪೇಜ್ ಓಪನ್ ಆಗುತ್ತದೆ..

ಇದನ್ನೂ ಓದಿ: ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ:
ಅರ್ಜಿಯ ವಿವರ:

*.ಮುಖ್ಯವಾಗಿ ಪಾವತಿ ನಿಲ್ಲಿಸಲು ಕಾರಣ ಈ ಕಾಲಂ ನಲ್ಲಿ ನಮೂದಾಗಿರುವ ವಿಷಯದ ಮೇಲೆ ಅರ್ಹ ಅಥವಾ ಅನರ್ಹ ಎಂದುದನ್ನು ತಿಳಿಯಬಹುದು.
ಅರ್ಹ ಫಲಾನುಭವಿಗಳು:
*ಪಾವತಿ ನಿಲ್ಲಿಸುವ ಕಾಲಂ ಯಾವುದೇ ವಿಷಯ ನಮೂದಾಗಿರುವುದಿಲ್ಲ Blank ಇರುತ್ತದೆ.

*ಅನರ್ಹ ಫಲಾನುಭವಿಗಳು:


ಈ ಅಂಕಣದಲ್ಲಿ Ineligible After Bhoomi verification ಅಂತ ಇರುತ್ತದೆ.
2019 ರ ನಂತರ ಭೂ ಸ್ವಾಧೀನ(ಕ್ರಯ, ದಾನ,ವಿಭಾಗ, ವಿಭಜನೆ, ಭೂ ಪರಿವರ್ತನೆ ಈ ಕಾರಣ ಇರಬಹುದು)
Income Tax Pay ಕಾರಣ ಇರಬಹುದು
ಈ ಮೇಲೆ ಕಾಣಿಸಿದ ಸೂಚನೆಗಳು ಇದ್ದರೆ ಈ ಯೋಜನೆಗೆ ಅನರ್ಹರಾಗುತ್ತಾರೆ.

ಕೇಂದ್ರ ಸರಕಾರದ ಹಣ ಪಾವತಿ ಆಗಿರುವುದನ್ನು ತಿಳಿಯಲು


*ರೈತರು ತಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಬೇಕು ಅದರಲ್ಲಿ www.pmkisan.gov.in ವೆಬ್ಸೈಟ್ ಓಪನ್ ಮಾಡಿದಾಗ pmkisan.gov.in/beneficiary Status ಅನ್ನು ಆಯ್ಕೆ ಮಾಡಬೇಕು.
*ನಂತರ ನಿಮ್ಮ ಮೊಬೈಲ್ ನಂಬರ್ or ರಿಜಿಸ್ಟ್ರೇಷನ್ ನಂಬರ್ ನಮೂದಿಸಬೇಕಾಗಿರುತ್ತದೆ. ವೆಬ್ಸೈಟ್ನ ಡ್ಯಾಶ್ ಬೋರ್ಡ್ ನಲ್ಲಿಯ ಸ್ಥಿತಿಪರಿಶೀಲನೆಯಲ್ಲಿ ಪಡೆಯಬಹುದು ( )
*ಅಲ್ಲಿ ಕಾಣಿಸುವ ಕ್ಯಾಪ್ಚರ್ ನಮೂದಿಸಬೇಕು. ನಂತರ benificiary status ಓಪನ್ ಆಗುತ್ತದೆ.

ಅರ್ಹ ಫಲಾನುಭವಿಗಳು:

  1. Eligibility ಅಂಕಣ
    2.Adhar Demo Authentication Status,PFMS/Status,Land seeding, ekyc demo ಈ ಎಲ್ಲಾ ಅಂಕಣದಲ್ಲಿ yes ಅಂತ ಇದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ.

ಅನರ್ಹರಾಗಿರುವ ಫಲಾನುಭವಿಗಳಾಗಿದ್ದರೆ

  • Eligibility : no ಅಂತ ನಮುದಾಗಿರುತ್ತದೆ.
  • Adhar Demo Authentication Status: no ಅಂತ ನಮುದಾಗಿರುತ್ತದೆ.
    *PFMS / Bank status:
  1. Account details is under revalition process with bank
    2.Farmer Record has been rejected by PFMS / BANK
    3.NPCI issue is not active
  • Land Seeding – No
  • Ekyc – No
    ಈ ಮೇಲೆ ಕಾಣಿಸಿದ ಸೂಚನೆಗಳು ಕಂಡು ಬಂದರೆ ಆ ಫಲಾನುಭವಿಗಳು ಈ ಯೋಜನೆಗೆ ಅನರ್ಹರಾಗಿದ್ದಾರೆ ಎಂಬುದು ತೋರಿಸುತ್ತದೆ.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???

ಇದಷ್ಟೇ ಅಲ್ಲದೆ ಇನ್ನೂ ಕೆಲವು ಕಾರಣಗಳು ಇವೆ.

1.ಆಧಾರ್ ಕಾರ್ಡ್ ನಲ್ಲಿ ಹೆಸರು ಫೋಟೋ ವಿಳಾಸ ಮೊಬೈಲ್ ನಂಬರ್ ಬದಲಾವಣೆ ಆಗಿದ್ದರೆ ಹಣ ಬರೋದು ನಿಲ್ಲಿಸಲಾಗಿರುತ್ತದೆ.

  1. ನೋಂದಣಿ ತಂತ್ರಾಂಶಗಳಾದ pm kisaan ನಲ್ಲಿ ನೋಂದಣಿಯಾಗಿ, Fruits ನಲ್ಲಿ ನೋಂದಣಿಯಾಗದಿದ್ದರೆ ಹಣ ಜಮಾ ಆಗುವುದಿಲ್ಲ.
  2. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಗಳನ್ನು ಸಂಪರ್ಕಿಸಿ.

(ವಿಶೇಷ ಸೂಚನೆ : ಈ ಯೋಜನೆ ಫಲಾನುಭವಿಗಳು ಕಡ್ಡಾಯವಾಗಿ E -kyc ಮಾಡಿಕೊಳ್ಳಬೇಕು. ದಾಖಲೆಗಳು : ಆಧಾರ ಕಾರ್ಡ, ಆಧಾರ ಲಿಂಕ್ ಇರುವ ಮೊಬೈಲ್ ನಂಬರ್‍

ಇತ್ತೀಚಿನ ಸುದ್ದಿಗಳು

Related Articles