ನಮಸ್ಕಾರ ರೈತ ಮಿತ್ರರೇ ಇಂದು ಜಮೀನಿನ ಪಹಣಿಯಲ್ಲಿ(Land RTC) ಒಂದಕ್ಕಿಂತ ಹೆಚ್ಚಿನ ಮಾಲೀಕರನ್ನು ಹೊಂದಿರುವ ಪಹಣಿಯಿಂದ ಮಾಲೀಕರ ಹೆಸರುಗಳನ್ನು ಪ್ರತ್ಯೇಕ ಮಾಡಿ ಏಕ ಮಾಲೀಕತ್ವ(Land Joint Owner) ಪಹಣಿಯನ್ನು ಮಾಡಿಸಲು ರೈತರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಪಹಣಿಯಲ್ಲಿ ಒಂದಕ್ಕಿಂತ ಹೆಚ್ಚಿನ ಮಾಲೀಕರು ಇದ್ದಲ್ಲಿ ಅಂತಹ ಜಮೀನಿನ ಖಾತೆಗೆ ಜಂಟಿ ಖಾತೆ(Land Records) ಎಂದು ಕರೆಯುತ್ತಾರೆ ಇದರಿಂದ ಸರಕಾರಿ ಯೋಜನೆಯ ಪ್ರಯೋಜನವನ್ನು ಪಡೆಯಲು, ಬ್ಯಾಂಕ್(Bank) ನಿಂದ ಸಾಲವನ್ನು ಪಡೆಯಲು ಮತ್ತು ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅರ್ಜಿ ವಿಲೇವಾರಿ ಸಮಯದಲ್ಲಿ ಕೆಲವೊಮ್ಮೆ ತೊಂದರೆ ಉಂಟಾಗುತ್ತದೆ ಈ ಕ್ರಮಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಲು ಏಕ ಮಾಲೀಕತ್ವದ ಪಹಣಿಯನ್ನು ಪಡೆಯುವುದು ಅತ್ಯಗತ್ಯವಾಗಿದೆ.
ಏಕ ಮಾಲೀಕತ್ವದ ಪಹಣಿಯನ್ನು ಪಡೆಯಲು ರೈತರು ಅರ್ಜಿ ಸಲ್ಲಿಸುವುದು ಹೇಗೆ? ಏಕ ಮಾಲೀಕತ್ವ ಪಹಣಿಯ ಪ್ರಯೋಜನಗಳೇನು? ಇದಕ್ಕಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:ಬೇಸಿಗೆ ಸಮಯದಲ್ಲಿ ಬಿಸಿಲಿನಿಂದ ತೋಟಗಾರಿಕೆ ಬೆಳೆಗಳ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ.
Tatkal Podi-ತತ್ಕಾಲ್ ಪೋಡಿ ಎಂದರೇನು?
ರೈತರು ತಮ್ಮ ಪಹಣಿಯಲ್ಲಿ ಕಾಲಂ ನಂಬರ್ 9ರನ್ನು ಗಮನಿಸಿದಾಗ, ಹಲವಾರು ರೈತರ ಹೆಸರನ್ನು ಗಮನಿಸಬಹುದು. ಇದರ ಅರ್ಥ ಜಮೀನನ್ನು ಹಂಚಿಕೊಂಡಿದ್ದಾರೆ ಒಂದು ಮತ್ತು ಅವರ ವಿಸ್ತೀರ್ಣ ತಕ್ಕಂತೆ ಅವರ ಕಬ್ಜಿಯಲ್ಲಿ ರೈತರಿಗೆ ಈಗಾಗಲೇ ತಮ್ಮ ಹೊಲವನ್ನು ಇಟ್ಟುಕೊಂಡಿರುತ್ತಾರೆ. ಅದರ ಅಳತೆ ಮಾಡಿಲ್ಲ ಮತ್ತು ಪ್ರತಿ ರೈತರ ವಿಸ್ತೀರ್ಣಕ್ಕೆ ತಕ್ಕಂತೆ ನಕ್ಷೆ ಕೂಡ ಇರೋದಿಲ್ಲ. ಇದನ್ನೇ ಸರಿ ಪಡಿಸಿಕೊಂಡು ಪ್ರತ್ಯೇಕ ನಕ್ಷೆಯೊಂದಿಗೆ ಹೊಸ ಏಕ ಮಾಲಿಕತ್ವದ ಪಹಣಿ ಪಡೆದುಕೊಳ್ಳುವುದಕ್ಕೆ ತತ್ಕಾಲ ಪೋಡಿ ಎಂದು ಕರೆಯಬಹುದು. ನೀವು ಸಾಗುವಳಿ ಮಾಡುತ್ತಿರುವ ಜಮೀನಿನ ಭಾಗಗಳನ್ನು ಅಳತೆ ಮಾಡಿ ನಕ್ಷೆ ರಚಿಸಿ, ಹೊಸ ಏಕ ಮಾಲಿಕತ್ವದ ಪಹಣಿ ಮಾಡುವ ಕ್ರಮಕ್ಕೆ ತತ್ಕಾಲ ಪೋಡಿ ಎಂದು ಕರೆಯುತ್ತಾರೆ.
