Thursday, September 19, 2024

Mushroom Cultivation Training: ಅಣಬೆ ಕೃಷಿ ತರಬೇತಿ ಜೊತೆಗೆ ಉಚಿತ ಅಣಬೆ ಬೀಜ ಮತ್ತು ಪ್ರೋಟಿಂಗ್ ಬ್ಯಾಗ್ ವಿತರಣೆ

Mushroom Cultivation Training: ಅಣಬೆ ಕೃಷಿ ತರಬೇತಿ ಜೊತೆಗೆ ಉಚಿತ ಅಣಬೆ ಬೀಜ ಮತ್ತು ಪ್ರೋಟಿಂಗ್ ಬ್ಯಾಗ್ ವಿತರಣೆ
ತರಬೇತಿ ಕಾರ್ಯಗಾರ ನಡೆಯುವುದು ಎಲ್ಲಿ? ತರಬೇತಿಯಲ್ಲಿ ದೊರೆಯುವ ಮಾಹಿತಿ ಮತ್ತು ಲಾಭವೇನು?

ಗ್ರಾಮೀಣ ಭಾಗದ ಯುವ ಕೃಷಿಕರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಾದರೆ ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಂಡು,ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಆದಾಯ ತರುವಂತಹ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದರಿಂದ ಹಾಗೂ ಸದಸ್ಯರ ಆರೋಗ್ಯಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಭೂರಹಿತ ಕಾರ್ಮಿಕರು, ನಿರುದ್ಯೋಗಿ ಯುವಕ-ಯುವತಿಯರು ಮತ್ತು ಮಹಿಳೆಯರು ಅತೀ ಕಡಿಮೆ ಖರ್ಚಿನಲ್ಲಿ ಲಭ್ಯವಿರುವಷ್ಟು ಜಾಗದಲ್ಲಿಯೇ ಕೃಷಿಗೆ ಪೂರಕವಾಗಿ ಅಣಬೆ ಬೇಸಾಯದಿ೦ದ ಹೆಚ್ಚಿನ ಆದಾಯ ಪಡೆಯಬಹುದಾಗಿದೆ.ಅದಕ್ಕಾಗಿ ಈ ಲೇಖನದಲ್ಲಿ ಮುಖ್ಯವಾಗಿ ಅಣಬೆ ಬೇಸಾಯ ಪ್ರಾಮುಖ್ಯತೆ ಮತ್ತು ತರಬೇತಿ, ಹಾಗೂ ಇನ್ನಿತರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಮಾಹಿತಿ ನೀಡಿರುತ್ತೇವೆ ಮಾಹಿತಿ ಇಷ್ಟವಾದರೇ ನಿಮ್ಮ ಹತ್ತಿರದ ಸ್ನೇಹಿತರಿಗೂ ಹಂಚಿಕೊಳ್ಳಿ.

ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:

ಅಣಬೆ ತನ್ನದೇ ಆದ ಸುವಾಸನೆಯನ್ನು ಹೊಂದಿರುವ ಒಂದು ಅತ್ಯುತ್ತಮ ವಾದ ಆಹಾರ. ಇದನ್ನು ದಿನನಿತ್ಯದ ಆಹಾರದ ಜೊತೆಯಲ್ಲಿ ಬಳಸಿದರೆ ಆಹಾರದ ಪೌಷ್ಠಿಕಾಂಶವನ್ನು ಹೆಚ್ಚಿಸಬಹುದು. ಅಣಬೆ ಕೇವಲ ಸೇವಿಸಲಿಕ್ಕೆ ಮಾತ್ರ ಯೋಗ್ಯ ವೆಂದು ತಿಳಿಯಬೇಡಿ. ಇದು ಇತರ ಉದ್ದಿಮೆಗಳಲ್ಲಿಯೂ ಸಹಪ್ರಾಮುಖ್ಯತೆಯನ್ನು ಪಡೆದಿದೆ. ಇದು ಅನೇಕ ಔಷಧಿಗಳ ತಯಾರಿಕೆಯಲ್ಲಿ ಗಿಡಮೂಲಿಕೆಯಾಗಿ ಬಳಸಲ್ಪಡುತ್ತದೆ.

ಅಣಬೆಯಿಂದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ದಿನನಿತ್ಯ ಸೇವಿಸುವುದರ ಜೊತೆಗೆ ಕೆಲವೊಂದು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಹಾಗಾಗಿ ಅಣಬೆ ಬೇಸಾಯ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲದೇ ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು, ಆರ್ಥಿಕ ಸಬಲತೆಯನ್ನು ಹೊಂದಲು ಉತ್ತಮ ಮಾರ್ಗ ಎಂದು ಹೇಳಿದರೆ ತಪ್ಪಾಗಲಾರದು.

ಇಷ್ಟೇಲ್ಲಾ ಬಹು ಉಪಯೋಗಿ ಅಣಬೆ ಕೃಷಿಯನ್ನು ಮಾಡಲು ತರಬೇತಿ ಮುಖ್ಯವಾಗಿ ಬೇಕಾಗಿರುತ್ತದೆ. ಈ ತರಬೇತಿಗೆ ಭಾಗವಹಿಸಿದರೆ ಏನೇಲ್ಲಾ ಕಲಿಯಬಹುದು ಅಂತ ಕೆಳಗೆ ವಿವರಿಸಲಾಗಿದೆ.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

ಕಾರ್ಯಾಗಾರ (ತರಬೇತಿ) ಏನೆಲ್ಲಾ ಕಲಿಯಬಹುದು?

