ರೈತ ಬಾಂದವರೇ ಇತ್ತೀಚಿನ ದಿನಮಾನಗಳಲ್ಲಿ ರೈತನಿಗೆ ವ್ಯವಸಾಯ ಮಾಡಲು (ಕೃಷಿ) ಮಾಡಲು ಈ ಕೂಲಿಗಳ ಕೊರತೆ ಬಹಳ ಕಾಡುತ್ತಿರುವುದು ನಮಗೆ ಗೊತ್ತಿರುವ ಸಂಗತಿ ಇದರ ಕೊರತೆ ನಿಗಿಸಲು ರೈತ ಯಂತ್ರಗಳ ಮೊರೆ ಹೋಗುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸಕಾರ ಮತ್ತು ಕೇಂದ್ರ ಸರ್ಕಾರ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಗೆ ಅನೇಕ ಯೋಜನೆಗಳನ್ನು ಪ್ರತಿ ವರ್ಷ ಜಾರಿಗೆ ತರುತ್ತಿದೆ.
ಉದ್ದೇಶ: ರೈತರು ತಮಗೆ ಬೇಕಾದ ಸಮಯದಲ್ಲಿ ಅವಶ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವುದು ಮತ್ತು ಕೃಷಿ ಯಂತ್ರೋಪಕರಣಗಳ ಪರಿಪೂರ್ಣ ಸಾಮರ್ಥ್ಯವನ್ನು ಕೃಷಿ ಬಳಕೆಗೆ ಉಪಯೋಗಿಸುವುದು ಕೃಷಿ ಯಂತ್ರಧಾರೆ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
“ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ”
ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ಚಾರಿಟೆಬಲ್ ಟ್ರಸ್ಟ್/ಸರ್ಕಾರೇತರ ಸಂಸ್ಥೆಗಳ ಕೃಷಿ ಯಂತ್ರೋಪರಣ ತಯಾರಕ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಮೊಬೈಲ್ನಲ್ಲಿ ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ನಂತರ ನಿಮಗೆ ಬೇಕಾದ ಕೃಷಿ ಯಂತ್ರ ಉಪಕರಣಗಳನ್ನು ನಿಮ್ಮ ಮನೆಗೆ ಬರುವಂತೆ ಬಾಡಿಗೆಗಾಗಿ ನೇರವಾಗಿ ನಿಮ್ಮ ಮನೆಗೆ ಕರೆಸಿಕೊಳ್ಳಬಹುದು.
ಇದನ್ನೂ ಓದಿ: ಕೃಷಿ ಇಲಾಖೆ ವತಿಯಿಂದ ರಾಗಿ ಕ್ಲೀನಿಂಗ್ ಮಶೀನ್ ಮಿನಿ ಎಣ್ಣೆ ಗಾಣ, ತುಂತುರು ನೀರಾವರಿ ಘಟಕ, ಸಂಸ್ಕರಣ ಯಂತ್ರ ಪಡೆಯಲು ಅರ್ಜಿ ?
Application link:
ಲಿಂಕ್ ಗಾಗಿ ಇಲ್ಲಿ ಓತ್ತಿ:
ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ
ಕೃಷಿ ಸಂಸ್ಕರಣಾ ಘಟಕಗಳನ್ನು ರೈತರಿಗೆ, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ/ರೈತ ಗುಂಪುಗಳಿಗೆ/ ಸರ್ಕಾರೇತರ ಸಂಸ್ಥೆಗಳಿಗೆ ಸಾಮಾನ್ಯ ಯೋಜನೆಯಡಿ ಶೇ.50ಕ್ಕೆ ಮೀರದಂತೆ ಸಹಾಯಧನವನ್ನು ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ಬೇಳೆ ಮಾಡುವ ಯಂತ್ರ, ಹಿಟ್ಟಿನ ಗಿರಣಿ, ಸಣ್ಣ ರೈಸ್ ಮಿಲ್, ಎಣ್ಣೆ ತೆಗೆಯುವ ಯಂತ್ರ, ರಾಗಿ ಕ್ಲೀನಿಂಗ್ ಮಷಿನ್ ಶುಗರ್ ಕೇನ್ ಕ್ರಶಿಂಗ್ ಯೂನಿಟ್(ಬೆಲ್ಲದಗಾಣ), ಪಲ್ವರೈಸರ್ಗಳು(ಸುಧಾರುತ ಹಿಟ್ಟಿನ ಗಿರಣಿ), ರವಾ/ಕ್ಯಾಟಲ್ ಫೀಡ್ ಮಷಿನ್ (ರವೆ ಮತ್ತು ಪಶು ಆಹಾರ ತಯಾರಿಸುವ ಯಂತ್ರ), ಶಾವಿಗೆ ಮಷಿನ್, ಶುಗರ್ಕೇನ್ ಜ್ಯೂಸ್ ಮೇಕಿಂಗ್ ಮಷಿನ್ ಹಾಗೂ ರಾಗಿ ಮತ್ತು ಗೋದಿ ಪಾಲಿಷರ್ಗಳನ್ನು ಕೃಷಿ ಯಂತ್ರೋಪಕರಣಗಳ ದರ ಕರಾರಿನಲ್ಲಿ ಹೊರಡಿಸಿರುವ ದರಪಟ್ಟಿಯನ್ವಯ ನೀಡಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರುಗಳಿಗೆ ಶೇ.90 ಅಥವಾ ಗರಿಷ್ಟ ರೂ.1.00 ಲಕ್ಷದವರೆಗೆ ಹಾಗೂ ರೂ.5.00 ಲಕ್ಷದವರೆಗೆ ಇರುವ ಕೃಷಿ ಸಂಸ್ಕರಣಾ ಘಟಕಗಳನ್ನು ನೋಂದಾಯಿತ ರೈತ ಗುಂಪುಗಳಿಗೆ ಸಹಾಯಧನದಲ್ಲಿ ವಿತರಿಸಲಾಗುವುದು. ಕೃಷಿ ಉತ್ಪನ್ನಗಳನ್ನು ಮಳೆಯಿಂದ ಸಂರಕ್ಷಿಸಲು ಹಾಗೂ ಸಕಾಲದಲ್ಲಿ ಒಣಗಿಸಲು ಐದು ದರಗಳುಳ್ಳ 250 GSM-HDPE ಕಪ್ಪು ಬಣ್ಣದ 8 ಮೀ X6 ಮೀ ಅಳತೆಗಳ ಟಾರ್ಫಾಲಿನ್ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50 ಸಹಾಯಧನದಡಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರುಗಳಿಗೆ ಶೇ.90ರ ರಿಯಾಯತಿ ದರದಲ್ಲಿ ನೀಡಲಾಗವುದು.
ಇನ್ನೂ ಹೆಚ್ಚಿನದಾಗಿ ಹೇಳುದಾದರೆ ಬಿತ್ತನೆಯಿಂದ ಕಟಾವಿನವರೆಗೂ ರೈತರಿಗೆ ಬೇಕಾದ ಎಲ್ಲಾ ಕೃಷಿ ಉಪಕರಣಗಳು ಈ ಯಂತ್ರಧಾರೆಯಲ್ಲಿ ಸಿಗುವ ಅವಕಾಶ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಹತ್ತಿರದ ಕೃಷಿ ಯಂತ್ರಧಾರೆ ಮತ್ತು ಕೃಷಿ ಇಲಾಖೆ ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.