ಆತ್ಮೀಯ ರೈತ ಬಾಂದವರೇ ತೋಟಗಾರಿಕೆ ಬೆಳೆಯಾದ ತಾಳೆ ಬೆಳೆಯನ್ನು ಹೊಸದಾಗಿ ಮಾಡಲು ಬಯಸುವ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ‘ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ ಯೋಜನೆ’ಯಡಿ ತಾಳೆ ಕೃಷಿಯ ವಿವಿಧ ಘಟಕಗಳಿಗೆ ಸಬ್ಸಿಡಿ ಸೌಲಭ್ಯಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಈ ಒಂದು ಯೋಜನೆಯನ್ನು ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈ.ಲಿ (3F Oil Palm Pvt. Ltd) ಇವರ ಸಹಯೋಗದಲ್ಲಿ ರೈತರಿಗೆ ಇಲ್ಲಿ ಕೆಳಗೆ ನೀಡಲಾಗಿರುವ ಸಹಾಯಧನವನ್ನು ನೀಡಲಾಗಿರುತ್ತದೆ. ಹಾಗಿದ್ದರೆ ಏನೆಲ್ಲಾ ಸಹಾಯಧನ ಇದೆ ಅಂತ ತಿಳಿಯಿರಿ.
ತಾಳೆ ಬೆಳೆ ಬಗ್ಗೆ ಮಾಹಿತಿ:
ರೈತರ ಬಾಳು ಬೆಳಗುವ ತಾಳೆ ಹೌದು, ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡತ್ತಿರುವ ಖ್ಯಾದ್ಯ ತೈಲ ಬೆಳೆಗಳಲ್ಲಿ ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೇಕ್ಟೇರಿಗೆ ಪ್ರತಿ ವರ್ಷಕ್ಕೆ 4 ರಿಂದ 6 ಟನ್‌ಗಳಷ್ಟು ತೈಲದ ಇಳುವರಿ ನೀಡುವ ಸಾಮಾರ್ಥ್ಯ ಹೊಂದಿದ್ದು, ಪ್ರಸ್ತುತ ಜಾಗತಿಕ ಖಾದ್ಯ ತೈಲ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿದೆ.
ಅಡುಗೆ-ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಅಲ್ಲದೆ ವನಸ್ಪತಿ, ಸಾಬೂನು, ಗ್ಲಿಸರಿನ್ ಮತ್ತು ಪ್ಯಾರಾಫಿನ್ ತಯಾರಿಕೆಯಲ್ಲೂ ಬಳಸುವರು. ಹಣ್ಣಿನಿಂದ ಪಾಮ್ ಎಣ್ಣೆ ಮತ್ತು ಬೀಜದಿಂದ ಪಾಮ್ ಕರ್ನಲ್ ಎಣ್ಣೆಯನ್ನು ತೆಗೆಯಲಾಗುವುದು. ಹೆಚ್ಚು ಮಳೆ ಬೀಳುವ ಹಾಗೂ ನೀರಾವರಿ ಅನುಕೂಲವಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ತಾಳೆ ಎಣ್ಣೆಯಲ್ಲಿ ಹೆಚ್ಚು ಕ್ಯಾರೊಟೀನ್ ಅಂಶವಿದ್ದು, ಇದು ಆರೋಗ್ಯಕ್ಕೆ ಉತ್ತಮ ಖಾದ್ಯ ತೈಲವೆನ್ನಬಹುದು. ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ತಾಳೆ ಬೆಳೆಯಲಾಗುತ್ತಿದೆ.
ತಾಳೆ ತಳಿ:
“ತೆನೆರಾ “ ಹೈಬ್ರಿಡ್ ತಳಿಯಾಗಿರುತ್ತದೆ.
ತಳಿಯ ವಿಶೇಷ :ಈ ತಳಿ ದಪ್ಪ ಚಿಪ್ಪನ್ನು ಹೊಂದಿರುವ ಡ್ಯೂರಾ ಮತ್ತು ಚಿಪಿಲ್ಲದ ಪಿಸಿಫೆರಾ ಎಂಬ ತಳಿಗಳ ಸಂಕರಣ ಅಂದರೆ ಹೈಬ್ರಿಡ್ ತಳಿ. ಹಣ್ಣು ತೆಳುವಾದ ಚಿಪ್ಪನ್ನು ಹೊಂದಿದ್ದು ಮಧ್ಯಮದಿಂದ ಅತಿ ಹೆಚ್ಚು ತಿರಳನ್ನು ಹೊಂದಿರುತ್ತದೆ. ಹೆಚ್ಚು ಎಣ್ಣೆ ಅಂಶ ಹೊಂದಿರುತ್ತದೆ.
