ನಮಸ್ಕಾರ ರೈತರೇ, ಕೇಂದ್ರ ಸರಕಾರವು ರೈತರು ಒಂದು ಊರಿಂದ ಇನ್ನೊಂದು ಊರಿಗೆ ದುಡಿಯಲು ವಲಸೆ ಹೋಗುವುದನ್ನು ತಡೆಯಲು ಮತ್ತು ಗ್ರಾಮೀಣ ಬಡ ಜನರಿಗೆ ತಮ್ಮ ಗ್ರಾಮದಲ್ಲೇ ಕನಿಷ್ಠ 100 ದಿನಗಳ ಉದ್ಯೋಗ ನೀಡುವ ಸಲುವಾಗಿ ಈ ಯೋಜನೆಯನ್ನು ಸ್ಥಾಪನೆ ಮಾಡಲಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಬೇಡಿಕೆ ಇರುವವರು ತಮ್ಮ ಹತ್ತಿರದ ಗ್ರಾಮ ಪಂಚಾಯತ್ ಮೂಲಕ ನರೇಗಾ ಕಾರ್ಡ್(ಜಾಬ್ ಕಾರ್ಡ್) ಮಾಡಿಸಬೇಕು. ಈ ಕಾರ್ಡ್ ಮೂಲಕ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡುವ ವ್ಯವಸ್ಥೆ ಇದರಲ್ಲಿ ಇರುತ್ತದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ಹಿಂದೆ ಕೂಲಿ ಮೊತ್ತವು 349 ರೂಪಾಯಿ ಹಾಕಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಎಪ್ರಿಲ್ 01, 2025 ರಿಂದ 370 ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ದುಡಿಯುವ ಬಡ ಕುಟುಂಬಗಳಿಗೆ ಆರ್ಥಿಕ ನೆರವಾಗಲಿದೆ.
ಇದನ್ನೂ ಓದಿ:ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!
JOB card-ಉದ್ಯೋಗ ಚೀಟಿ ಎಲ್ಲಿ ಮಾಡಿಸಬೇಕು ಮತ್ತು ಮಾಡಿಸಲು ಬೇಕಾಗುವ ದಾಖಲೆಗಳು:
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉದ್ಯೋಗ ಚೀಟಿಯನ್ನು ನಿಮ್ಮ ಗ್ರಾಮ ಪಂಚಾಯತ್ ಗಳಲ್ಲಿ ಮಾಡಿಸಬಹುದು. ಬೇಕಾಗುವ ದಾಖಲೆಗಳ ಮಾಹಿತಿಯನ್ನು ಗ್ರಾಮ ಪಂಚಾಯತ್ ಭೇಟಿ ಮಾಡಿ ಪಂಚಾಯತ್ ಸಿಬ್ಬಂದಿಗಳಲ್ಲಿ ವಿಚಾರಿಸಿ.
Mgnrega work-ಯಾವೆಲ್ಲ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು.
1)ತೆರೆದ ಬಾವಿ ರಚನೆ
2)ಕೃಷಿ ಹೊಂಡ/ಕೆರೆ ರಚನೆ
3)ಇಂಗು ಗುಂಡಿ ರಚನೆ
4)ಕುರಿ/ಆಡು ಶೆಡ್ ರಚನೆ
5) ದನದ ಕೊಟ್ಟಿಗೆ ರಚನೆ
6)ಹಂದಿ ಶೆಡ್ ರಚನೆ
7)ಕೋಳಿ ಶೆಡ್ ರಚನೆ
8)ದ್ರವ ತ್ಯಾಜ್ಯ/ಬಚ್ಚಲು ಗುಂಡಿ ರಚನೆ
9)ಎರೆಹುಳು ತೊಟ್ಟಿ ರಚನೆ
ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಕಪ್ಪು ಟಾರ್ಪಾಲ್ ಪಡೆದುಕೊಲ್ಳುವ ವಿಧಾನ ಮತ್ತು ದಾಖಲೆಗಳು!
10)ಅಡಿಕೆ ಪುನಶ್ಚೇತನ ಕಾಮಗಾರಿ
11) ತೆಂಗು ಕೃಷಿ ಕಾಮಗಾರಿ
12)ಅಡಿಕೆ ಕೃಷಿ ಕಾಮಗಾರಿ
13)ಕೈತೋಟ ಕೃಷಿ
14)ವಿವಿಧ ಹಣ್ಣಿನ ಬೆಳೆಗಳ ತೋಟದ ಕಾಮಗಾರಿ
15)ತೋಟದ ಬದುಗಳ ನಿರ್ಮಾಣದ ಕಾಮಗಾರಿ
16)ಬಸಿಗಾಲುವೆ ಕಾಮಗಾರಿ
ಇನ್ನೂ ಹೆಚ್ಚಿನ ಮಾಹಿತಿಗೆ ಹತ್ತಿರದ ಗ್ರಾಮ ಪಂಚಾಯತ್ ಭೇಟಿ ಮಾಡಿ ವಿಚಾರಿಸಬಹುದು.