ಉದಾಹರಣೆಗೆ ಸರ್ವೆ ನಂಬರ್ 100 ಇಟ್ಟು ಕೊಂಡರೆ ಇದರಲ್ಲಿ 1,2,3,4,5 ಕ್ರಮವಾಗಿ ಹಿಸ್ಸಾ ಸಂಖ್ಯೆ ಇರುತ್ತವೆ. ಪ್ರತಿಯೊಂದು ಹಿಸ್ಸಾ ನಂಬರ್ ಗಳಿಗೂ ಪ್ರತ್ಯೇಕವಾದ ಪಹಣಿ ಹೊಂದಿವೆ, ಇಲ್ಲಿ ಐದು ಹಿಸ್ಸಾ ಸಂಖ್ಯೆ ಅಡಿಯಲ್ಲಿ ಕೂಡ ಒಂದೇ ಪಹಣಿ ಇರುತ್ತದೆ. ಆದರೆ 5 ಹಿಸ್ಸಾ ಸಂಖ್ಯೆಯಲ್ಲಿ ಎರಡು ಜನರು ಅನುಮೋದನೆಯಲ್ಲಿ ಇದ್ದಾರೆ. ಎರಡು ಜನರದು ಪ್ರತ್ಯೇಕವಾದ ಪಹಣಿ ಇರುವುದಿಲ್ಲ. ಆದರೆ ಒಂದೇ ಪಹಣಿಯಲ್ಲಿ ಎರಡು ಜನ ರೈತರ ಹೆಸರು ಒಂದೇ ಪಹಣಿಯಲ್ಲಿ ಬಂದಿರುತ್ತದೆ.
ಜೊತೆಗೆ ಜಮೀನಿನ ವಿವರ ಕೂಡ ಒಂದೇ ಪಹಣಿಯಲ್ಲಿ ಇರುತ್ತದೆ. ಈ ಎರಡೂ ರೈತರ ಹೆಸರಿನಲ್ಲಿ ಪ್ರತ್ಯೇಕವಾಗಿ ಪಹಣಿ ಬರಬೇಕೆಂದು ಅಂದರೆ ಅವರು ತಾತ್ಕಾಲ್ ಪೋಡಿ ಮುಖಾಂತರ ಪ್ರತ್ಯೇಕವಾದ ಪಹಣಿ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.
Tatkal Podi Application-ತಾತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಯೊಂದಿಗೆ ಸಂಬಂಧಪಟ್ಟ ಹೋಬಳಿಯಲ್ಲಿ ಬರುವ ನಾಡಕಚೇರಿಗೆ ಹೋಗಿ ಅರ್ಜಿ ಕೊಟ್ಟು ರಶೀದಿ ಪಡೆಯಬೇಕು. ನಿಗದಿ ಪಡಿಸಿದ ದಿನಾಂಕದಂದು ನಿಮ್ಮ ಜಮೀನಿಗೆ ಭೂ ಮಾಪಕರು ಬಂದು ನಿಮ್ಮ ಜಮೀನನ್ನು ಪಹಣಿಯಲ್ಲಿ ಇರುವ ವಿಸ್ತೀರ್ಣಕ್ಕೆ ಮೀರದಂತೆ ಅಳತೆ ಮಾಡಿ ನಕ್ಷೆ ರಚಿಸಿ ಮುಂದಿನ ಕ್ರಮಕ್ಕೆ ಭೂಮಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು. ಭೂಮಿ ಕೇಂದ್ರದಲ್ಲಿ ಕಡತವನ್ನು ರೆವೆನ್ಯೂ ಇನ್ಸಪೆಕ್ಟರ್ ಅವರು ಪರಿಶೀಲಿಸಿ ಅನುಮೋದಿಸುತ್ತಾರೆ. ತದ ನಂತರ ಪೋಡಿ ಆಗಿರುವ ಜಮೀನಿಗೆ ಟಿಪ್ಪಣಿ, ಅಟ್ಲಾಸ್, ಆಕಾರಬಂದ್, ಫಾರ್ಮ ನಂ 10 ತಯಾರಿಸಿ, ರೆಕಾರ್ಡ್ಸ್ ತಯಾರಿ ಮಾಡುತ್ತಾರೆ.
ಈ ರೀತಿ ಜಮೀನುಗಳಿಗೆ ರೆವಿನ್ಯೂ ರೆಕಾರ್ಡ್ ತಯಾರಿ ಆಗುತ್ತದೆ. ನಂತರ ಜಮೀನನ್ನು ವಿಭಾಗ ಮಾಡಿ ಜಮೀನು ಹಂಚಿಕೆ ಆಗುತ್ತದೆ. ನಿಮ್ಮ ಜಮೀನಿಗೆ ಹೊಸ ಹಿಸ್ಸಾ ನಂಬರ್ ಮತ್ತು ಹೊಸ ನಕ್ಷೆ ಸಹಿತ ಏಕ ಮಾಲಿಕತ್ವದ ಪಹಣಿ ಸಿಗುತ್ತದೆ.
