Friday, September 20, 2024

ಮುಂದಿನ 24 ಗಂಟೆ ಭಾರೀ ಮಳೆ, ಯಲ್ಲೋ ಅಲರ್ಟ ನೀಡಿದ ಹವಾಮಾನ ಇಲಾಖೆ:ಯಾವ ಜಿಲ್ಲೆಯಲ್ಲಿ ಮಳೆ ಸಾಧ್ಯತೆ? ಹಿಂಗಾರು ಮಳೆ ಆರಂಭ ಯಾವಾಗ?

ಆತ್ಮೀಯ ರೈತ ಬಾಂದವರೇ ಜೂನನಿಂದ ಆರಂಭವಾದ ಮಳೆ ಈ ವರ್ಷ ಬಹುತೇಕ ಯಾವುದೇ ಜಿಲ್ಲೆಯಲ್ಲಿ ಹಿಂದಿನ ವರ್ಷಕ್ಕೆ ಹೊಲಿಕೆ ಮಾಡಿದರೆ ವಾಡಿಕೆಗಿಂತ ಮಳೆ ಕಡಿಮೆ. ಮುಂಗಾರು ಮಳೆ ಕೊನಗೊಳ್ಳಲು ಈ ತಿಂಗಳು ಕೊನೆಯದಾಗಿದೆ. ಬಳಿಕ ಹಿಂಗಾರು ಮಳೆಯ ಋತು ಆರಂಭವಾಗಲಿದೆ. ಈ ಕೊನೆಯ ತಿಂಗಳ ಮುಂಗಾರು ಮಳೆ ಯಾವ ಜಿಲ್ಲೆಯಲ್ಲಿ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳಲ್ಲಿ ಈ ಆರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:
ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:

ಹೆಚ್ಚು ಮಳೆ (ಯಲ್ಲೋ ಅಲರ್ಟ) ಬರುವ ಜಿಲ್ಲೆಗಳು

ಒಳನಾಡು ಜಿಲ್ಲೆಗಳಾದ ಕಲಬುರಗಿ, ಬೀದರ್, ವಿಜಯಪುರ, ಯಾದಗಿರಿ, ರಾಮನಗರ ಮತ್ತು ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಲಿದ್ದು, ಹಳದಿ ಎಚ್ಚರಿಕೆ ಘೋಷಿಸಲಾಗಿದೆ. ಇದೇ ವೇಳೆ ಇನ್ನಿತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಸಾಧಾರಣವಾಗಿ ಮಳೆ ಬರಲಿದೆ ಎಂದು ಮಾಹಿತಿ.

ಮುನ್ಸೂಚನೆ ಪ್ರಕಾರ, ಸೆಪ್ಟೆಂಬರ್ 29ರವರೆಗೆ ರಾಜ್ಯದ ವಿವಿಧೆಡೆ ಮುಂಗಾರು ಸಕ್ರಿಯವಾಗಿರಲಿದೆ. ಸೆಪ್ಟೆಂಬರ್ 29ರಂದು ಗುಡುಗು, ಮಿಂಚು ಗಾಳಿ ಸಹಿತ ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ಜೂನ್‌ನಿಂದ ಆರಂಭವಾದ ಮುಂಗಾರು ಋತು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಇದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇದಾದ ಬಳಿಕ ಹಿಂಗಾರು ಮಳೆಯ ಋತು ಆರಂಭವಾಗಲಿದ್ದು, ಈ ಮಧ್ಯೆ ರಾಜ್ಯಾದ್ಯಂತ ಬಿರುಗಾಳಿ ಸಹಿತಿ ವ್ಯಾಪಕ ಮಳೆ ಬರುವ ಸಂಭವ ಇದೆ ಎನ್ನಲಾಗಿದೆ.

ಸಾಧಾರಣ ಮಳೆಯ ಜಿಲ್ಲೆಗಳು ಯಾವವು?


ಹಳದಿ (ಯಲ್ಲೋ ಅಲರ್ಟ) ಎಚ್ಚರಿಕೆ ಪಡೆದ ಜಿಲ್ಲೆಗಳ ಹೊರತುಪಡಿಸಿದರೆ ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ್ಳ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಇನ್ನೂ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 29ರವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ತಾಪಮಾನದಲ್ಲಿ ಮತ್ತಷ್ಟು ಇಳಿಕೆ ಆಗಲಿದ್ದು, ಗರಿಷ್ಠ ತಾಪಮಾನ 29-28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ, ನಗರದ ಕೆಲವೆಡೆ ತುಂತುರು, ಇನ್ನೂ ಹಲವೆಡೆ ಜೋರು ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇದನ್ನೂ ಓದಿ: 2019 ರ ಹಿಂದಿನ ವಾಹನಗಳಿಗೆ ಈ ನಿಯಮ ಕಡ್ಡಾಯ!!!
ಇದನ್ನೂ ಓದಿ: “ಸ್ವಾವಲಂಬಿ ಸಾರಥಿ” ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನ ಅರ್ಜಿ ಆಹ್ವಾನ
ಇದನ್ನೂ ಓದಿ: Aditya Birla Capital Scholarship- ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!
ಇದನ್ನೂ ಓದಿ: ಈ ಮೂರು ಯೋಜನೆಯಡಿ ವಿದ್ಯಾರ್ಥಿವೇತನ 2,35,000/- ರೂ ಇಂದೇ ಅರ್ಜಿ ಸಲ್ಲಿಸಿ.

ಇತ್ತೀಚಿನ ಸುದ್ದಿಗಳು

Related Articles