Friday, September 20, 2024

ಬೆಳೆವಿಮೆ ತಿರಸ್ಕೃತಗೊಂಡ ಬಗ್ಗೆ ರೈತರು ಆಕ್ಷೇಪಣಾ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ??ತಿರಸ್ಕೃತಗೊಳ್ಳಲು ಕಾರಣವೇನು?

ಆತ್ಮೀಯ ರೈತ ಬಾಂದವರೇ 2022-23 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ತಾಲೂಕಿನ ರೈತರು ಪೈಕಿ ಕೆಲವು ರೈತರ ಪ್ರಸ್ತಾವನೆಗಳು ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ ಎಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಎಮ್. ಎಸ್. ಕುಲಕರ್ಣಿ ಪ್ರಕಟಣೆ ತಿಳಿಸಿದ್ದಾರೆ.

ಬೆಳೆ ವಿಮೆ ತಿರಸ್ಕೃತಗೊಳ್ಳಲು ಕಾರಣ :ಯಾವ ಕಾರಣಕ್ಕೆ ವಿಮಾ ಮೊತ್ತ ಜಮಾ ಮಾಡಿರುವುದಿಲ್ಲ?


ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು ಬೆಳೆಯ ಸಮೀಕ್ಷೆ ವಿವರದೊಂದಿಗೆ ಬೆಳೆ ಹೋಲಿಕೆ ಮಾಡಿದ ನಂತರ ತಾಳೆಯಾಗದ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ಕೆಲ ಕಾರಣ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕಂಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮೆ ಮಾಡಿರುವುದಿಲ್ಲ.

ತಿರಸ್ಕೃತಗೊಂಡ ರೈತರು ಯಾದಿಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಲ್ಲಿ ಪ್ರದರ್ಶಿಸಲಾಗಿದೆ. ವಿಮೆ ಅರ್ಜಿಗಳು ತಿರಸ್ಕೃತಗೊಂಡ ಬಗ್ಗೆ ಸಂಬಂಧಪಟ್ಟ ರೈತರ ಆಕ್ಷೇಪಣೆಯಿದ್ದಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ 2022-23 ಪಹಣಿ ಪತ್ರಿಕೆ,ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ ಪರಿಶೀಲಿಸಲಾಗುವುದು.

ವಿಮೆಗೆ ನೋಂದಾಯಿಸಿದ ಬೆಳೆಯ ಉತ್ಪನ್ನವನ್ನು APMC ಮಾರುಕಟ್ಟೆ ಮಾರಾಟ ಮಾಡಿದ್ದಲ್ಲಿ ದಾಖಲೆ ಪರಿಶೀಸಲಾಗುವುದು ಇವುಗಳಲ್ಲಿ ಯಾವುದಾದರೂ ಒಂದು ಸೂಕ್ತ ದಾಖಲೆಗಳನ್ನು ಇದೆ ತಿಂಗಳು ಆಗಷ್ಟ 11 ರೊಳಗಾಗಿ ಆಕ್ಷೇಪಣಾ ಸಲ್ಲಿಸಬಹುದಾಗಿದೆ. ರೈತರಿಂದ ಯಾವುದೇ ಆಕ್ಷೇಪಣಾ ಅರ್ಜಿಗಳು ಸ್ವೀಕೃತವಾಗದೆ ಇದ್ದಲ್ಲಿ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಹಾಯಕ ಕೃಷಿ ನಿರ್ದೇಶಕರು ಎಮ್. ಎಸ್. ಕುಲಕರ್ಣಿ ಪ್ರಕಟಣೆ ತಿಳಿಸಿದ್ದಾರೆ.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???

ವಿಶೇಷ ಮಾಹಿತಿ ನಿಮಗಾಗಿ: ಇದೇ ರೀತಿ ಎಲ್ಲಾ ಜಿಲ್ಲೆಯ ರೈತರು ಬೆಳೆ ವಿಮೆ ತಿರಸ್ಕೃತಗೊಂಡ ಬಗ್ಗೆ ಆಕ್ಷೇಪಣೆ ಇದ್ದರೆ ತಮ್ಮ ತಾಲೂಕಿನ ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆಯನ್ನು ಮತ್ತು ಬೆಳೆವಿಮೆ ಪ್ರೀಮಿಯಮ್ ಪಾವತಿಸಿದ ಸಹಕಾರಿ ಸಂಘಗಳನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ನಮಸ್ಕಾರ ಪ್ರಿಯ ಆತ್ಮೀಯ ರೈತ ಬಾಂಧವರೇ 2022-23ರ ಬೆಳೆವಿಮೆ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.

ಬೆಳೆ ವಿಮೆ ಯೋಜನೆಯಡಿ 2022-23ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಿಗೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು ಯಾರನ್ನು ಸಂಪರ್ಕಿಸಬೇಕು ಎಂಬುದನ್ನುಮೇಲಿನ ಲೇಖನದಲ್ಲಿ ನಿಮ್ಮಗೆ ತಿಳಿಸಲಾಗಿದೆ.

ಯಾವ ಕಾರಣಕ್ಕೆ ವಿಮಾ ಮೊತ್ತ ಜಮಾ ಮಾಡಿರುವುದಿಲ್ಲ?


ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು ಬೆಳೆಯ ಸಮೀಕ್ಷೆ ವಿವರದೊಂದಿಗೆ ಬೆಳೆ ಹೋಲಿಕೆ ಮಾಡಿದ ನಂತರ ತಾಳೆಯಾಗದ ಕೆಲ ಕಾರಣ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕಂಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮೆ ಮಾಡಿರುವುದಿಲ್ಲ. ಹಾಗಿದ್ದರೆ ನಿಮ್ಮ ಬೆಳೆವಿಮೆ ಹಂತವನ್ನು ಕೆಳಗೆ ಕಾಣಿಸಿದ ರೀತಿ ಪರಿಕ್ಷಿಸಬಹುದು??

ಇದನ್ನೂ ಓದಿ: ಕೃಷಿ ಉತ್ಪಾದನಾ ಬಹುಮಾನ ಯೋಜನೆಯಿಂದ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ:

ಬೆಳೆ ವಿಮೆ ಸ್ಟೇಟಸ್ ನೋಡುವ ವಿಧಾನ? How to Check Crop Insurance Status:

ಈ ಕೆಳಗೆ ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ- https://www.samrakshane.karnataka.gov.in/

ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ

1)ವರ್ಷ 2022- 2023
2))ಋತು

3)ಮುಂದೆ/go ಬಟನ್ click ಮಾಡಿ ಅದಾದ ನಂತರ ಓಪನ್ ಆಗುವಂತಹ ಹೊಸ ಪುಟದಲ್ಲಿ,

ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:-https://www.samrakshane.karnataka.gov.in/publichome.aspx

ಇಲ್ಲಿ ನಿಮಗೆ ನಿಮ್ಮ ಬೆಳೆ ವಿಮೆ ಯಾವ ಪರಿಸ್ಥಿತಿಯಲಿದೆ ಅಂತ ತಿಳಿಯಬಹುದು.

ಇತ್ತೀಚಿನ ಸುದ್ದಿಗಳು

Related Articles