ಮಲೆನಾಡು, ಕರಾವಳಿಗಿಂತ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ ಭಾಗದ ರೈತರಿಗೆ ತಾಳೆ ಕೃಷಿ ಬಾಳು ಬೆಳಗುವ ಬೆಳಕಾಗಿ ಅವತರಿಸಿದೆ. ಕಬ್ಬಿನ ಬದಲಾಗಿ ತಾಳೆ ಬೆಳೆ ಬೆಳೆಯುವುದರಿಂದ ಹೆಚ್ಚು ಲಾಭದಾಯಕ ಎನ್ನುತ್ತಾರೆ ಅಧಿಕಾರಿಗಳು. ಈ ಬೆಳೆಯನ್ನು ಸುಮಾರು 25 ವರ್ಷಗಳ ವರೆಗಿನ ಕನಿಷ್ಟ ನಿರ್ವಹಣೆಯ ಬೆಳೆಯಾಗಿದ್ದು; ಇದರಲ್ಲಿ ಅಂತರ ಬೆಳೆಯನ್ನು ಸಹ ಬೆಳೆಯಬಹುದಾಗಿರುತ್ತದೆ.
ತಾಳೆ ಎಣ್ಣೆ ಆಹಾರ ಪದಾರ್ಥ ಹಾಗೂ ಕೈಗಾರಿಕಾ ಉತ್ಪನ್ನ ಹಾಗೂ ಜೈವಿಕ ಶಕ್ತಿ ಇಂಧವಾಗಿ ಬಳಕೆ ಮಾಡುತ್ತಿರುವುದರಿಂದ ಹೆಚ್ಚು ಲಾಭ ಪಡೆಯಬಹುದಾಗಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಂಡು ಸ್ವಾವಲಂಭಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ತಾಳೆ ಬೆಳೆಗೆ ತೋಟಗಾರಿಕೆ ಇಲಾಖೆ ಮತ್ತು ಕಂಪನಿಗಳ ಸಹಕಾರ ಪಡೆದು ಉತ್ತಮ ಬೆಳೆ ಬೆಳೆಯಲು ರೈತರು ಮುಂದಾಗಬೇಕಿದೆ.
ತಾಳೆ ಬೆಳೆ ಉತ್ತೇಜನ ಯೋಜನೆ:
ಇನ್ನು ತಾಳೆ ಬೆಳೆ ಉತ್ತೇಜನ ಯೋಜನೆ ಅಡಿಯಲ್ಲಿ ನೀರಾವರಿ ವ್ಯವಸ್ಥೆ ಹೊಂದಿರುವ ಜಮೀನುಗಳಲ್ಲಿ ತಾಳೆ ಬೆಳೆಯನ್ನು ಬೆಳೆದರೆ ಪ್ರತಿ ಎಕ್ಟರ್‌ಗೆ 20,000 ರೂಪಾಯಿ ಸಹಾಯಧನವನ್ನು
ಸರ್ಕಾರದಿಂದ ಪಡೆಯಬಹುದಾಗಿರುತ್ತದೆ.
ಅಷ್ಟೇ ಅಲ್ಲದೇ ಈ ಯೋಜನೆಯಡಿ ವಿದ್ಯುತ್ ಪಂಪ್ ಸೆಟ್ ಖರೀದಿಗಾಗಿ 22,500, ರೂ, ಮತ್ತು ಕೊಳವೆ ಬಾವಿಗೆ 50,000, ರೂ, ಹಾಗೂ ಕಟಾವು ಮಾಡುವ ಚಾಫ್ ಕಟ್ಟರ್ ಯಂತ್ರ ಖರೀದಿಗಾಗಿ 50,000 ರೂ. ಸೇರಿ ಇತರೆ ಪ್ರೋತ್ಸಾಹ ಧನವನ್ನು ಕೂಡಾ ಅನುಕೂಲಗಳು ಲಭ್ಯ ಇರುತ್ತವೆ.
ಹಾಗಾದರೆ ಈ ಯೋಜನೆಯಡಿ ಏನೆನು ಸೌಲಭ್ಯಗಳು ದೊರೆಯಲಿವೆ?
ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಇತರೆ ಮಾಹಿತಿಯ ಲೇಖನಗಳು:
ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???
ತಾಳೆ-ಬೆಳೆ ಬೆಳೆಯಲು ರೈತರಿಗೆ ಶೇಕಡ 100ರಷ್ಟು ಅಂದರೆ ಉಚಿತ ತಾಳೆ ಸಸಿಗಳಿಗೆ ಸಹಾಯಧನದಲ್ಲಿ ನೀಡಲಾಗುತ್ತದೆ, ಮೊದಲನೇ ವರ್ಷದಿಂದ ನಾಲ್ಕನೇ ವರ್ಷದ ವರೆಗೆ ಬೆಳೆ ನಿರ್ವಹಣೆಗೆ ಮತ್ತು ಅಂತರ ಬೇಸಾಯಕ್ಕೆ ಶೇ.50ರಂತೆ ಸಹಾಯಧನ ಕೂಡಾ ದೊರೆಯಲಿದೆ.
ಡೀಸಲ್ ಪಂಪಸೆಟ್, ಹನಿ ನೀರಾವರಿ, ಕೊಳವೆ ಬಾವಿ, ನೀರು ಸಂಗ್ರಹಣಾ ಘಟಕ (ಕೃಷಿ ಹೊಂಡ), ಎರೆಹುಳು ಗೊಬ್ಬರ ಘಟಕ, ಮೋಟರೈಜ್ ಚೀಸಲ್, ತಾಳೆ ಹಣ್ಣು ಕಟಾವು ಏಣಿ, ಚಾಪ್ ಕಟ್ಟರ್, ಎತ್ತರವಾದ ಮರಗಳಿಂದ ಹಣ್ಣು ಕಟಾವು ಮಾಡುವ ಉಪಕರಣಗಳಿಗೆ ಸಹಾಯಧನದ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಕಾಲಕಾಲಕ್ಕೆ ಸಲಹೆ, ಮಾರುಕಟ್ಟೆ ವ್ಯವಸ್ಥೆ ಸರ್ಕಾರದಿಂದ ಅನುಮೋದಿತ 3F Oil Palm Pvt. Ltd ಕಂಪನಿಯು ತಾಳೆ-ಬೆಳೆ ಬೆಳೆಯುವ ರೈತರ ಜಮೀನಿಗೆ ಕಾಲಕಾಲಕ್ಕೆ ಭೇಟಿ ನೀಡಿ ಬೆಳೆ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ಮತ್ತು ಹಣ್ಣು ಕಟಾವು ಮಾಡುವ ಕುರಿತು ಮಾಹಿತಿ ನೀಡುತ್ತಾರೆ.
ವಿಶೇಷವಾಗಿ ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಅಂದರೆ ತಾಳೆ ಬೆಳೆ ಬೆಳೆದ ರೈತರ ತಾಳೆಯನ್ನು ಕಂಪನಿಯವರೇ ತಾಳೆ ಹಣ್ಣುಗಳನ್ನು ಖರೀದಿಸುವುದರಿಂದ ಮಾರುಕಟ್ಟೆಯ ಬಗ್ಗೆ ರೈತರಲ್ಲಿ ಯಾವುದೇ ಗೊಂದಲದ ಮನೆಮಾಡುವುದಿಲ್ಲ .
ಹೆಚ್ಚಿನ ಮಾಹಿತಿಗಾಗಿ:
ಆಸಕ್ತ ರೈತರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು ಮತ್ತು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
3ಎಫ್ ಆಯಿಲ್ ಪಾಮ್ ಪ್ರೈ.ಲಿ ಕಂಪನಿ ಟೋಲ್ ಫ್ರೀ ಸಹಾಯವಾಣಿ :1800 425 800 00 ಹೆಚ್ಚಿನ ಮಾಹಿತಿಗೆ: +91 40 4431 1999, +91 40 4431 1777
ವಿಶೇಷ ಸೂಚನೆ ಸರ್ಕಾರದ ಅನುದಾನ ಅನುಗುಣವಾಗಿ ಫಲಾನುಭವಿಗಳಿಗೆ ಯೋಜನೆ ದೊರೆಯುವುದು.