ಅಣಬೆ ಕೃಷಿ ಬಗ್ಗೆ ಸಂಪೂರ್ಣ ವಿವರ

ಅಣಬೆ ಘಟಕ ಮತ್ತು ವಿನ್ಯಾಸದ ಪರಿಚಯ

ಆರಂಭಿಕ ಹಂತದ ಮಾಹಿತಿ(ಹುಲ್ಲು ಕಟಾವು,
ಚೀಜದ ಬಗ್ಗೆ

ಪ್ರಾಯೋಗಿಕ ಬ್ಯಾಗ ಫಿಲ್ಡಿಂಗ್‌ ತರಬೇತಿ

ಅಣಬೆ ಬೀಜದ ಬಗ್ಗೆ ಮಾಹಿತಿ

ಡಾರ್ಕ್ ರೂಂ ಬಗ್ಗೆ ವಿವರಣೆ, ಕಾರ್ಡ ರೂಂ ನಂತರದ ಪದ್ದತಿ

ಕಟಾವಿನ ಹಂತದ ತಿಳಿವಳಿಕೆ (ಕಟಾವು, ಪ್ಯಾಕಿಂಗ್ ಬಗ್ಗೆ)

ಮಾರುಕಟ್ಟೆ ಬಗ್ಗೆ ಅರಿವು, ಅಭ್ಯರ್ಥಿಗಳಿಗೆ ಕಿಟ್ ವಿತರಣೆ

ಅಣಬೆ ಕೃಷಿ ಕಾರ್ಯಗಾರದಲ್ಲಿ ಇಲ್ಲಿ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ತಿಳಿಸಲಾಗುತ್ತದೆ.

ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:

ಅಣಬೆ ಕೃಷಿಯಲ್ಲಿ ಲಾಭಗಳು:

ಅತ್ಯಂತ ಕಡಿಮೆ ಬಂಡವಾಳ ಸಾಕು
ಒಂದು ರೂ. ಹೂಡಿಕೆಗೆ ನಾಲ್ಕು ರೂ. ಲಾಭ ಕೊಡುವ ಕೃಷಿ
ಸಣ್ಣ ರೂಮ್ ನಲ್ಲೂ ಕೃಷಿ ಆರಂಭಿಸೋಕೆ ಸಾಧ್ಯ.
ಈ ಕೃಷಿಯಲ್ಲಿ ನಿರಂತರ ಆದಾಯ ಗಳಿಸೋಕೆ ಅನುಕೂಲ
ಅಗತ್ಯಕ್ಕೆ ತಕ್ಕಂತೆ ವೈವಿದ್ಯಮಯ ತಳಿಗಳು ಲಭ್ಯ.

ಅಣಬೆ ಕೃಷಿ ಭಾಗವಹಿಸಿದ ಆಸಕ್ತರಿಗೆ ಉಚಿತ ಕೊಡುಗೆ:

ಈ ಅಣಬೆ ಕೃಷಿಗೆ ಭಾಗವಹಿಸಿದ ಆಸಕ್ತರಿಗೆ ತರಬೇತಿದಾರರು ಉಚಿತವಾಗಿ ಒಂದು ಕೆ,ಜಿ, ಅಣಬೆ ಬೀಜ ಮತ್ತು 2 ಪ್ರೊಟಿಂಗ್ ಬ್ಯಾಗ್ ನೀಡುವರು.

ಕಾರ್ಯಾಗಾರದಲ್ಲಿ ಭಾಗವಹಿಸಲು ಶುಲ್ಕ:


ಈ ಅಣಬೆ ಕಾರ್ಯಗಾರದ ಶುಲ್ಕ ಇರುತ್ತದೆ. ಜೊತೆಗೆ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ (ಶುಲ್ಕ 2499/-) ರೂ. ಒಳಗೊಂಡಿರುತ್ತದೆ.

ನೋಂದಣಿಗೆ ಕೊನೆಯ ದಿನಾಂಕ:


ಅಣಬೆ ಕೃಷಿಗೆ ನೋಂದಣಿ ಮಾಡಲು ಕೊನೆಯ ದಿನಾಂಕ 05/10/2023 .

ತರಬೇತುದಾರರ ಪರಿಚಯ:


ಮಹೇಶ ಕೋಲೂರು ಮುಧೋಳ ತಾಲೂಕಿನ ಯಡವಟ್ಟಿ ಗ್ರಾಮ, ಎರಡು ವರ್ಷದಿಂದ ಅಣಬೆ ಬೇಸಾಯ ಮಡುತ್ತಿದ್ದಾರೆ.ಅಲ್ಲದೆ ಅಣಬೆಯಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಈಗಾಗಲೇ ನೂರಾರು ಜನರಿಗೆ ಅಣಬೆ ಕೃಷಿ ಬಗ್ಗೆ ತರಬೇತಿಯನ್ನು ನೀಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮಹೇಶ ಕೋಲೂರು ತರಬೇತಿದಾರರು ದೂರವಾಣಿ ಸಂಖ್ಯೆ: 9663261657,9901484150.

ಇತ್ತೀಚಿನ ಸುದ್ದಿಗಳು

Related Articles