ನಮಸ್ಕಾರ ರೈತರೇ, ಇವತ್ತಿನ ದಿನಗಳಲ್ಲಿ ಸರಕಾರಿ ನೌಕರರು ಮಾತ್ರ ಪ್ರತಿ ತಿಂಗಳು ಹೇಗೆ ತಪ್ಪದೇ ಸಂಬಳ ಪಡೆಯುತ್ತಿದ್ದಾರೆ ಹಾಗೆ ರೈತರು ಪ್ರತಿ ತಿಂಗಳು ಆದಾಯ ಪಡೆಯುವ ಬೆಳೆ ಬೆಳೆದರೆ ಅವರಿಗೂ ಪ್ರತಿ ತಿಂಗಳು ನೌಕರರ ಹಾಗೆ ಸಂಬಳದ ರೀತಿ ಹಣ ಬರುವ ಬೆಳೆ ಇದೆ.
ಹೌದು ರೈತರೇ, ಸರಕಾರವು ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದಡಿ “ತಾಳೆ ಕೃಷಿ”(Oil palm crop) ಮಾಡಲು ರೈತರಿಗೆ ಉಚಿತವಾಗಿ ತಾಳೆ ಸಸಿಯನ್ನು ವಿತರಣೆ ಮಾಡುವುದರ ಜೊತೆಗೆ ರಸಗೊಬ್ಬರ ಬಳಕೆ, ತಾಳೆ ಬೆಳೆಯ ತಾಂತ್ರಿಕ ಸಲಹೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಈ ಬೆಳೆಯನ್ನು ಬರ ಪ್ರದೇಶದಿಂದ ಹಿಡಿದು ಹೆಚ್ಚು ಮಳೆ ಬರುವ ಪ್ರದೇಶದಲ್ಲಿ ಸಹ ಬೆಳೆಯಬಹುದು. ಈ ಬೆಳೆಗೆ ಹೆಚ್ಚಾಗಿ ಯಾವುದೇ ರೋಗ-ಕೀಟಗಳ ಭಾದೆ ಇರುವುದಿಲ್ಲ. ಯಾವುದೇ ಮದ್ಯವರ್ತಿಗಳ ಕಾಟವಿಲ್ಲ ಸರಕಾರವೇ ನೇರ ಬೆಂಬಲ ಬೆಲೆಯಡಿ ಖರೀದಿ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆ ಇರುವುದಿಲ್ಲ.
ಇದನ್ನೂ ಓದಿ:ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಉಚಿತ ರುಡ್ ಸೆಟ್ ತರಬೇತಿ! ಆಸಕ್ತರಿಂದ ಅರ್ಜಿ ಆಹ್ವಾನ.
ವಾಣಿಜ್ಯ ಬೆಳೆಯಾಗಿರುವ ‘ತಾಳೆ’ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವಂತಹ ಬೆಳೆ. ನೀರಿನ ವ್ಯವಸ್ಥೆ ಇದ್ದರೇ ಸಾಕು. ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ಧತಿ ಮೂಲಕ ತಾಳೆ ಕೃಷಿ ಮಾಡಿ ಯಶಸ್ಸು ಪಡೆದ ರೈತರು ಇದ್ದಾರೆ.
ಪ್ರತಿ ತಿಂಗಳ ಆದಾಯ ಪಡೆಯಬಹುದು!
ನಾಟಿ ಮಾಡಿದ ಮೂರು ವರ್ಷದಿಂದ ಬೆಳೆ ಆರಂಭವಾಗುತ್ತದೆ. ಸತತ 30 ವರ್ಷಗಳ ಕಾಲ ಪ್ರತಿ ತಿಂಗಳು ಸರಕಾರಿ ನೌಕರರಂತೆ ಆದಾಯ ಸಿಗುತ್ತದೆ. ಒಂದು ಎಕರೆಗೆ ವಾರ್ಷಿಕವಾಗಿ 3 ರಿಂದ 4 ಟನ್ ಇಳುವರಿ ಬರುತ್ತದೆ. ವರ್ಷವಿಡಿ ಬರುವ ಬೆಳೆ ಇದಾಗಿದ್ದು ತಿಂಗಳಲ್ಲಿ ಎರಡು ಬಾರಿ ಕಟಾವು ಮಾಡಬೇಕು.
ಕಾಲ ಕಾಲಕ್ಕೆ ನೀರು ಮತ್ತು ರಸಗೊಬ್ಬರ ಮತ್ತು ಇತರೆ ಗೊಬ್ಬರಗಳನ್ನು ನೀಡುತ್ತಿರಬೇಕು. ನಾಟಿ ಮಾಡಿದ ಒಂದು ವರ್ಷಕ್ಕೆ ಹೂ ಬಿಡಲು ಆರಂಭವಾಗುತ್ತದೆ. ಅದನ್ನು ಮೂರು ವರ್ಷದವರೆಗೆ ತೆಗೆದು ನಂತರ ಮೂರು ವರ್ಷದ ಮೇಲೆ ಹಾಗೆ ಬಿಟ್ಟರೆ ಇಳುವರಿ ಚನ್ನಾಗಿ ಬರಲು ಆರಂಭವಾಗುತ್ತದೆ. ಒಂದು ಎಕರೆಗೆ 50 ರಿಂದ 60 ಮರಗಳನ್ನು ನಾಟಿ ಮಾಡಬಹುದು. ಎರಡು ವರ್ಷದವರೆಗೆ ಅಂತರ ಬೇಸಾಯ ಸಹ ಮಾಡಬಹುದು.
ಇದನ್ನೂ ಓದಿ:ರೈತರಿಗೆ ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್ ವಿತರಣೆಗೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.
ಸರಕಾರದಿಂದ ಈ ಬೆಳೆ ಬೆಳೆಯಲು ಪ್ರೋತ್ಸಾಹಧನ ನಿಡಲಾಗುತ್ತದೆ!
ಹೌದು ರೈತರೇ, ಕೇಂದ್ರ ಸರಕಾರದ ‘ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆ(national mission of edible oils-oil palm) ಈ ಯೋಜನೆಯಡಿ ತಾಳೆ ಬೆಳೆ ಉತ್ತೇಜಿಸಲು ಹೊಸ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟರ್ ಗೆ 20,000/- ಸಹಾಯಧನ ನೀಡಲಾಗುತ್ತದೆ.
ಸೂಚನೆ: ಇನ್ನೂ ಹೆಚ್ಚಿನ ಮಾಹಿತಿ ಮತ್ತು ಸೌಲಭ್ಯ ಬಗ್ಗೆ ತಿಳಿಯಲು ನಿಮ್ಮ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ಕಛೇರಿಯನ್ನು ಭೇಟಿ ಮಾಡಿ.