Tatkal Podi ನಿಯಮ–ತಾತ್ಕಾಲ್ ಪೋಡಿಯ ಉದ್ದೇಶಗಳು ಮತ್ತು ನಿಯಮಗಳು:
ಯಾವುದೇ ಕಾರಣಕ್ಕೂ ಹೆಸರು ತಿದ್ದುಪಡಿ ಅಥವಾ ಹೆಸರು ಸೇರ್ಪಡೆಯಾಗಲಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ ಇಲ್ಲಿ ಕೇವಲ ನಿಮ್ಮ ಭಾಗಕ್ಕೆ ಬಂದಿರುವ ಜಮೀನಿನ ಭಾಗಕ್ಕೆ ನಕ್ಷೆ ಮಾಡಿ ಹೊಸ ಹಿಸ್ಸಾ ನಂಬರ್ ಕೊಡುವುದರಿಂದ ಜಮೀನಿಗೆ ನೊಂದಣಿ ಮಾಡುವ ಅವಶ್ಯಕತೆ ಇರುವುದಿಲ್ಲ. ತಾತ್ಕಾಲ್ ಪೋಡಿಯ ಮೂಲಕ ನಿಮ್ಮ ನಿಮ್ಮ ಹೊಸ ಪಹಣಿ ಪಡೆಯಬೇಕೆಂದರೆ ಕಾಲಂ ನಂಬರ್ 9 ರಲ್ಲಿ ಬರುವ ಉಳಿದ ಎಲ್ಲಾ ರೈತರು ಒಪ್ಪಿಗೆ ಸಹಿ ಹಾಕಬೇಕು. ಒಂದೇ ಅರ್ಜಿಯಲ್ಲಿ ಉಳಿದ ರೈತರು ಒಪ್ಪಿ ಸಹಿ ಮಾಡಿದರೆ ಅವರ ಪಾಲಿನ ಭಾಗಕ್ಕೂ ಹೊಸ ನಕ್ಷೆ ರಚಿಸಿ ಹೊಸ ಏಕ ಮಾಲಿಕತ್ವದ ಪಹಣಿ ಮಾಡುತ್ತಾರೆ.
ಇದನ್ನೂ ಓದಿ: ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!
ತಾತ್ಕಾಲ್ ಪೋಡಿಯ ಅರ್ಜಿಯ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ರೂ. 1200 ಪ್ರತಿ ಎಕರೆಗೆ ಇರುತ್ತದೆ. ಎಕರೆ ಜಾಸ್ತಿಯಾದಂತೆ ಶುಲ್ಕ ಗರಿಷ್ಠ ರೂ. 4000 ಆಗುತ್ತದೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ಅನ್ವಯಿಸುವ ಜಮೀನುಗಳಿಗೆ ಎಕರೆಗೆ ರೂ. 2000 ದಿಂದ 5000 ಆಗಬಹುದು. ಮುಖ್ಯವಾಗಿ ನಿಮ್ಮ ಜಮೀನಿನ ಹಕ್ಕು ಬದಲಾವಣೆ ಆಗುವುದಿಲ್ಲ. ನಿಮ್ಮ ಜಮೀನಿಗೆ ಅನುಭವದ ಆಧಾರದ ಮೇಲೆ ಜಮೀನಿಗೆ ಬೌಂಡರಿ ಹಾಕಿ ಪಹಣಿ ಪ್ರತ್ಯೇಕವಾಗುತ್ತದೆ.
RTC Single Owner Benefits-ಏಕ ಮಾಲೀಕತ್ವ ಪಹಣಿಯ ಪ್ರಯೋಜನಗಳೇನು?
1) ಬೆಳೆ ಸಾಲ(Crop Loan) ಪಡೆಯಲು ಅನುಕೂಲ
2) ಬೆಳೆ ಹಾನಿಯಾದ ಸಮಯದಲ್ಲಿ ಬೆಳೆ ಹಾನಿ ಪರಿಹಾರ(Crop Loss Amount), ಬೆಳೆ ವಿಮೆ ಪರಿಹಾರ(Bele Vime parihara) ಪಡೆಯಲು ಸಹಕಾರಿಯಾಗಿದೆ.
3) ಆಸ್ತಿಯನ್ನು ಮಾರಾಟ(land sale) ಮಾಡಲು ಸಹ ಈ ಕ್ರಮ ಅತೀ ಅವಶ್ಯಕವಾಗಿದೆ.
4) ಜಮೀನ ಮಾಲೀಕತ್ವದ(Land ownership) ವಿಷಯದಲ್ಲಿ ಉದ್ಬವಿಸುವ ಗೊಂದಲಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬಹುದು.